ಮಡಿಕೇರಿ, ಜೂ. ೨೬: ಕೇಂದ್ರ ಸರಕಾರದ ಮಹತ್ವದ ಸ್ವಚ್ಛ ಭಾರತ ಯೋಜನೆಯಡಿ ದೇಶವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಮಾಡುವ ಸಂಬAಧ ಸ್ವಚ್ಛ ಭಾರತ ಯೋಜನೆ ಹಂತ-೨ ಅಡಿಯಲ್ಲಿ ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯ ವತಿಯಿಂದ ಸ್ವಚ್ಛತಾ ಕಿರುಚಿತ್ರಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ. ೧೦ ವರ್ಷ ಮೇಲ್ಪಟ್ಟ ದೇಶದ ಎಲ್ಲಾ ಪ್ರಜೆಗಳೂ ಕಿರುಚಿತ್ರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಭೌಗೋಳಿಕ ವಿಭಾಗ: ಸ್ವಚ್ಛತೆಯ ಕುರಿತು ಅದ್ಭುತವಾದ ಸಂದೇಶ ಸಾರುವ ಕಿರುಚಿತ್ರವನ್ನು ಈ ವಿಭಾಗದಲ್ಲಿ ರೂಪಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಸಂಬAಧ ತಾಂತ್ರಿಕ ಪರಿಹಾರ ಕಲ್ಪಿಸುವ ಯೋಜನೆಗಳು ಚಿತ್ರದಲ್ಲಿ ಬಿಂಬಿತವಾಗಬೇಕಿದೆ. ಮರುಭೂಮಿ ಪ್ರದೇಶ, ಗುಡ್ಡಗಾಡು ಪ್ರದೇಶ, ಕರಾವಳಿ ಪ್ರದೇಶ, ಬಯಲು ಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶ - ಈ ೫ ಭೌಗೋಳಿಕ ಪ್ರದೇಶಗಳಲ್ಲಿ ಘನ/ದ್ರವ ತ್ಯಾಜ್ಯ ನಿರ್ವಹಣೆ ಹೇಗೆ ಎಂಬುದು ಹಾಗೂ ಈ ಪ್ರದೇಶಗಳಿಗೆ ಸಂಬAಧಿಸಿದAತೆಯೇ ಸ್ವಚ್ಛತಾ ಸಂದೇಶಗಳು ಕಿರುಚಿತ್ರದ ಮೂಲಕ ರೂಪುಗೊಳ್ಳಬೇಕಿದೆ. ೫ ಭೌಗೋಳಿಕ ಪ್ರದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಿದೆ. ಆಯ್ಕೆ ಮಾಡಿದ ಪ್ರತೀ ಪ್ರದೇಶಕ್ಕೂ ಪ್ರತ್ಯೇಕ ೩ ಬಹುಮಾನಗಳನ್ನು ನೀಡಲಾಗುವುದು.

ಪ್ರಥಮ ಬಹುಮಾನ ರೂ. ೨ ಲಕ್ಷ, ದ್ವಿತೀಯ ಬಹುಮಾನ ರೂ. ೧.೨ ಲಕ್ಷ ಹಾಗೂ ತೃತೀಯ ಬಹುಮಾನ ರೂ. ೮೦,೦೦೦ ನೀಡಲಾಗುತ್ತದೆ.

ವಿಷಯಾಧಾರಿತ ವಿಭಾಗ: ಈ ವಿಭಾಗದಲ್ಲಿ ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ,ಬೂದು ನೀರು ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ನಡವಳಿಕೆ ಬದಲಾವಣೆ - ಈ ವಿಚಾರಗಳ ಕುರಿತು ಕಿರುಚಿತ್ರ ರೂಪಿಸಬೇಕಿದೆ. ಎಲ್ಲಾ ವಿಚಾರಗಳಿಗೂ ಪ್ರತ್ಯೇಕ ೩ ಬಹುಮಾನಗಳಿದ್ದು, ಪ್ರಥಮ ರೂ. ೧.೬ ಲಕ್ಷ, ದ್ವಿತೀಯ ರೂ. ೬೦,೦೦೦ ಹಾಗೂ ತೃತೀಯ ರೂ. ೩೦,೦೦೦ ನೀಡಲಾಗುವುದು.

೧೦ ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರೂ ಭಾಗವಹಿಸಬಹುದು. ಸಾಂಸ್ಥಿಕ ವಿಭಾಗದಲ್ಲಿ ಗ್ರಾಮ ಪಂಚಾಯಿತಿ, ಸಾಮುದಾಯಿಕ ಸಂಸ್ಥೆಗಳು, ಎನ್.ಜಿ.ಓ.ಗಳು ಭಾಗವಹಿಸಬಹುದು. ಕಿರುಚಿತ್ರ ೧ ರಿಂದ ೫ ನಿಮಿಷದೊಳಗಿರಬೇಕು. ಗ್ರಾಮೀಣ ಭಾಗಗಳಲ್ಲಿ ತಯಾರಿಸಿರುವ ಕಿರುಚಿತ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಇ-ಮೇಲ್ ಮೂಲಕ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಬೇಕು. ಅಪ್‌ಲೋಡ್ ಮಾಡಿದ ಲಿಂಕ್ ಅನ್ನು hಣಣಠಿs://iಟಿಟಿovಚಿಣeiಟಿಜiಚಿ.mಥಿgov.iಟಿ/sbmg-iಟಿಟಿovಚಿಣioಟಿ-ಛಿhಚಿಟಟeಟಿge/ ವೆಬ್‌ಸೈಟ್‌ನಲ್ಲಿರುವ ಸ್ಪರ್ಧೆಯ ಅರ್ಜಿಯಲ್ಲಿ ಆಗಸ್ಟ್ ೧೫ ರೊಳಗಾಗಿ ನಮೂದಿಸಬೇಕಿದೆ.