ಮಡಿಕೇರಿ, ಜೂ. ೨೫: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್‌ಪರಂಬು ಕೊಡವ ಹತ್ಯಾಕಾಂಡ ಸ್ಮಾರಕದಲ್ಲಿ ಅಗಲಿದ ಹಿರಿಯರಿಗೆ ಪುಷ್ಪನಮನ ಸಲ್ಲಿಸಲಾಯಿತು. ೧೭೮೫ ನ ಡಿಸೆಂಬರ್ ೧೨ ರಂದು ಟಿಪ್ಪು ನೇತೃತ್ವದಲ್ಲಿ ದೇವಾಟ್‌ಪರಂಬುವಿನಲ್ಲಿ ಅನೇಕ ಕೊಡವರನ್ನು ಮೋಸ ಮಾಡಿ ಹತ್ಯೆಮಾಡಲಾಗಿತ್ತು. ಈ ದುರ್ಘಟನೆಯಲ್ಲಿ ಹುತಾತ್ಮರಾದವರಿಗೆ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರ ನೇತೃತ್ವದಲ್ಲಿ ಪುಷ್ಪನಮನ ಅರ್ಪಿಸಲಾಯಿತು.

ಹಿರಿಯರ ಆಶೀರ್ವಾದ ಪಡೆದು ಕೊಡವ ಜನಾಂಗಕ್ಕೆ ಎಸ್.ಟಿ ಟ್ಯಾಗ್ ನೀಡುವ ಸಂಬAಧ ಹೋರಾಟದಲ್ಲಿ ಯಶಸ್ಸು ಸಿಗಬೇಕೆಂಬುದಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭ ಬೇಂಗ್‌ನಾಡ್ ಸಿ.ಎನ್.ಸಿ ಸ್ವಯಂ ಸೇವಕರಾದ ಪಟ್ಟಮಾಡ ಕುಶ, ಮಂದಪAಡ ಮನೋಜ್ ಮಂದಣ್ಣ, ಸಿ.ಸತೀಶ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್ ಹಾಗೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಎಮ್ ಪಾರ್ವತಿ ಹಾಜರಿದ್ದರು.