ನವದೆಹಲಿ, ಜೂ. ೨೮: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಬಹುತೇಕ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಕೇಂದ್ರ ಸರ್ಕಾರ ಕೋವಿಡ್ ಬಾಧಿತ ವಲಯಗಳಿಗೆ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಕೋವಿಡ್-೧೯ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಕೋವಿಡ್ ಬಾಧಿತ ವಲಯಗಳಿಗೆ ೧.೧ ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಆರೋಗ್ಯ ವಲಯಕ್ಕೆ ೫೦,೦೦೦ ಕೋಟಿ ರೂಪಾಯಿ, ಇತರ ವಲಯಗಳಿಗೆ ೬೦,೦೦೦ ಸಾವಿರ ಕೋಟಿ ರೂಪಾಯಿ, ೧.೫ ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್, ಮೈಕ್ರೋಫೈನಾನ್ಸ್ ಮೂಲಕ ೨೫ ಲಕ್ಷ ಮಂದಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ. ೧೧,೦೦೦ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಗೈಡ್‌ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಶೇ.೧೦೦ರಷ್ಟು ಸರ್ಕಾರಿ ಶೂರಿಟಿಯೊಂದಿಗೆ ೧೦ ಲಕ್ಷ ರೂಗಳ ವರೆಗೆ ಸಾಲ ಒದಗಿಸಲಾಗುತ್ತದೆ, ೫ ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ, ಹೊಸ ಸಾಲವನ್ನು ಕೇಂದ್ರೀಕರಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆ, ಮಧ್ಯಸ್ಥಗಾರರು ಮತ್ತು ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ. ಈ ಯೋಜನೆ ೨೦೨೨ ರ ಮಾರ್ಚ್ ೩೧ ರವರೆಗೆ ಅನ್ವಯವಾಗಲಿದೆ, ಆತ್ಮನಿರ್ಭರ ಭಾರತ್ ರೋಜ್ಗರ್ ಯೋಜನೆಯ ವಿಸ್ತರಣೆಯನ್ನು ಸರ್ಕಾರ ಪ್ರಕಟಿಸಿದೆ, ಮಕ್ಕಳು ಮತ್ತು ಮಕ್ಕಳ ಆರೈಕೆಯ ಬಗ್ಗೆ ಪ್ರಾಥಮಿಕ ಗಮನಹರಿಸಿ ಸಾರ್ವಜನಿಕ ಆರೋಗ್ಯಕ್ಕಾಗಿ ೨೩,೨೨೦ ಕೋಟಿ ರೂ ಘೋಷಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.