ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುಂಟಿಕೊಪ್ಪ ವಲಯದ ವ್ಯಾಪ್ತಿಯಲ್ಲಿರುವ ಕೊರೊನಾ ಲಾಕ್‌ಡೌನ್ ನಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ೨೦ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಸುಂಟಿಕೊಪ್ಪ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯದ ಕಚೇರಿಯಲ್ಲಿ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಕಾವೇರಪ್ಪ, ಮುಖ್ಯ ಪೇದೆ ಖಾದರ್ ಹಾಗೂ ಗ್ರಾ. ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಬಡವರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು. ವಲಯದ ಮೇಲ್ವಿಚಾರಕಿ ಪುಷ್ಪಾಲತಾ, ಒಕ್ಕೂಟದ ಅಧ್ಯಕ್ಷೆ ನಾಗರತ್ನ ಸುರೇಶ್, ಸೇವಾ ಪ್ರತಿನಿಧಿಗಳಾದ ಜ್ಯೋತಿ ಲಕ್ಷಿö್ಮÃ, ಮಾಲಿನಿ, ಚಿತ್ರಾ, ಯಶೋಧ ಮತ್ತಿತರರು ಇದ್ದರು.ಸಂಪಾಜೆ: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಪಾಜೆ ಕೊಡಗು ವತಿಯಿಂದ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪಾಜೆ ಮತ್ತು ಚೆಂಬು ಘಟಕಗಳಿಗೆ ಆಕ್ಸಿಮೀಟರ್‌ಗಳನ್ನು ಸಂಸ್ಥೆಯ ಅಧ್ಯಕ್ಷ ಯನ್.ಸಿ. ಅನಂತ್ ಊರುಬೈಲು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇದರೊಂದಿಗೆ ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಆರೋಗ್ಯ ಸಿಬ್ಬಂದಿಗಳು, ಸಂಪಾಜೆ ಗೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್, ಕಂದಾಯ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಂಸ್ಥೆಯಿAದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ರಾಜಾರಾಮ ಕಳಗಿ, ಸಿಇಓ ಆನಂದ ಬಿ.ಕೆ., ಆಸ್ಪತ್ರೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ್, ಪೊಲೀಸ್ ಅಧಿಕಾರಿ ಶ್ರೀಧರ್, ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸುಂಟಿಕೊಪ್ಪ ಹೋಬಳಿಯ ೧೨ ಮಂದಿ ಪತ್ರಕರ್ತರು, ಇಬ್ಬರು ಪತ್ರಿಕೆ ವಿತರಕರಿಗೆ ದಿನಸಿ ವಸ್ತುಗಳ ಕಿಟ್‌ಗಳನ್ನು ವಿತರಿಸಲಾಯಿತು. ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ಮನುಶೆಣೈ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೇಶವ ಕಾಮತ್, ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್, ಟ್ರಸ್ಟಿಗಳಾದ ಜಿ. ಚಿದ್ವಿಲಾಸ್, ತಿಮ್ಮಪ್ಪ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಎಂ.ಬಿ. ವಿನ್ಸೆಂಟ್, ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ ಮತ್ತು ಪತ್ರಕರ್ತರು ಇದ್ದರು.ಸುಂಟಿಕೊಪ್ಪ: ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸುಂಟಿಕೊಪ್ಪ ಹೋಬಳಿಯ ೧೨ ಮಂದಿ ಪತ್ರಕರ್ತರು, ಇಬ್ಬರು ಪತ್ರಿಕೆ ವಿತರಕರಿಗೆ ದಿನಸಿ ವಸ್ತುಗಳ ಕಿಟ್‌ಗಳನ್ನು ವಿತರಿಸಲಾಯಿತು. ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ಮನುಶೆಣೈ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೇಶವ ಕಾಮತ್, ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್, ಟ್ರಸ್ಟಿಗಳಾದ ಜಿ. ಚಿದ್ವಿಲಾಸ್, ತಿಮ್ಮಪ್ಪ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಎಂ.ಬಿ. ವಿನ್ಸೆಂಟ್, ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ ಮತ್ತು ಪತ್ರಕರ್ತರು ಇದ್ದರು.ಗೋಣಿಕೊಪ್ಪ ವರದಿ: ಹಾತೂರು ವಲಯ ಕಾಂಗ್ರೆಸ್ ವತಿಯಿಂದ ಅತ್ತೂರು ಗ್ರಾಮದ ಪಕ್ಷದ ೨೦ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಹಾತೂರು ವಲಯ ಅಧ್ಯಕ್ಷ ಕೊಕ್ಕಂಡ ರೋಶನ್‌ಕುಮಾರ್ ವಿತರಿಸಿದರು. ಜಿಲ್ಲಾ ಸೇವಾದಳ ಪ್ರಧಾನ ಕಾರ್ಯದರ್ಶಿ ತೆರೇಸ ವಿಕ್ಟರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ನವೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಗಣಪತಿ, ಹಾತೂರು ವಲಯ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಂಜು ಇದ್ದರು.ಕುಶಾಲನಗರ ವ್ಯಾಪ್ತಿಯ ಛಾಯಾಗ್ರಾಹಕರಿಗೆ
ಕುಶಾಲನಗರ: ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯ ಛಾಯಾಗ್ರಾಹಕರಿಗೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಣೆ ಮಾಡಿದರು. ಕುಶಾಲನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕಿನ ಸುಮಾರು ೧೦೦ ಮಂದಿ ಛಾಯಾಗ್ರಾಹಕರಿಗೆ ಕಿಟ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಾಂತಪ್ಪ, ಸುರೇಶ್, ದೀಪಕ್, ಪ್ರಮೋದ್ ಮತ್ತಿತರರು ಇದ್ದರು.ಸಿದ್ದಾಪುರ: ಹಾಡಿಯ ನಿವಾಸಿಗಳು ಲಸಿಕೆಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು. ಚೆನ್ನಂಗಿ ಗ್ರಾಮದ ದಿಡ್ಡಳ್ಳಿ, ಮಾಲ್ದಾರೆ ಹಾಗೂ ಸಿದ್ದಾಪುರ ಅವರೆಗುಂದ ಭಾಗದ ಹಾಡಿಯ ನಿವಾಸಿಗಳಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಇಲ್ಲಿನ ನಿವಾಸಿಗಳು ಕೊರೊನಾ ವೈರಸ್‌ನ ಲಾಕ್‌ಡೌನ್‌ನಿಂದಾಗಿ ಸಮಸ್ಯೆಗಳಿಗೆ ಸಿಲುಕಿಕೊಂಡಿರುವ ಬಗ್ಗೆ ಆದಿವಾಸಿ ಮುಖಂಡ ಹಾಗೂ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಶಾಸಕ ಬೋಪಯ್ಯ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಶಾಸಕರು ವಿವಿಧ ಹಾಡಿಗಳಿಗೆ ತೆರಳಿ ಕಿಟ್ ವಿತರಿಸಿದರು. ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಪಿ.ಡಿ.ಓ. ವಿಶ್ವನಾಥ್, ಬಿ.ಜೆ.ಪಿ. ಪಕ್ಷದ ಮುಖಂಡರಾದ ಗಿರೀಶ್ ಗಣಪತಿ, ಕಿಲನ್, ರದೀಶ್, ಪ್ರವೀಣ್ ಹಾಗೂ ಚೆನ್ನಯ್ಯನಕೋಟೆ, ಮಾಲ್ದಾರೆ, ಸಿದ್ದಾಪುರ ಗ್ರಾಮ ಪಂಚಾಯಿತಿಯ ಸದಸ್ಯರು, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ಕುಮಾರ್ ಇನ್ನಿತರರು ಹಾಜರಿದ್ದರು.ಸಿದ್ದಾಪುರ: ಹಾಡಿಯ ನಿವಾಸಿಗಳು ಲಸಿಕೆಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು. ಚೆನ್ನಂಗಿ ಗ್ರಾಮದ ದಿಡ್ಡಳ್ಳಿ, ಮಾಲ್ದಾರೆ ಹಾಗೂ ಸಿದ್ದಾಪುರ ಅವರೆಗುಂದ ಭಾಗದ ಹಾಡಿಯ ನಿವಾಸಿಗಳಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಇಲ್ಲಿನ ನಿವಾಸಿಗಳು ಕೊರೊನಾ ವೈರಸ್‌ನ ಲಾಕ್‌ಡೌನ್‌ನಿಂದಾಗಿ ಸಮಸ್ಯೆಗಳಿಗೆ ಸಿಲುಕಿಕೊಂಡಿರುವ ಬಗ್ಗೆ ಆದಿವಾಸಿ ಮುಖಂಡ ಹಾಗೂ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಶಾಸಕ ಬೋಪಯ್ಯ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಶಾಸಕರು ವಿವಿಧ ಹಾಡಿಗಳಿಗೆ ತೆರಳಿ ಕಿಟ್ ವಿತರಿಸಿದರು. ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಪಿ.ಡಿ.ಓ. ವಿಶ್ವನಾಥ್, ಬಿ.ಜೆ.ಪಿ. ಪಕ್ಷದ ಮುಖಂಡರಾದ ಗಿರೀಶ್ ಗಣಪತಿ, ಕಿಲನ್, ರದೀಶ್, ಪ್ರವೀಣ್ ಹಾಗೂ ಚೆನ್ನಯ್ಯನಕೋಟೆ, ಮಾಲ್ದಾರೆ, ಸಿದ್ದಾಪುರ ಗ್ರಾಮ ಪಂಚಾಯಿತಿಯ ಸದಸ್ಯರು, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ಕುಮಾರ್ ಇನ್ನಿತರರು ಹಾಜರಿದ್ದರು.ಕಡಂಗ: ನಾಪೋಕ್ಲು ಸುತ್ತಮುತ್ತ ಇರುವ ಗ್ರಾಮಗಳ ಮದರಸ ಅಧ್ಯಾಪಕರುಗಳು, ದೇವಸ್ಥಾನದ ಅರ್ಚಕರು ಮತ್ತು ಚರ್ಚ್ನ ಪಾದ್ರಿಗಳ ೩೦ ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಆಹಾರ ದಿನಸಿ ಕಿಟ್‌ಗಳನ್ನು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ, ಯುಎಇ ಮತ್ತು ದುಬೈ ಕನ್ನಡ ಸಂಘದ ವತಿಯಿಂದ ವಿತರಿಸಲಾಯಿತು. ತಾ. ೧೮ ರಂದು ಕುಂಜಿಲ, ಕೊಳಕೇರಿ, ನಾಪೋಕ್ಲು, ಚೆರಿಯಪರಂಬು, ಎಮ್ಮೆಮಾಡು, ಚೆಟ್ಟಿಮಾನಿ, ನಾಲಡಿ, ಕಕ್ಕಬೆ, ಮರಂದೋಡ, ಕೊಟ್ಟಮುಡಿ ಮುಂದಾದ ಕಡೆಗಳಲ್ಲಿ ಹೋಗಿ ಮೊಹಮ್ಮದ್ ಹಾಜಿ ಕುಂಜಿಲ ಅವರು ಕಿಟ್ ತಲುಪಿಸಿದರು. ಕಕ್ಕಬೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದಾಗ ಕುಂಜಿಲ ಪೈನೆರಿ ಮಸೀದಿ ಧರ್ಮಗುರುಗಳಾದ ಮುಬಶ್ಶೀರ್ ಅಹಸನಿ, ಕಕ್ಕಬೆ ಇಗ್ಗುತಪ್ಪ ದೇವಸ್ಥಾನದ ಅರ್ಚಕ ಶ್ರೀಕಾಂತ್ ಸ್ವಾಮಿ, ಕುಂಜಿಲದ ಹಿರಿಯ ವಿದ್ವಾಂಸ ಹುಸೈನ್ ಖಾಸಿಮಿ ಪಯಡತ್ತಂಡ, ಯವಕಪಾಡಿ ಭಗವತಿ ದೇವಸ್ಥಾನದ ಅರ್ಚಕ ಪದ್ಮನಾಭ ಸ್ವಾಮಿ, ಇಗ್ಗುತ್ತಪ್ಪ ಭಕ್ತ ಮಂಡಳಿ ಅಧ್ಯಕ್ಷ ಲವ ಬಾಚಮಂಡ, ಕೊಡಗು ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪ ಕಲಿಯಂಡ, ಮೆಹಬೂಬ್ ಮಾಸ್ಟರ್ ಮತ್ತು ಮರಂದೋಡ ದೇವಸ್ಥಾನದ ಅರ್ಚಕ ಸಂತೋಷ್ ಸ್ವಾಮಿ ಮುಂತಾದವರು ಹಾಜರಿದ್ದರು.ಕಡಂಗ: ನಾಪೋಕ್ಲು ಸುತ್ತಮುತ್ತ ಇರುವ ಗ್ರಾಮಗಳ ಮದರಸ ಅಧ್ಯಾಪಕರುಗಳು, ದೇವಸ್ಥಾನದ ಅರ್ಚಕರು ಮತ್ತು ಚರ್ಚ್ನ ಪಾದ್ರಿಗಳ ೩೦ ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಆಹಾರ ದಿನಸಿ ಕಿಟ್‌ಗಳನ್ನು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ, ಯುಎಇ ಮತ್ತು ದುಬೈ ಕನ್ನಡ ಸಂಘದ ವತಿಯಿಂದ ವಿತರಿಸಲಾಯಿತು. ತಾ. ೧೮ ರಂದು ಕುಂಜಿಲ, ಕೊಳಕೇರಿ, ನಾಪೋಕ್ಲು, ಚೆರಿಯಪರಂಬು, ಎಮ್ಮೆಮಾಡು, ಚೆಟ್ಟಿಮಾನಿ, ನಾಲಡಿ, ಕಕ್ಕಬೆ, ಮರಂದೋಡ, ಕೊಟ್ಟಮುಡಿ ಮುಂದಾದ ಕಡೆಗಳಲ್ಲಿ ಹೋಗಿ ಮೊಹಮ್ಮದ್ ಹಾಜಿ ಕುಂಜಿಲ ಅವರು ಕಿಟ್ ತಲುಪಿಸಿದರು. ಕಕ್ಕಬೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದಾಗ ಕುಂಜಿಲ ಪೈನೆರಿ ಮಸೀದಿ ಧರ್ಮಗುರುಗಳಾದ ಮುಬಶ್ಶೀರ್ ಅಹಸನಿ, ಕಕ್ಕಬೆ ಇಗ್ಗುತಪ್ಪ ದೇವಸ್ಥಾನದ ಅರ್ಚಕ ಶ್ರೀಕಾಂತ್ ಸ್ವಾಮಿ, ಕುಂಜಿಲದ ಹಿರಿಯ ವಿದ್ವಾಂಸ ಹುಸೈನ್ ಖಾಸಿಮಿ ಪಯಡತ್ತಂಡ, ಯವಕಪಾಡಿ ಭಗವತಿ ದೇವಸ್ಥಾನದ ಅರ್ಚಕ ಪದ್ಮನಾಭ ಸ್ವಾಮಿ, ಇಗ್ಗುತ್ತಪ್ಪ ಭಕ್ತ ಮಂಡಳಿ ಅಧ್ಯಕ್ಷ ಲವ ಬಾಚಮಂಡ, ಕೊಡಗು ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪ ಕಲಿಯಂಡ, ಮೆಹಬೂಬ್ ಮಾಸ್ಟರ್ ಮತ್ತು ಮರಂದೋಡ ದೇವಸ್ಥಾನದ ಅರ್ಚಕ ಸಂತೋಷ್ ಸ್ವಾಮಿ ಮುಂತಾದವರು ಹಾಜರಿದ್ದರು.ಮಡಿಕೇರಿ: ವೃತ್ತಿಪರ ಛಾಯಾಗ್ರಾಹಕರು ಕೋವಿಡ್ ಲಾಕ್‌ಡೌನ್‌ನಿಂದ ಕೆಲಸ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಮಾಡಿಕೊಂಡಿದ್ದಕ್ಕೆ ಸ್ಪಂದಿಸಿದ ಪೊನ್ನಣ್ಣ ಅವರು ಮಡಿಕೇರಿ ತಾಲೂಕಿನ ಛಾಯಾಗ್ರಾಹಕರ ಒಕ್ಕೂಟದ ಸದಸ್ಯರಿಗೆ ದಿನಸಿ ಕಿಟ್‌ಗಳನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.
ಮಡಿಕೇರಿ ನಗರದ ಕಮ್ಯೂನಿಟಿ ಹಾಲ್‌ನಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಸುಮಾರು ಐವತ್ತು ಮಂದಿ ಸದಸ್ಯರಿಗೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಿಟ್ ವಿತರಿಸಿದರು. ಛಾಯಾಗ್ರಾಹಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿ, ತಮ್ಮ ಸದಸ್ಯರು ಸಮಸ್ಯೆಯನ್ನು ಪೊನ್ನಣ್ಣ ಅವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿ ನೆರವು ನೀಡಿದ್ದಾರೆ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ಶ್ರೀಮಂತಿಕೆ ಹಲವರಲ್ಲಿ ಇರುತ್ತದೆ. ಆದರೆ ತಮ್ಮ ಶ್ರೀಮಂತಿಕೆಯನ್ನು ಇತರರಿಗೆ ಹಂಚುವ ಹೃದಯ ಶ್ರೀಮಂತಿಕೆ ಪೊನ್ನಣ್ಣ ನವರಂತಹ ಬೆರಳೆಣಿಕೆಯ ಜನರಲ್ಲಿ ಇದೆ ಎಂದು ಬಣ್ಣಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ನಗರಸಭೆ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ಮಡಿಕೇರಿ ತಾಲೂಕು ಛಾಯಾಗ್ರಾಹಕರ ಒಕ್ಕೂಟದ ಅಧ್ಯಕ್ಷ ಪ್ರದೀಪ್, ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ವಿ.ಪಿ. ಸುರೇಶ್, ಶ್ರೀಧರ್ ನಾಯರ್, ಹೊಸೂರು ಸೂರಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲಕೃಷ್ಣ, ಚುಮ್ಮಿ ದೇವಯ್ಯ , ನರೇನ್ ಕಾರ್ಯಪ್ಪ, ಪ್ರಕಾಶ್ ಆಚಾರ್ಯ, ಕೊಟ್ಟಮುಡಿ ಹಂಸ, ಅಬ್ದುಲ್ ರಜಾಕ್ ಸೇರಿದಂತೆ ಮಡಿಕೇರಿ ತಾಲೂಕಿನ ಛಾಯಾಗ್ರಾಹಕರು ಭಾಗವಹಿಸಿದ್ದರು.ಕಡಂಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸೋಂಕಿತರ ಮನೆಗಳಲ್ಲೂ ಮತ್ತು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮತ್ತು ಸದಸ್ಯರಾದ ವಿನೋದ್ ನಾಣಯ್ಯ, ಸುಬೀರ್ ಸಿ.ಇ. ಸವರ ಮುಖಾಂತರ ಕಡಂಗ, ಅರಪಟ್ಟ, ಪೋದವಾಡ ಗ್ರಾಮದಲ್ಲಿ ಆಹಾರ ಕಿಟ್ ಮತ್ತು ಅರೋಗ್ಯ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಧಿಕಾರಿ ಆಶಾ, ಬಿದ್ದಪ್ಪ ಹಾಜರಿದ್ದರು.ಸೋಮವಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂರ‍್ರಾಷ್ಟಿçÃಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿ ಕೋತ್ಸವ ಅಂಗವಾಗಿ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ತರಕಾರಿ ಕಿಟ್ ವಿತರಿಸಲಾಯಿತು. ಈ ಸಂದರ್ಭ ಘಟಕದ ಸಂಯೋಜಕ ರವಿಕುಮಾರ್, ಸ್ವಯಂಸೇವಕರಾದ ರಾಮದಾಸ್, ರವಿ, ಯೋಜನೆಯ ಮೇಲ್ವಿಚಾರಕ ಕೇಶವ, ಪದ್ಮ, ಸೇವಾಪ್ರತಿನಿಧಿ ಮಹೇಶ್, ಪ್ರಮುಖರಾದ ಭಾಗೀರಥಿ ಸೇರಿದಂತೆ ಇತರರು ಹಾಜರಿದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ಸೋಂಕು ಪತ್ತೆಯಾದ ಕುಟುಂಬಕ್ಕೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಶಾಸಕ ಅಪ್ಪಚ್ಚು ರಂಜನ್ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ಕೊರೊನಾ ಸೋಂಕನ್ನು ತಡೆಗಟ್ಟಲು ಹಾಗೂ ನಿಯಂತ್ರಣಕ್ಕೆ ತರಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಕೂಡ ಸಹಕಾರ ನೀಡಬೇಕೆಂದು ತಿಳಿಸಿದರು. ಟಾಸ್ಕ್ಫೋರ್ಸ್ ಸಮಿತಿಯು ಗ್ರಾಮದಲ್ಲಿ ಅರಿವು ಮೂಡಿಸಬೇಕೆಂದರು. ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗಿಸ್, ಉಪಾಧ್ಯಕ್ಷೆ ಧಮಯಂತಿ, ಮಾಜಿ ಜಿ.ಪಂ. ಸದಸ್ಯರುಗಳಾದ ಲೋಕೇಶ್ವರಿ ಗೋಪಾಲ್, ಮಂಜುಳಾ, ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ಗ್ರಾ.ಪಂ. ಪಿ.ಡಿ.ಓ. ಅನಿಲ್‌ಕುಮಾರ್ ಹಾಗೂ ನೆಲ್ಲಿಹುದಿಕೇರಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಪಿ.ಸಿ. ಅಚ್ಚಯ್ಯ ಹಾಗೂ ಗ್ರಾ.ಪಂ. ಸದಸ್ಯರು, ಠಾಣಾಧಿಕಾರಿ ಮೋಹನ್‌ರಾಜ್ ಹಾಜರಿದ್ದರು.ಮೂರ್ನಾಡು: ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಪಳಗಂಡ ಅಪ್ಪಣ್ಣ, ಶಕ್ತಿ ಕೇಂದ್ರ ೧ರ ಪ್ರಮುಖ್ ರವಿ, ಸಹಪ್ರಮುಖ್ ಬಿಳಿಯರ ವಿಜು ಇವರುಗಳ ಸಹಕಾರದೊಂದಿಗೆ ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್ ಆದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೇಫ್ಟಿಕಿಟ್ ಮತ್ತು ದಿನಬಳಕೆ ವಸ್ತುಗಳನ್ನೊಳಗೊಂಡ ಕಿಟ್‌ಗಳನ್ನು ಮೂರ್ನಾಡು ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ರೀತ, ಕುಶ ರೈ ಅವರ ಸಹಕಾರದೊಂದಿಗೆ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಯಿತು.