ಮಡಿಕೇರಿ, ಜೂ. ೨೭: ವೀಕೆಂಡ್ ಕರ್ಫ್ಯೂ ಹಾಗೂ ಬಿಗಿನಿಯಮ ಜಾರಿಯಲ್ಲಿದ್ದರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಆಗಮಿಸಿದ ಪ್ರವಾಸಿಗರ ವಾಹನವನ್ನು ತಡೆದು ಪೊಲೀಸರು ದಂಡ ವಿಧಿಸಿದರು.
ಬಿಗಿನಿಯಮಗಳ ನಡುವೆ ಪ್ರವಾಸಕ್ಕೆಂದು ಜಿಲ್ಲೆಗೆ ರಾಜ್ಯದ ವಿವಿಧೆಡೆ ಸೇರಿದಂತೆ ಇತರ ರಾಜ್ಯದ ಜನರು ಕೊಡಗಿನ ಕಡೆ ಆಗಮಿಸುತ್ತಿರುವ ದೃಶ್ಯ ಕಂಡುಬAತು. ಈ ಬಗ್ಗೆ ತಾ. ೨೭ ರಂದು 'ಶಕ್ತಿ' ವರದಿ ಮೂಲಕ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಾಹನ ತಡೆದು, ಪರಿಶೀಲಿಸಿ ದಂಡ ವಿಧಿಸಿ ವಾಹನವನ್ನು ವಾಪಸ್ ಕಳುಹಿಸಿದರು. ಕೆಲವೊಂದು ಪ್ರವಾಸಿ ಬಸ್ ಕೂಡ ಪಾಸ್ ರಹಿತ ಸಂಚಾರ ನಡೆಸಿದ್ದು, ಈ ವೇಳೆ ಕಂಡು ಬಂತು.