ಮಡಿಕೇರಿ, ಜೂ. ೨೭: ಮಡಿಕೇರಿ ತಾಲೂಕು ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ಕ್ಲಬ್‌ನ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕೋವಿಶೀಲ್ಡ್ ಲಸಿಕಾ ಅಭಿಯಾನದಲ್ಲಿ ಗ್ರಾಮದ ೪೦೦ ಮಂದಿಗೆ ಲಸಿಕೆ ನೀಡಲಾಯಿತು.

ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿ, ಕೋವಿಡ್ ಸಾಂಕ್ರಾಮಿಕ ವೈರಸ್‌ನ ಹರಡುವಿಕೆಯ ನಿಯಂತ್ರಣ ನಮ್ಮಿಂದಲೇ ಸಾಧ್ಯ. ಪ್ರತಿಯೊಬ್ಬರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಹಾಕಿಸಿಕೊಂಡಲ್ಲಿ ವೈರಸ್ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಅತಿಹೆಚ್ಚು ಪಾಸಿಟಿವ್ ಪ್ರಕರಣವನ್ನು ಹೊಂದಿದ್ದ ಬೆಟ್ಟಗೇರಿ ಪಂಚಾಯಿತಿ ಎಚ್ಚೆತ್ತುಕೊಂಡು ಈಗ ಶೂನ್ಯ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವುದು ಸಂತಸದ ವಿಚಾರ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರ‍್ಯಾಲಿ, ಸದಸ್ಯರಾದ ತಳೂರು ದಿನೇಶ್ ಕರುಂಬಯ್ಯ, ಕ್ಲಬ್ ಅಧ್ಯಕ್ಷ ಸೂರಿ, ಕಾಕೇರಿ ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.