ಸ್ನಾತಾನಾಂ ಸರ್ವಪಾಪಘ್ನೀ ಸರ್ವಕಾಮಸಮೃದ್ಧಿದಾ ||೫೮||

ಮೋಕ್ಷ ಲಕ್ಷಿö್ಮÃಪ್ರದಾ ದೇವೀ ಸರ್ವಯಜ್ಞಫಲ ಪ್ರದಾ |

ಷಟ್‌ಷಷ್ಟಿಕೋಟಿ ತೀರ್ಥಾನಿ ದ್ವಿಸಪ್ತ ಭುವನೇಷುಚ ||೫೯||

ತಾನಿಚಾಯಾಂತಿ ಕಾವೇರ್ಯಾಂ ಸ್ವಾಘಾಘುವಿನಿವರ್ತಯೇ |

ಸ್ನಾತುಂ ತುಲಾಗತೇಭಾನೌಕೇನವಾ ವರ್ಣ್ಯತೇಹಿಸಾ ||೬೦||

ಅಯುತಂ ಶರದಾಂ ಶ್ರೇಷ್ಠ ಸಹಸ್ರವದನೈರ್ವದನ್ |

ಪಾರಣಾಸ್ನೋತಿ ಕಾವೇರ್ಯಾ ಮಹಾತ್ಮö್ಯಸ್ಯನಸಂಶಯಃ ||೬೧||

ತೀರಯೋರುಭಯೋರ್ಯಸ್ಮಾತ್ ಕಾವೇರ್ಯಾಸ್ಯಹ್ಯಾಭೂಧರ್ಣತ್|

ಆಸಾಗರಂ ಶಿವಕ್ಷೇತ್ರ ವಿಷ್ಣುಕ್ಷೇತ್ರಾಣಿಚಾಂತರಾ ||೬೨||

ಮುನೀನಾಮಾಶ್ರಮಾಧಿವ್ಯಾಸ್ಪರ್ವಸಿದ್ಧಿ ವಿಧಾಯಿನಃ |

ತಪಃ ಪ್ರಾರಂಭಮಾತ್ರೇಣ ಸಂಪೂರ್ಣಫಲದಾನೃಣಾA ||೬೩||

ಕಾವೇರಿ ಮಹಿಮಾಕೇನ ವರ್ಣ್ಯತೇಯುಗಕೋಟಿಭಿಃ|

ವಿಧೇರ್ನಾರಾಯಣಾಚ್ಛಂಛೋಋತAಸತ್ಯA ಜಗತ್ರಯೇ ||೬೪||

ಆಗ್ನೇಯ ಪುರಾಣದಲ್ಲಿನ ತುಲಾ ಕಾವೇರಿ ಮಹಾತ್ಮೆöÊ ಕುರಿತು ಅಗಸ್ತö್ಯರು ಸತ್ಯಸಂಧನಾದ ಹರಿಶ್ಚಂದ್ರ ಮಹಾರಾಜನಿಗೆ ಹೀಗೆ ಹೇಳುತ್ತಾರೆ.

ತುಲಾ ಮಾಸದಲ್ಲಿ ಕಾವೇರಿಯು ಎಲ್ಲಾ ತೀರ್ಥಗಳನ್ನು ಒಳಗೊಂಡಿರು ತ್ತದೆ. ಈ ಸಮಯದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿದವರ ಪಾಪಗಳೆಲ್ಲವೂ ನಿವಾರಣೆಯಾಗುತ್ತವೆ. ಇಚ್ಛೆಗಳು ಪೂರ್ಣಗೊಳ್ಳುತ್ತವೆ ||೫೮||

ಅವರು ಧನಿಕರೂ ಆಗಿ ಯಜ್ಞ-ಯಾಗಾದಿಗಳು ಫಲಪ್ರದವಾಗಿ ಮೋಕ್ಷವನ್ನು ಹೊಂದುತ್ತಾರೆ. ಹದಿನಾಲ್ಕು ಲೋಕಗಳಲ್ಲಿರುವ ಅರುವತ್ತಾರು ಕೋಟಿ ತೀರ್ಥಗಳು ಕಾವೇರಿಯಲ್ಲಿ ಐಕ್ಯವಾಗುತ್ತವೆ ||೫೯||

ಪಾಪ ಪ್ರವಾಹದಿಂದ ಪಾರಾಗಲು ಯಾ ಪಾಪ ಪ್ರವಾಹವನ್ನು ದಾಟಲು ಸೂರ್ಯನು ತುಲಾರಾಶಿಯಲ್ಲಿರುವಾಗ ಕಾವೇರಿಯಲ್ಲಿ ಸ್ನಾನ ಮಾಡಲು ಯಾರಿಂದ ನಿರ್ದೇಶಿಸಲ್ಪಡುತ್ತದೋ ||೬೦||

ಅಥವಾ ಕಾವೇರಿ ಮಹಾತ್ಮೆöÊಯನ್ನು ವಿಷ್ಣುಸನ್ನಿಧಿಯಲ್ಲಿ ಹೇಳಿದರೂ ಯಾ ಕೇಳಿದರೂ ಪಾಪ ವಿಮೋಚನೆಯಾಗಿ ಆತನು ಶ್ರೇಷ್ಠ ವ್ಯಕ್ತಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ||೬೧||

ಕಾವೇರಿಯ ಎರಡು ತೀರಗಳಾದ ಪಶ್ಚಿಮ ಘಟ್ಟದಿಂದ (ಸಹ್ಯಾದ್ರಿ ಯಿಂದ) ಸಾಗರದವರೆಗೂ ಶಿವಕ್ಷೇತ್ರ ವಿಷ್ಣುಕ್ಷೇತ್ರಗಳ ನಡುವೆ ||೬೨||

ಋಷಿಮುನಿಗಳ ಆಶ್ರಮಾದಿ ದಿವ್ಯ ಸನ್ನಿಧಿಗಳಲ್ಲಿ ತಪಸ್ಸನ್ನು ಆರಂಭಿಸುವುದರಿAದ ಇಚ್ಛಿತ ಫಲ ಪ್ರಾಪ್ತವಾಗುತ್ತದೆ. ||೬೩||

ಕೋಟಿ-ಕೋಟಿ ಯುಗಗಳಿಂದ ಕಾವೇರಿ ಮಾಹಾತ್ಮೆöÊಯು ಯಾರಿಂದ ವರ್ಣಿಸಲ್ಪಟ್ಟಿದೆಯೋ ಅದು ತ್ರಿಲೋಕಗಳಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರರ (ತ್ರಿಮೂರ್ತಿಗಳ) ಹೊರತಾಗಿಯೂ ಸತ್ಯವಾಗಿದೆ ||೬೪||

ಕಾವೇರ್ಯಾವೀಪ ಯೋ ನದ್ಯಾಃ ಆವರ್ತಾಸ್ಯುರ್ಜಲಾಶಯಾಃ |

ದೇವತಾವಾಲುಕಾಸ್ತಸ್ಯಾ ಸರ್ವತೀರ್ಥಫಲಂಲಭೇತ್ ||೬೫||

ಯಾವಂತಃ ಪಾಂಸವೋಭೂಮೌಯಾವAತೋವ್ಯೋ ಮ್ನಿತಾರಕಾಃ|

ಯಾವಂತೋವರ್ಷ ಧಾರಾಚಸೂರ್ಯಾಭೂಮೌ ತೃಣಾನಿಚ ||೬೬||

ತಾವಧ್ಭಿಸ್ತೀರ್ಥ ಸಂಘೈಶ್ಚ ಕಾವೇರಿ ಸೇವ್ಯತೇ ಸದಾ||

ಯಾವಂತ್ಯೋದಿAದವಸ್ತಸ್ಯಾಃ ಪುರಾಃ ಕಾವೇರಿ ಪಾಥಸಃ ||೬೭||

ತಾವತ್ತೀರ್ಥಜಲಾಕಾರಾ ಕಾವೇರೀತ್ಯವಧಾರಯ |

ಏಕಯ್ಯೆವಸಮುದ್ಭೂತಾಪಯೋಬ್ಧೇಕತಿ ಶ್ರೀಕರಾಃ ||೬೮||

ತಚ್ಛಂಬ ತೀರ್ಥಯೋಯಾಘೈರ್ವಕ್ರಗತ್ಯಃ ಕವೇರಜಾಃ |

ಅನೇಕಕೋಟಿ ಬ್ರಹ್ಮಾಂಡ ಮಧ್ಯಸ್ಥಾತೀರ್ಥ ಕೋಟಯಃ ||೬೯||

ಕಾವೇರ್ಯಾಂ ಯೋಜಿತಾ ತಸ್ಮಾತ್ಕೇನ ವರ್ಣ್ಯೂಕವೇರಜಾ|

ಅಸ್ಯಾಂ ತುಲಾಗತೇ ಭಾನೌಮಾಸಿಯ ಸ್ನಾತಿಮಾನವಃ ||೭೦||

ಸಮುಕ್ತಸ್ಸರ್ವಪಾಪೇಭ್ಯಃ ಶಿವಲೋಕೇಮಹೀಯತೇ|

ತಸ್ಮಾತ್ವಮಪಿ ರಾಜೇಂದ್ರ ಸ್ನಾತ್ವಾಕಾಪಾಥಸೀತ್ವಯಾ||೭೦||

ತುಲಾಗತೇ ದಿವಾಕರೇ ಸರ್ವಾನ್ ಕಾಮಾನವಾಪ್ಸö್ಯಸಿ|

ತಚ್ಛುತ್ವಾಸತಯೋರ್ವಾಕ್ಯಂ ಹರಿಶ್ವಂದ್ರೋತಿ ವಿಸ್ಮಿತಃ ||೭೨||

ಹರಿಶ್ಚಂದ್ರ ಉವಾಚ

ಸಹ್ಯಜಾಯಾಂ ತುಲಾಮಾಸೇವೈಶಾಖೈ ರ್ನರ್ಮದಾಜಲೇ |

ಕಥಂಸ್ನಾನAತು ಕರ್ತವ್ಯಂ ಕೋನಿಧಿಃಕಿಂ ಫಲಂ ಭವೇತ್ ||೭೫||

ಸರ್ವಧಮೇಷ್ಟಾತಿಶಯಃ ಈಶಮಾಧವಯೋಃ ಕಥಂ |

ಕಾದೇವತಾಸ ಕಿಂದಾನA ಕದಾಸ್ನಾನಂ ಮುನೀಶ್ವರಾಃ ||೭೬||

ಮಮಸರ್ವಂ ವಿಸ್ತರೇಣ ಬ್ರೂತಸ್ನಾನವಿಧಿಂದ್ವಿಜಾಃ |೭೭||

ಕಾವೇರಿಯು ಮಡುವಾಗಿ, ಜಲಾಶಯಗಳಾಗಿ ಹರಿದು, ಅದರ ತೀರದಲ್ಲಿ (ಮರಳಿನಲ್ಲಿ) ದೇವತೆಗಳು ವಾಸಿಸುವುದರಿಂದ ಕಾವೇರಿಗೆ ಸರ್ವ ತೀರ್ಥಗಳ ಫಲವು ಲಭಿಸುತ್ತದೆ ||೬೫||

ಎಂದಿನವರೆಗೆ ಧೂಳಿನ ಕಣ ಭೂಮಿಯ ಮೇಲೆ ಇರುವುದೋ, ಎಂದಿನವರೆಗೆ ತಾರೆಗಳು ಆಕಾಶದಲ್ಲಿ ಮಿನುಗುವವೋ, ಎಂದಿನವರೆಗೆ ಮಳೆ ಸುರಿಯುವುದೋ, ಎಂದಿನವರೆಗೆ ಸೂರ್ಯನು ವ್ಯೋಮದಲ್ಲಿರುವನೋ, ಎಂದಿನವರೆಗೆ ಭೂಮಿಯಲ್ಲಿ ಹುಲ್ಲು ಬೆಳೆಯುವುದೋ ||೬೬||

ಅಲ್ಲಿಯವರೆಗೆ ಪುಣ್ಯತಿರ್ಥಗಳ ಸಂಗಮದಿAದ ಕಾವೇರಿಯು ಯಾವಾಗಲೂ ಪೂಜಿಸಲ್ಪಡುತ್ತಾಳೆ. ಕೊಳದ ರೂಪದಲ್ಲಿ ಇರುವ ಕಾವೇರಿ ಜಲದ ಬಿಂದುಗಳನ್ನು ಕಾವೇರಿ ತೀರ್ಥವೆಂದು ತಿಳಿದುಕೋ ||೬೭||

ಕಾವೇರಿಯ ಪವಿತ್ರ ನೀರಿನ ಪ್ರವಾಹದಿಂದ ಉಂಟಾದ ಕಾವೇರಿಯ ಉಪನದಿಗಳು ವಕ್ರಗತಿಯಲ್ಲಿ ಸಾಗುತ್ತಿವೆ. ಸಾಗರದ ಜಲಶಾರಿಯು ಕಾವೇರಿಯಿಂದಲೇ ಉಂಟಾದುದು ||೬೮||

ಅನೇಕ ಕೋಟಿ ಬ್ರಹ್ಮಾಂಡ ಮಧ್ಯದಲ್ಲಿ ಹರಿಯುತ್ತಿರುವ ಕೋಟಿ ತೀರ್ಥಗಳು ಕಾವೇರಿಯೊಡಗೂಡುವುದರಿಂದ ಯಾರು ತಾನೇ ಕವೇರನ ಪುತ್ರಿಯನ್ನು (ಕಾವೇರಿಯನ್ನು) ವರ್ಣಿಸಲಾರರು. ಸೂರ್ಯನು ತುಲಾರಾಶಿಯಲ್ಲಿರುವಾಗ ಕಾವೇರಿಯಲ್ಲಿ ಸ್ನಾನ ಮಾಡಬೇಕು ||೬೯, ೭೦||

ಯಾವನು ಈ ರೀತಿ ತುಲಾ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡುತ್ತಾನೋ, ಆತನು ಸರ್ವ ಪಾಪಗಳಿಂದ ಮುಕ್ತಿ ಹೊಂದಿ ಶಿವಲೋಕ (ಕೈಲಾಸ) ವನ್ನು ಸೇರುತ್ತಾನೆ ||೭೧||

ಹಾಗಾಗಿ ರಾಜಾಧಿರಾಜ ಮಹಾರಾಜನೇ ನೀನು ಕೂಡ ಸೂರ್ಯನು ತುಲಾರಾಶಿಯಲ್ಲಿರುವಾಗ ಕಾವೇರಿಯಲ್ಲಿ ಸ್ನಾನ ಮಾಡಿದರೆ ನಿನ್ನ ಇಷ್ಟಾರ್ಥಗಳು ಸಿದ್ಧಿಸುತ್ತವೆ’’ ಅಗಸ್ತö್ಯರ ಈ ಮಾತುಗಳನ್ನು ಕೇಳಿ ಹರಿಶ್ಚಂದ್ರನು ವಿಸ್ಮಿತನಾದನು ||೭೯||

ಹೇ ಮುನಿಶ್ರೇಷ್ಠರೇ, ತುಲಾ ಮಾಸದಲ್ಲಿ ಕಾವೇರಿಯಲ್ಲಿಯೂ ಮತ್ತು ವೈಶಾಖಮಾಸದಲ್ಲಿ ನರ್ಮದೆಯ ಜಲದಲ್ಲಿಯೂ ಹೇಗೆ ಸ್ನಾನ ಮಾಡಬೇಕು ? ವಿಧಿಯೇನು ? ಯಾವ-ಯಾವ ಫಲಗಳು ಪ್ರಾಪ್ತಿಯಾಗುತ್ತವೆ ? ||೭೫||

ಎಲ್ಲಾ ಧರ್ಮಗಳಲ್ಲಿಯೂ ಅತಿಶಯವಾದ ಶಿವ-ವಿಷ್ಣುವನ್ನು ಹೇಗೆ ಪೂಜಿಸಬೇಕು ? ದೇವತೆ ಯಾರು ? ದಾನಕ್ಕೆ ಯೋಗ್ಯವಾದುದೇನು ? ಮತ್ತು ಯಾವಾಗ ಸ್ನಾನ ಮಾಡಬೇಕು ಈ ಎಲ್ಲಾ ಸ್ನಾನ, ವಿಧಿ ವಿಧಾನಗಳನ್ನು ವಿಸ್ತಾರವಾಗಿ ತಿಳಿಸಿರಿ. ||೭೬ ೭೭||

ಅಗಸ್ತö್ಯ ಉವಾಚ

ಮುನಿ ಮಧ್ಯೇ ಮಹಾತೇಚಾಃ ಅಗಸ್ತೊö್ಯÃನೃಪಮ ಬ್ರವೀತ ||೧||

ಸಾಧುಪೃಷ್ಟಂ ಮಹಾಭಾಗ ಹರಿಶ್ಚಂದ್ರ ನೃಪೋತ್ತಮ |

ತುಲಾಕಾವೇರಿ ಮಹಾತ್ಮö್ಯಂ ಶ್ರೋತುಂಕೌತುಹಲAತ್ವಯಾ ||೨||

ತುಲಾಕಾವೇರಿ ಮಾಹಾತ್ಮö್ಯಂ ಮಧ್ಯಾಯಂ ಶ್ಲೋಕಮೇವಮಾ |

ಯಃ ಶಣೋತಿಪಠನ್ ಸ್ನಾತ್ವಾತಸ್ಯಪುಣ್ಯಮನಂತಕA ||೩||

ಮದೇತ್ಸಾಕ್ಷಾನ್ಮ ಹಾದೇವಾ ದೃತೇನ್ಯಃ ಕೋಪಿಭೂತಳೇ ||

ಪೂರ್ವಪುಣ್ಯ ಪ್ರಭಾವೇನ ಸಾಧುಸಂಗಸ್ತುವಭವತ್ ||೪||

ಇಷ್ಟಾಪೂರ್ತವ್ರತಶ್ಚರ್ಯಾದ್ವೇದಪಾರಾಯಣವೃತ್ಯೇಃ |

ಅನೇಕ ಜನ್ಮ ಜನ್ಮ ನಿಂ ಸಿದ್ದೆöÊ ಭವೇತ್ಸತ್ಸಂಗತಿಧ್ರುವA ||೫||

ಸತ್ಸಂಗತ್ಯಾಭವೇತ್ತುಲ್ಯ ಕಥಾಯಂ ಶ್ರವಣಾಮತಿಃ |

ಸತ್ಕಥಾ ಶ್ರವಣಾತಾಪಂ ತ್ರಿವಿಧಂ ವಶ್ಯತಿ ಧ್ರುವಂ ||೬||

ಶುದ್ಧತ್ಯಪಿಮನಃ ಪುಂಸೋ ನಿಷ್ಟಾಪಸ್ಯನ್ಯಪೋತ್ತಮ |

ಹೃದಬ್ಚೇಚಮನಃ ಶುದ್ಧೋಧ್ಯಾಯೇತ್ಪಾದಾಂ ಬುಜಂ ಹರೇಃ ||೭||

ಸಕ್ಸದ್ಧಾಯತೋಮಹಾತೇಜಾ ಭಗವಾನ್ ಪುರುಷೋತ್ತಮಂ

ತುಲಾಮಾಸೇತು ಕಾವೇರಿಸರ್ವತೀರ್ಥ ಮಹಾನದೀ ||೨||

ಪಂಚಪಾತಕ ಸಂಹರ್ತೀವಾಜಿ ಮೇಧ ಫಲಪ್ರದಾ||

ಸಹೃಜಾಯಾಸ್ತು ಮಹಾತ್ಮö್ಯಂ ವಿಸ್ತರೇಣವದೇತುಕಃ ||೯||

ಶ್ರೀಕಂಠ ವಿಶ್ವೇಶ್ವರ ಸನ್ನಿಭಾನಿಲಿಂಗಾನಿಯದ್ರೋಧಪಿ ಲಕ್ಷಕೋಟ್ಯಃ |

ಜಲಪ್ರವಾಹೇಚ ಸಹಸ್ರಕೋಟ್ಯಕವೇರಜಾಯಾಃ ಶಿವಮೂರ್ತಯಸ್ಯುಃ ||೧೦||

ಪ್ರಯಾಗಸಿ ತೀರ್ಥಾನಿಚದಿವ್ಯ ಲಿಂಗಾದಿವಾಕ ಸೋವಾಲುಕತಾಂಪ್ರಪನ್ನಾಃ |

ಅತೋನದೀ ಸಹ್ಯಗಿರಿಪ್ರಸೂತಾ ಸರಿತ್ಸುಮುಖ್ಯಾಮನುಜೈರಲಭ್ಯಃ ||೧೧||

(ಮುಂದುವರಿಯುವುದು)

(ಸAಗ್ರಹ) : ಎಸ್. ಎಸ್. ಸಂಪತ್‌ಕುಮಾರ್, ಭಾಗಮಂಡಲ.