ಕೂಡಿಗೆ, ಜೂ. ೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ವಸತಿ ರಹಿತರಿಗೆ ೩೫೪ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ. ಆದರೆ ಈ ಮನೆಗಳಲ್ಲಿ ನೈಜ ಫಲಾನುಭವಿಗಳು ವಾಸವಿಲ್ಲ ದಿರುವುದರಿಂದ ಅಧಿಕಾರಿಗಳು ಮನೆಗಳ ಪರಿಶೀಲನೆ ನಡೆಯಿತು.
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ೩೫೪ ಮನೆಗಳನ್ನು ನಿರ್ಮಿಸಲಾಗಿದ್ದು, ೮೦ಕ್ಕೂ ಅಧಿಕ ಮನೆಗಳು ಖಾಲಿ ಇರುವುದು ಪತ್ತೆಯಾಗಿದೆ. ಮನೆಗಳ ನಿರ್ಮಾಣ ಮಾಡುವ ಸಂದರ್ಭ ಹೆಸರುಗಳನ್ನು ನೋಂದಣಿ ಮಾಡಲಾಗಿತು. ನೋಂದಣಿ ಆದವರ ಹೆಸರಿನಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಮನೆಗಳಲ್ಲಿ ನೈಜ ಫಲಾನುಭವಿಗಳು ಇರಬೇಕಾದ ೮೦ಕ್ಕೂ ಹೆಚ್ಚು ಮನೆಗಳು ಖಾಲಿ ಇರುವುದು ಕಂಡುಬAದಿದೆ.
ಜಿಲ್ಲಾಡಳಿತ ಸೂಚನೆಯಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಗಿರಿಜನ ಸಮನ್ವಯ ಇಲಾಖೆ, ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿ ವಾಸಿಸುವ ಕುಟುಂಬದವರಿಗೆ ಗ್ರಾಮೀಣ ಪ್ರದೇಶದಡಿ ಹಕ್ಕುಪತ್ರ ನೀಡಬೇಕಾದ ಫಲಾನುಭವಿಗಳ ವಿವರಗಳನ್ನು ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಅಧಿಕಾರಿಗಳ ತಂಡವು ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದರಲ್ಲಿ ಕೆಲ ಮನೆಗಳಲ್ಲಿ ನೈಜ ಫಲಾನುಭವಿ ಇಲ್ಲದೆ ಬೇರೆಯವರು ವಾಸಿಸುತ್ತಿದ್ದಾರೆ. ಇನ್ನೂ ಕೆಲವು ಮನೆಗಳಲ್ಲಿ ವಾಸವಿಲ್ಲದೆ ಪಾಳು ಬಿದ್ದಿರುವುದು ಕಂಡುಬAದಿದೆ.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವಾರ್ಡ್ನ ಸದಸ್ಯರಾದ ಟಿ.ಪಿ. ಹಮೀದ್, ಪಲ್ಲವಿ ವಸತಿ ರಹಿತರಿಗೆ ನೀಡಲು ಗ್ರಾ.ಪಂ. ಕ್ರಮ ಕೈಗೊಳ್ಳುತ್ತೆ ಎಂದು ಪರಿಶೀಲನೆ ಸಂದರ್ಭ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ಅಧಿಕಾರಿ ಧರ್ಮಮ್ಮ, ಶಿಕ್ಷಕ ಅನಂದ, ಗ್ರಾಮ ಪಂಚಾಯಿತಿ ಸಿಬ್ಬಂದಿ ಶಿಶಿಧರ್ ಸೇರಿದಂತೆ ಕೇಂದ್ರದ ಮುಖ್ಯಸ್ಥರು ಹಾಜರಿದ್ದರು.
- ಕೆ.ಕೆ. ನಾಗರಾಜಶೆಟ್ಟಿ.