ಮಡಿಕೇರಿ, ಜೂ. ೨೬: ಭಾರತದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದವರನ್ನು ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷ ಮತ್ತು ಯುವ ಮೋರ್ಚಾದ ವತಿಯಿಂದ ಸನ್ಮಾನಿಸಲಾಯಿತು.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ೪೬ ವರ್ಷ ಕಳೆದ ಹಿನ್ನೆಲೆ ಕರಾಳ ದಿನವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಎರಡು ತಿಂಗಳ ಕಾಲ ಸೆರೆವಾಸ ಅನುಭವಿಸಿದ ವಿ.ಎನ್. ಶಶಿಧರ್ ಹಾಗೂ ಬಿ.ಎಂ.ಸದಾನAದ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ತುರ್ತುಪರಿಸ್ಥಿತಿಯ ಕರಾಳ ದಿನಗಳ ಸೆರೆವಾಸದ ಅನುಭವಗಳನ್ನು ವಿ.ಎನ್.ಶಶಿಧರ್ ಹಾಗೂ ಬಿ.ಎಂ. ಸದಾನಂದ ಅವರು ಹಂಚಿಕೊAಡರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರಿ ಬಿ.ಬಿ.ಭಾರತೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಮಹೇಶ್ ತಿಮ್ಮಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ತಾಲೂಕು ಯುವ ಮೋರ್ಚಾ ಅಧ್ಯಕ್ಷÀ ಚಂದ್ರಶೇಖರ್ ಹೇರೂರು, ಜಿಲ್ಲಾ ಕಾರ್ಯದರ್ಶಿ ನವನೀತ್ ಪೊನ್ನೇಟಿ , ಜಿಲ್ಲಾ ಪದಾಧಿಕಾರಿ ರಾಮನಾಥನ್ ಹಾಗೂ ಯುವ ಮೋರ್ಚಾದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.