ಮಡಿಕೇರಿ, ಜೂ. ೨೬: ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಕಾಫಿ ಉದ್ಯಮಕ್ಕೆ ಸಾಕಷ್ಟು ತೊಂದರೆಯಾಗಿದ್ದು, ಆರ್ಥಿಕವಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ತೋಟಗಳ ಮೇಲೆ ಬ್ಯಾಂಕ್ಗಳಲ್ಲಿ ಪಡೆದ ಸಾಲವನ್ನು ಕಟ್ಟಲು ಕಷ್ಟವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೈಡ್ಲೈನ್ಸ್ ಹಾಗೂ ರಾಷ್ಟಿçÃಯ ವಿಪತ್ತು ಯೋಜನೆಯಡಿಯಲ್ಲಿ ಸಾಲ ಮರುಹೊಂದಾಣಿಕೆ ಮಾಡಲು ಹಾಗೂ ಹೊಸ ಸಾಲ ಪಡೆಯಲು ಅವಕಾಶವಿರುತ್ತದೆ.
ಆದ್ದರಿಂದ ಈ ಯೋಜನೆಯಡಿಯಲ್ಲಿ ಅಪೇಕ್ಷೆಪಡುವ ಬೆಳೆಗಾರರಿಗೆ ಮರುಹೊಂದಾಣಿಕೆ ಮತ್ತು ಹೊಸ ಸಾಲ ನೀಡಬೇಕಾಗಿ ಕಾಫಿ ಬೆಳೆಯುವ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬೆಳೆಗಾರರ ಒಕ್ಕೂಟವು ಎಲ್ಲಾ ಬ್ಯಾಂಕುಗಳನ್ನು ಆಗ್ರಹಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.