ದಾನಿಗಳು ಕೊಡಗಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಲವಾರು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದರೆ ಈ ರೀತಿಯ ಕೊಡುಗೆಗಳು ಯಾವ ಸ್ಥಿತಿಯಲ್ಲಿ ನಿರ್ವಹಿಸಲ್ಪಡುತ್ತಿದೆ ಎಂದು ಭಾನುವಾರ ರಿಯಾಲಿಟಿ ಚೆಕ್ ಕೈಗೊಂಡಾಗ ನಿಜಕ್ಕೂ ಬೇಸರದ ವಿಚಾರ ಬೆಳಕಿಗೆ ಬಂತು.

ಮಡಿಕೇರಿ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂರ‍್ರಾಷ್ಟಿçÃಯ ಸೇವಾ ಸಂಸ್ಥೆಯೊAದು ನೀಡಿದ ಆಕ್ಸಿಜನ್ ಕಾನ್ಸಟ್ರೇಟರ್ ಉಗ್ರಾಣದಲ್ಲಿ ಬಳಕೆಯಾಗದೇ ಬಿದ್ದಿತ್ತು. ಯಾಕೆ ಉಪಯೋಗಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ ಅಲ್ಲಿನ ವೈದ್ಯರು ನೀಡಿದ ಉತ್ತರ ಜಿಲ್ಲೆಯ ವ್ಯವಸ್ಥೆಗೆ ಕನ್ನಡಿ ಹಿಡಿದಂತಿತ್ತು.

ನೋಡಿ ಸಾರ್.. ಆಸ್ಪತ್ರೆಯ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿಲ್ಲ; ಅರ್ಥಿಂಗ್ ಕೂಡ ಇಲ್ಲ. ಮೇಲ್ಛಾವಣಿ ದುರಸ್ತಿಗೊಳಗಾಗಿದೆ. ಇಂತಹ ಸ್ಥಿತಿಯಲ್ಲಿ ಈ ಉಪಕರಣ ಬಳಕೆ ಮಾಡುವಂತಿಲ್ಲ. ಗ್ರಾಮ ಪಂಚಾಯತ್‌ಗೆ ಈ ಬಗ್ಗೆ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ. ಹೀಗಾದಲ್ಲಿ ಎಷ್ಟೇ ಲಕ್ಷ ಮೌಲ್ಯದ ಉಪಕರಣ ಸಿಕ್ಕಿದರೂ ಉಪಯೋಗಿಸಲಾಗದೇ ಮೂಲೆ (ಮೊದಲ ಪುಟದಿಂದ) ಸೇರಬೇಕಾಗುತ್ತದೆ. ವೈದ್ಯರ ಉತ್ತರ ಕೇಳಿದರೆ ನಮ್ಮ ಗ್ರಾಮೀಣ ಮಟ್ಟದ ಆರೋಗ್ಯ ಕೇಂದ್ರಗಳ ಸ್ಥಿತಿ ತಿಳಿಯಬಹುದು.

ಮತ ಪಡೆದು ಗೆದ್ದ ಪಂಚಾಯತ್ ಸದಸ್ಯರು ತಮ್ಮ ಗ್ರಾಮದ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಇನ್ನಾದರೂ ಮನಸ್ಸು ಮಾಡಬೇಕು. ಗ್ರಾಮಸ್ಥರೂ ಅಷ್ಟೇ, ತಮ್ಮ ಗ್ರಾಮದಲ್ಲಿರುವ ಆಸ್ಪತ್ರೆಗಳ ಸ್ಥಿತಿಗತಿ ತಿಳಿದು ಸುಧಾರಣೆಗೆ ತಮ್ಮ ನೆರವು ನೀಡಬೇಕು.

ಜನರಿಗೆ ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳ ಸುಧಾರಣೆ ಬೇಡವಾದಲ್ಲಿ, ಸರ್ಕಾರವನ್ನೇ ಎಲ್ಲದಕ್ಕೂ ನಿರೀಕ್ಷೆ ಮಾಡಿದ್ದೇ ಆದಲ್ಲಿ ಜಿಲ್ಲೆಯ ಆರೋಗ್ಯ ಪರಿಸ್ಥಿತಿ ಖಂಡಿತಾ ಸದ್ಯಕ್ಕೆ ಸುಧಾರಿಸಲಾರದು.

ಅಧಿಕಾರಿಗಳು ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ಹೋಗುವಂತೆಯೇ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಿಗೂ ತೆರಳಿ ಅಲ್ಲಿನ ಮೂಲ ಸಮಸ್ಯೆ ತಿಳಿಯುವ ಪ್ರಯತ್ನ ಮಾಡುವುದು ಸೂಕ್ತ. ಹಾಗೇ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಕೂಡ ಮಂತ್ರಿಗಳ ಸಭೆ, ವೀಡಿಯೋ ಕಾನ್ಫರೆನ್ಸ್ಗಳಿಗೇ ಸೀಮಿತವಾಗದೇ ಜಿಲ್ಲೆಯಾದ್ಯಂತ ತೆರಳಿ ಆರೋಗ್ಯ ಕೇಂದ್ರಗಳ ಸ್ಥಿತಿಗತಿ ತಿಳಿಯುವ ಅತ್ಯಗತ್ಯ ಈಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿಗೆ ಇಲಾಖೆಯ ಉನ್ನತಾಧಿಕಾರಿಗಳ ನಿರ್ಲಕ್ಷö್ಯ ಸ್ಪಷ್ಟವಾಗಿದೆ.