ಕೊಡ್ಲಿಪೇಟೆ, ಜೂ. ೨೮: ಇಲ್ಲಿನ ಕೆ.ಸಿ.ವಿ.ಟಿ. ವ್ಯಾಲೆಂಟಿಯರ್ ಟೀಂ ಸದಸ್ಯರುಗಳು ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ವಾರ್ಡ್ನಲ್ಲಿ ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದರೊಂದಿಗೆ ಕುಟುಂಬಸ್ಥರ ಪಲ್ಸ್ ಪರಿಶೀಲನೆ, ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ಹಾಗೂ ಕೋವಿಡ್ ಲಸಿಕೆಗಳ ಮಾಹಿತಿಗಳನ್ನು ತಿಳಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಹೋಗುವವರನ್ನು ಥರ್ಮಲ್ ಸ್ಕಾö್ಯನರ್ ಮೂಲಕ ತಪಾಸಣೆ ನಡೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ವ್ಯಾಲೆಂಟಿಯರ್ ತಂಡದ ನಾಯಕ ಇಫ್ತಿಕಾರ್, ಸದಸ್ಯರುಗಳಾದ ಆಸಿಫ್, ಜಾಬೀರ್, ರಯೀಸ್ ಇತರರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.