ಮಡಿಕೇರಿ, ಜೂ. ೨೭: ಕಗೋಡ್ಲು ಗ್ರಾಮದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಗೋಹತ್ಯೆ ಪ್ರಕರಣಗಳಲ್ಲಿ ಇದೀಗ ನಾಲ್ವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದು, ಒಟ್ಟು ಸಂಖ್ಯೆ ೬ಕ್ಕೆ ಏರಿದೆ.
ಕುಂಜಿಲ ಗ್ರಾಮದ ಮಹಮದ್ ಜಬೀರ್ (೨೭), ಅಬ್ದುಲ್ ಸಲಾಂ (೪೫), ಸಿಯಾಬ್ (೨೯) ಹಾಗೂ ಮಹಮದ್ (೨೬) ಬಂಧಿತ ಆರೋಪಿಗಳಾಗಿದ್ದಾರೆ. ತಾ. ೮ ರಂದು ನಡೆದಿದ್ದ ಗೋಹತ್ಯೆ ಪ್ರಕರಣದಲ್ಲಿ ಅಬ್ದುಲ್ ಸಲಾಂ ಹಾಗೂ ಸಿಯಾಬ್ ಬಂಧನವಾಗಿದ್ದು, ತಾ. ೨೨ ರಂದು ನಡೆದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಹಮದ್ ಜಬೀರ್ ಹಾಗೂ ಮಹಮದ್‌ನನ್ನು ಬಂಧಿಸಲಾಗಿದೆ. ಮಹಮದ್ ಜಬೀರ್ ತಾ. ೮ ರಂದು ನಡೆದಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದು, ಅದೇ ಪ್ರಕರಣಕ್ಕೆ ಸಂಬAಧಿಸಿದAತೆ ಆಲ್ಟೋ ಕಾರು ಹಾಗೂ ಬಂದೂಕನ್ನು ವಶಪಡಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಎಸ್‌ಪಿ ಕ್ಷಮಾಮಿಶ್ರಾ ನಿರ್ದೇಶನ ದಂತೆ ಡಿವೈಎಸ್‌ಪಿ ದಿನೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್.ಎಸ್. ರವಿಕಿರಣ್, ಠಾಣಾಧಿಕಾರಿ ಸದಾಶಿವ ನೇತೃತ್ವದಲ್ಲಿ ಸಿಬ್ಬಂದಿ ಗಳಾದ ದಿನೇಶ್, ಕೃಷ್ಣಮೂರ್ತಿ, ರವಿಕುಮಾರ್, ಸಜನ್, ಮಂಜುನಾಥ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ ದ್ದರು.
ಈಗಾಗಲೇ ತಾ. ೮ ರಂದು ನಡೆದಿದ್ದ ಪ್ರಕರಣ ಸಂಬAಧ ಕುಂಜಿಲದ ಮಹಮದ್ ರಿಯಾಜ್ ಹಾಗೂ
ವೀರಾಜಪೇಟೆ, ಜೂ. ೨೭: ಆನ್‌ಲೈನ್ ಮೂಲಕ ನಡೆದ ಕರಾಟೆ ಪರೀಕ್ಷೆಯಲ್ಲಿ ಒಂದು ನಿಮಿಷಕ್ಕೆ ೩೫೦ ಪಂಚ್‌ಗಳನ್ನು ಮಾಡುವುದರ ಮೂಲಕ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮೂರೂರು ಗ್ರಾಮದ ಅಮ್ಮಂಡ ಹಿತೈಶ್ ಭೀಮಯ್ಯ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ್ದಾರೆ.
ಪೊನ್ನಂಪೇಟೆ ಕುಂದಾ ಗ್ರಾಮದಲ್ಲಿರುವ ಸಿಐಟಿ ಪದವಿಪೂರ್ವ
(ಮೊದಲ ಪುಟದಿಂದ) ತಾ. ೨೨ ರಂದು ನಡೆದಿದ್ದ ಪ್ರಕರಣದ ಸಂಬAಧ ಆಶಿಕ್ ಎಂಬವರುಗಳನ್ನು ಬಂಧಿಸಲಾಗಿದ್ದು, ಆ ಮೂಲಕ ಎರಡು ಗೋ ಹತ್ಯೆ ಪ್ರಕರಣ ಸಂಬAಧ ಒಟ್ಟು ೬ ಮಂದಿಯನ್ನು ಬಂಧಿಸಿದAತಾಗಿದೆ. ತಾ. ೨೨ ರ ಪ್ರಕರಣ ಸಂಬAಧವೂ ಈಗಾಗಲೇ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.