ಮಡಿಕೇರಿ ಜೂ. ೨೮: ಮೌಂಟೇನ್ ಎಂಬ ಪುಂಡಾನೆಯನ್ನು ಸೋಮವಾರ ಎರಡನೇ ಬಾರಿಗೆ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಸೆರೆ ಹಿಡಿಯಲಾಗಿದೆ. ದುಬಾರೆಯ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು. ಅಲ್ಲದೆ ಈ ಆನೆಯನ್ನು ಪಳಗಿಸುವದಕ್ಕೋಸ್ಕರ ಇಂದು ದುಬಾರೆ ಆನೆ ಶಿಬಿರಕ್ಕೆ ಲಾರಿಯಲ್ಲಿ ತರಲಾಯಿತು. ಜೂನ್À ೧ ರಂದು ಕೊಡಗಿನ ಕೊಳಕೇರಿ ಗ್ರಾಮ ಮೂಲದ ಕಲಿಯಂಡ ಬಿದ್ದಯ್ಯ (೭೪) ಎಂಬವರು ಸಕಲೇಶಪುರದಲ್ಲಿ ಈ ಪುಂಡಾನೆಯ ಧಾಳಿಗೆ ಆಹುತಿಯಾಗಿದ್ದರು. ಸಕಲೇಶಪುರದಲ್ಲಿ ಅವರು ಪ್ಲಾಂಟೇಶನ್ ಮಾಡಿಕೊಂಡಿದ್ದರು. ಇದೇ ರೀತಿ ಎರಡು ಪುಂಡಾನೆಗಳೂ ಬಿದ್ದಯ್ಯ ಅವರೂ ಸೇರಿದಂತೆ ಸಕಲೇಶಪುರ ಹಾಗೂ ಹಾಸನ ಜಿಲ್ಲೆಗಳ ಐವರನ್ನು ಆಗಿಂದಾಗೆ ನಡೆಸಿದ ಧಾಳಿಯಲ್ಲಿ ಆಹುತಿ ತೆಗೆದುಕೊಂಡಿದ್ದವು. ಅಂತಿಮವಾಗಿ ಬಿದ್ದಯ್ಯ ಅವರ ಸಾವಿನ ಬಳಿಕ ಸಕಲೇಶಪುರ ಹಾಗೂ ಹಾಸನ ಅರಣ್ಯ ಇಲಾಖೆ ಅಧಿಕಾರಿಗಳು ಛಲ ತೊಟ್ಟು ಪುಂಡಾಟದ ಎರಡು ಸಲಗಗಳಾದ ಮೌಂಟೇನ್ ಮತ್ತು ಗುಂಡ- ಈ ಇಬ್ಬರನ್ನೂ ಜೂ. ೧೦ ರಂದು ಸಕಲೇಶಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದರು. ಆದರೆ, ಅವುಗಳನ್ನು ಪಳಗಿಸುವ ಬದಲು ಕಾಡಿಗೆ ಬಿಡಲು ತೀರ್ಮಾನಿಸಿದ ಅರಣ್ಯಾಧಿಕಾರಿಗಳು ಎರಡು ಗಜಗಳ ಕುತ್ತಿಗೆಗೆ ಕಾಲರ್ ಯಂತ್ರ ಅಳವಡಿಸಿ ಎಂ.ಎA. ಹಿಲ್ಸ್ಗೆ ಬಿಡಲಾಗಿತ್ತು. ಆ ಪೈಕಿ ಗುಂಡ ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದುಬಿಟ್ಟ. ಆದರೆ ಮತ್ತೊಂದು ಪುಂಡಾನೆ ಮೌಂಟೇನ್ ಸುಮ್ಮನಿರಲಿಲ್ಲ. ಪುನ: ಅಭ್ಯಾಸ ಬಲದಿಂದ ಮಾನವರ ಮಧ್ಯೆಯೇ ನುಗ್ಗಿ ಬರಲು ಕಾಡು ಮೇಡು ಅಲೆದು ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದಕ್ಕೆ ಪ್ರವೇಶಗೈದ.

ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಹಲಗೂರು ಮಾರ್ಗದ ಮೂಲಕ ಶಿಂಷಾ ನದಿಯಲ್ಲಿ ಸಾಗಿ ಬಂದ ಈ ಆನೆ ಕೂಳಗೆರೆ ಗ್ರಾಮದ ಬಳಿ ಕಾಣಿಸಿಕೊಂಡಿತ್ತು. ಗ್ರಾಮದ ಮರಿಸ್ವಾಮಿ ಎಂಬುವವರು ತಮ್ಮ ಮನೆ ಸನಿಹದ ಬಯಲಿನಲ್ಲಿ ಬಹಿರ್‌ದೆಸೆಗೆ ಹೋದಾಗ ಈ ಆನೆಯನ್ನು ಕಂಡು ಹೆದರಿ ಹೌಹಾರಿ ಸ್ಥಳದಿಂದ ಓಡಿ ಬಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದರಿಂದಾಗಿ ಜನರು ಆತಂಕಕ್ಕೀಡಾಗಿದ್ದರು.

ಕಾಡಾನೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ ಜನರು ನದಿ ಪಾತ್ರದ ಜಮೀನಿಗೆ ಹೋಗದಂತೆ ಹಾಗೂ ಮನೆಗಳಿಂದ ಹೊರ ಬರದಂತೆ ಧ್ವನಿ ವರ್ಧಕ ಮೂಲಕ ಎಚ್ಚರಿಕೆ ನೀಡಿದ್ದರು. ಇನ್ನು ಈ ಆನೆಗೆ ಹಾಸನ ಜಿಲ್ಲೆಯ ಸಕಲೇಶÀಪುರದಲ್ಲಿ ಸೆರೆಹಿಡಿದು ಅರಣ್ಯ ವಲಯಕ್ಕೆ ಬಿಡುವ ಸಮಯದಲ್ಲಿ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಇದರಿಂದ ಸಕಲೇಶಪುರದ ಆನೆ ಎಂದು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಬಳಿಕ ಆನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಮತ್ತೆ ಈ ಗಜ ಮದ್ದೂರು ಚೆನ್ನರಾಯಪಟ್ಟಣ ಭಾಗಗಳಲ್ಲಿ ತಿರುಗಾಡತೊಡಗಿತು. ಈ ಆನೆಯನ್ನು ಮರು ಸೆರೆಹಿಡಿಯುವದು ಅರಣ್ಯಾಧಿಕಾರಿಗಳಿಗೆ ಅನಿವಾರ್ಯವಾಯಿತು.

ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ವಿವಿಧೆಡೆ ಅಬ್ಬರಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದÀ ಪುಂಡಾನೆ ಮೌಂಟೇನ್ ಟಸ್ಕರ್-೩೯೪೫ ಅನ್ನು ಬರೋಬರಿ ೪೮ ಗಂಟೆ ಕಾರ್ಯಾಚರಣೆ ಬಳಿಕ ಸುಮಾರು ೪೦ ಅಧಿಕಾರಿ ಮತ್ತು ಸಿಬ್ಬಂದಿಯ ಪರಿಶ್ರಮದ ಫಲವಾಗಿ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಸೋಮವಾರ ಸೆರೆ ಹಿಡಿಯಲಾಗಿದೆ. ಎರಡು ದಿನದಿಂದ ಆನೆಯ ಹಿಂದೆ ಅರಣ್ಯ ಇಲಾಖೆಯ ೪೦ ಅಧಿಕಾರಿ, ಸಿಬ್ಬಂದಿ ಅಲೆದಾಡಿದ್ದರು. ಅಂತೆಯೇ ಭಾನುವಾರ ರಾತ್ರಿ ದುಬಾರೆ ಕ್ಯಾಂಪ್ನಿAದ ನಾಲ್ಕು ಆನೆಗಳನ್ನು ಕರೆಸಿಕೊಳ್ಳಲಾಯಿತು. ಕೊನೆಗೆ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಮೌಂಟೇನ್ ಟಸ್ಕರ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಆನೆಗಳ ಸಹಾಯದಿಂದ ಪುಂಡಾನೆಯನ್ನು ಸೆರೆ ಹಿಡಿಯಲಾಯಿತು.

(ಮೊದಲ ಪುಟದಿಂದ) ಕುಶಾಲನಗರದ ದುಬಾರೆ ಕ್ಯಾಂಪ್ನಿAದ ಕರೆಸಿದ್ದ ಅಭಿಮನ್ಯು, ಭೀಮ, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳ ಸಹಾಯದೊಂದಿಗೆ ಆಪರೇಷನ್ ಮೌಂಟೇನ್ ಟಸ್ಕರ್ ಯಶಸ್ವಿಯಗಿದೆ. ಈ ಪುಂಡಾನೆಯು ಇದೀಗ ಕೊಡಗಿನ ದುಬಾರೆಯಲ್ಲಿ ಅತಿಥಿ!.

ಕಾರ್ಯಾಚರಣೆಯಲ್ಲಿ ಅಲ್ಲಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ವಲಯ ಅರಣ್ಯಾಧಿಕಾರಿಗಳಾದ ಆಸೀಫ್ ಅಹಮದ್, ಶಿಲ್ಪಾ, ನಾಗೇಂದ್ರ ಪ್ರಸಾದ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಹಾಗೂ ಸಹಾಯಕ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಇವರುಗಳು ಆನೆಯನ್ನು ದುಬಾರೆ ಶಿಬಿರಕ್ಕೆ ಕರೆತರಲಾಗಿರುವದನ್ನು “ಶಕ್ತಿ” ಗೆ ಖಾತರಿಪಡಿಸಿದ್ದಾರೆ.