ಶನಿವಾರಸಂತೆ, ಜೂ. ೨೬: ಕೊಡ್ಲಿಪೇಟೆಯಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಯುವ ವೈದ್ಯ ಡಾ. ವೈಶಾಕ್ ಅವರು ಮಾಡುತ್ತಿದ್ದು, ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ದಾನಿ ಶಿವಪ್ರಸಾದ್ ಅವರು ಆಹಾರದ ಪೊಟ್ಟಣಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಡಾ. ವೈಶಾಕ್ ಅವರು ಆಹಾರದ ಖರ್ಚು-ವೆಚ್ಚಗಳನ್ನು ಭರಿಸುತ್ತಿದ್ದಾರೆ. ಕರೆ ಮಾಡಿದರೆ (ಮೊಬೈಲ್ ನಂ. ೯೯೮೬೯೪೮೦೬೧) ವೈದ್ಯಕೀಯ ಸಲಹೆಯನ್ನೂ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಡಾ. ವೈಶಾಕ್ ಕೊಡ್ಲಿಪೇಟೆಯ ಹೊಸಮುನ್ಸಿಪಾಲಿಟಿಯ ನಿವಾಸಿ ರೋಹಿಣಿ ಹಾಗೂ ದಿ. ಸುರೇಂದ್ರ ದಂಪತಿಯ ಪುತ್ರ.