ಸಿದ್ದಾಪುರ, ಜೂ. ೨೫: ಸಿದ್ದಾಪುರದ ಮಾರುಕಟ್ಟೆಯ ಸೀಲ್‌ಡೌನ್ ವಿಚಾರವಾಗಿ ವರದಿ ಗಾರಿಕೆಗಾಗಿ ತೆರಳಿದ ಪತ್ರಕರ್ತನ ಮೇಲೆ ಎಂ.ಜಿ ರಸ್ತೆಯ ನಿವಾಸಿಯೊಬ್ಬರು ಹಲ್ಲೆ ನಡೆಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ರಕರ್ತ ಎಸ್.ಎಂ ಮುಬಾರಕ್ ಸೇರಿದಂತೆ ಪತ್ರಕರ್ತರು ಸೀಲ್‌ಡೌನ್ ವಿಷಯಕ್ಕೆ ಸಂಬAಧಿಸಿದ ಸುದ್ದಿಗೆ ತೆರಳಿದ್ದರು.

ಈ ಸಂದರ್ಭ ಎಂ.ಜಿ ರಸ್ತೆ ನಿವಾಸಿ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಎಂ.ಹೆಚ್ ಮೂಸ ಎಂಬವರು ಮುಬಾರಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಂಡನೆ : ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸಿದ್ದಾಪುರ ನಗರ ಪತ್ರಕರ್ತರ ಸಂಘ ಒತ್ತಾಯಿಸಿದ್ದು, ಪ್ರಕರಣವನ್ನು ಖಂಡಿಸಿದೆ.