ಮಡಿಕೇರಿ, ಜೂ. ೨೫: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಶುಕ್ರವಾರ ತೋಟಗಾರಿಕೆ ಇಲಾಖೆಯ ಹಾರಂಗಿ ಫಾರ್ಮ್ಗೆ ಭೇಟಿ ನೀಡಿದರು. ರೈತರಿಗೆ ವಿತರಿಸಲು ಸಿದ್ಧವಾಗಿರುವ ತೆಂಗಿನ ಸಸಿಗಳನ್ನು ವೀಕ್ಷಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವರದರಾಜು ಫಾರಂ ಬಗ್ಗೆ ಮಾಹಿತಿ ನೀಡಿದರು. ಕರಿಮೆಣಸು, ಕಿತ್ತಳೆ ಹಾಗೂ ಸಪೋಟ ಗಿಡಗಳನ್ನು ರೈತರಿಗೆ ಕಡಿಮೆ ದರದಲ್ಲಿ ಪೂರೈಸುತ್ತಿರುವುದಾಗಿ ತಿಳಿಸಿದರು. ಫಾರ್ಮ್ ಬೆಳವಣಿಗೆ ಬಗ್ಗೆ ತಿಳಿದುಕೊಂಡ ರವಿಕುಶಾಲಪ್ಪ ಅಧಿಕಾರಿಗಳ ಉತ್ಸಾಹವನ್ನು ಶ್ಲಾಘಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಹೊಳ್ಳ, ಹಾರಂಗಿ ಫಾರ್ಮ್ನ ಚಂದ್ರಕಲಾ ಮತ್ತಿತರರು ಈ ವೇಳೆ ಇದ್ದರು. ಇದಕ್ಕೂ ಮೊದಲು ಹಾರಂಗಿ ಅಣೆಕಟ್ಟೆಗೂ ಭೇಟಿ ಕೊಟ್ಟಿದ್ದರು.