ಚೆಟ್ಟಳ್ಳಿ, ಜೂ. ೨೭: ಉತ್ತಮ ಫಸಲುನೀಡುವ ರೋಬಸ್ಟಾ ಗಿಡವನ್ನು ಗುರುತಿಸಿ ಅದರ ಕಂಬ ಚಿಗುರಿನಿಂದ ಹಲವು ವಿಧಾನಗಳ ಮೂಲಕ ಮೂಲಬೆಳೆ ಹಾಗೂ ಅಧಿಕ ಫಸಲು ನೀಡುವ ರೋಬಸ್ಟಾ ಕ್ಲೋನಲ್ ಪ್ಲಾಂಟನ್ನು ಬೆಳೆಸಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಈವರ್ಷವೂ ಬೆಳೆಗಾರರಿಗೆ ವಿತರಿಸಲಾಗುತ್ತಿದೆ.
೧೯೯೩ರಲ್ಲಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ತಜ್ಞರಾಗಿದ್ದ ಅನಿಲ್ ಕುಮಾರ್ ಅವರ ಮುತುವರ್ಜಿಯಲ್ಲಿ ರೋಬಸ್ಟಾದ ಮೂಲತಳಿಯ ಕ್ಲೋನಲ್ ಪ್ಲಾಂಟ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ನಂತರ ಪ್ರತಿ ವರ್ಷ ಉತ್ತಮ ಫಸಲು ನೀಡುವ ಕೊಡಗಿನ ಹಲವು ಕಾಫಿ ತೋಟಗಳಿಗೆ ಕಾಫಿ ಸಂಶೋಧನಾ ಕೇಂದ್ರದ ತಜ್ಞರು ನಿರಂತರವಾಗಿ ಭೇಟಿ ನೀಡಿ ಕಾಫಿ ಹಣ್ಣುಗಳನ್ನು ತಂದು ಸಂಶೋಧಿಸುವರು. ಉತ್ತಮ ಫಸಲು ನೀಡುವ ಗಿಡವೆಂದು ಖಾತರಿಪಡಿಸಿಕೊಂಡು ಅದರ ಚಿಗುರು ಬರುವ ಸಮಯದಲ್ಲಿ ಉತ್ತಮವಾದ ಕಂಬಚಿಗುರನ್ನು ತಂದು ನಿರ್ದಿಷ್ಟ ಉದ್ದಕ್ಕೆ ಕತ್ತರಿಸಿ ಬೇರು ಬರುವ ರಾಸಾಯನಿಕದಲ್ಲಿ ಅದನ್ನು ಅದ್ದಿ ಪಾತಿಯಲ್ಲಿ ಮಣ್ಣು ತುಂಬಿಸಿದ ಬಾಸ್ಕೆಟ್‌ಗೆ ನೆಟ್ಟು ಚಿಗುರೊಡೆಯಲು ಮುಚ್ಚಿಡುವರು. ಚಿಗುರೊಡೆಯಲು ಪ್ರಾರಂಭಿಸಿದ ನಂತರ ಅದಕ್ಕೆ ಗೊಬ್ಬರ, ನೀರನ್ನು ನೀಡಿ ಬೆಳೆಸುವುದು ವಿಧಾನವಾಗಿದೆ.
ಹಲವು ವರ್ಷಗಳಿಂದ ಅರೆಬಿಕಾ ಹಾಗೂ ರೋಬಸ್ಟಾದ ವಿವಿಧ ಕಾಫಿ ತಳಿಗಳ ಬಗ್ಗೆ ಸಂಶೋಧನೆ ನಡೆಸಿ ಅಧಿಕ ಇಳಿವರಿ ನೀಡುವ ತಳಿಗಳನ್ನು ಬೆಳೆಸುತ್ತಿರುವ ಮಡಿಕೇರಿ ಸಮೀಪದ ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಹಲವು ವರ್ಷಗಳಿಂದ ಬೇಡಿಕೆ ಇರುವಷ್ಟು ರೋಬಸ್ಟಾ ಕ್ಲೋನಲ್ ಪ್ಲಾಂಟ್‌ಗಳನ್ನು ನೆಟ್ಟು ಬೆಳೆಸಿ ಪ್ರತಿ ವರ್ಷ ಮೇ ಹಾಗೂ ಜೂನ್ ತಿಂಗಳಲ್ಲಿ ಬೆಳೆಗಾರರಿಗೆ ನೀಡಲಾಗುತ್ತಿದೆ.
ಬೆಳೆಗಾರರಿಂದ ಭಾರೀ ಬೇಡಿಕೆ
(ಮೊದಲ ಪುಟದಿಂದ) ರೋಬಸ್ಟಾದ ವಿವಿಧ ಕಾಫಿ ತಳಿಗಳಲ್ಲಿ ವಿಶೇಷಪಟ್ಟ ಹಾಗೂ ಅತೀ ಕಡಿಮೆ ಅವಧಿಯಲ್ಲಿ ಅಧಿಕ ಇಳಿವರಿ ಕೊಡುವ ರೋಬಸ್ಟಾ ಮೂಲ ತಳಿಯ ಚಿಗುರಿನಿಂದ ಬೆಳೆಸಲಾಗುವ ಗಿಡಕ್ಕೆ ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರಕ್ಕೆ ಎಲ್ಲೆಡೆಯಿಂದ ಭಾರೀ ಬೇಡಿಕೆ ಇದೆ. ಕಳೆದ ವರ್ಷ ಈ ಕಾಫಿ ಗಿಡಗಳಿಗೆ ಅರ್ಜಿ ಸಲ್ಲಿಸಿದ ಬೆಳೆಗಾರರಿಗೆ ಈ ವರ್ಷ ನೀಡಲಾಗುತ್ತಿದೆ. ಪ್ರತೀ ವರ್ಷ ಲಕ್ಷಕ್ಕೂ ಅಧಿಕ ಗಿಡಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಸಂಶೋಧನಾ ಕೇಂದ್ರದಲ್ಲಿರುವ ನರ್ಸರಿಗಳ ಸ್ಥಳಕ್ಕೆ ಸರಿಯಾಗಿ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಅರ್ಜಿ ಸಲ್ಲಿಸಿದ ಪ್ರತೀ ಬೆಳೆಗಾರರಿಗೆ ೨೫೦ ಗಿಡಗಳನ್ನು ಮಾತ್ರ ನೀಡಲು ಸಾಧ್ಯವಾಗುತ್ತಿದೆ.
ತಳಿ ಅಭಿವೃದ್ಧಿಯ ಬಗ್ಗೆ ತರಬೇತಿ
ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಬೆಳೆಗಾರರಿಗೆ ಪ್ರತೀ ವರ್ಷ ಕಾಫಿ ಬೆಳೆಗಳ ಅಭಿವೃದ್ಧಿ, ವಿವಿಧ ತಳಿಗಳ ಮಾಹಿತಿ, ಕೀಟಬಾಧೆ ನಿಯಂತ್ರಣದ ಕ್ರಮದ ಬಗ್ಗೆ, ಕಾಫಿ ತೋಟಗಳ ನಿರ್ವಹಣೆಯ ಬಗ್ಗೆ, ಗಿಡಗಳಿಗೆ ಕಸಿಕಟ್ಟುವ ಬಗ್ಗೆ ಜೊತೆಗೆ ಕ್ಲೋನಲ್ ಪ್ಲಾಂಟ್‌ಗಳ ಬಗ್ಗೆ ಕಾಫಿ ಸಂಶೋಧನಾ ಕೇಂದ್ರದ ತಜ್ಞರಿಂದ ಪ್ರತೀ ವರ್ಷ ಹಲವು ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ. ನುರಿತ ಬೆಳೆಗಾರರಿಂದಲೂ ಸಲಹೆ ಪಡೆಯಲಾಗುತ್ತದೆ.
ಕೆೆಲವು ನರ್ಸರಿಯಲ್ಲಿ ರೋಬಸ್ಟಾ ಕಾಫಿ ಗಿಡದ ಕಂಬಚಿಗುರಿನಲ್ಲಿ ಬೆಳೆದ ಅಧಿಕ ಇಳಿವರಿಯ ಕಾಫಿ ಗಿಡಗಳನ್ನು ಸಂಶೋಧನಾ ಕೇಂದ್ರದ ತಜ್ಞರಿಂದ ಪ್ರತೀ ವರ್ಷ ಹಲವು ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ. ನುರಿತ ಬೆಳೆಗಾರರಿಂದಲೂ ಸಲಹೆ ಪಡೆಯಲಾಗುತ್ತದೆ.
ಕೆÉಲವು ನರ್ಸರಿಯಲ್ಲಿ ರೋಬಸ್ಟಾ ಕಾಫಿ ಗಿಡದ ಕಂಬಚಿಗುರಿನಲ್ಲಿ ಬೆಳೆದ ಅಧಿಕ ಇಳಿವರಿಯ ಕಾಫಿ ಗಿಡಗಳನ್ನು ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ. ಕೊಡಗಿನ ನುರಿತ ಕಾಫಿ ತೋಟದ ಬೆಳೆಗಾರರು ಕೂಡ ತಮ್ಮ ತಮ್ಮ ತೋಟಗಳಲ್ಲಿ ಬೆಳೆದ ಉತ್ತಮ ತಳಿಯ ಗಿಡದ ಕಂಬಚಿಗುರನ್ನು ತಂದು ಗಿಡಗಳನ್ನಾಗಿಸಿ ತಮ್ಮ ತೋಟಗಳಲ್ಲಿ ಬೆಳೆದು ಅತ್ಯುತ್ತಮ ಫಸಲನ್ನು ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ.
-ಪುತ್ತರಿರ ಕರುಣ್‌ಕಾಳಯ್ಯ