ವೀರಾಜಪೇಟೆ, ಜೂ. ೨೮: ಶೌರ್ಯ ವಿಪತ್ತು ನಿರ್ವಹಣಾ ತಂಡದ ವಾರ್ಷಿಕೋತ್ಸವದ ಅಂಗವಾಗಿ ವೀರಾಜಪೇಟೆ ಸಮೀಪದ ಕಂಡAಗಾಲ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗಯ್ಯ ಬಿ. ಬಾಣಸೆ ಚಾಲನೆ ನೀಡಿದರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಪದ್ಮಯ್ಯ, ಬಿಟ್ಟಂಗಾಲ ಪಂಚಾಯಿತಿ ಸದಸ್ಯ ಸುಬ್ಬಯ್ಯ ಹಾಗೂ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳು, ಸಂಯೋಜಕಿ ರೇಖಾ ಗಣೇಶ್, ಮೇಲ್ವಿಚಾರಕಿ ರತ್ನ ಮೈಪಾಲ, ಸ್ವಯಂ ಸೇವಕರಾದ ಮೋಹನ್, ಅರುಣ್, ರಂಜನ್, ಗಣೇಶಗೌಡ, ಸಬಿತಾ, ನವೀನ್, ಅಕ್ಷತ್ ಇತರರು ಇದ್ದರು.