ವೀರಾಜಪೇಟೆ, ಜೂ. ೨೩: ಚಾಮಿಯಾಲ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಪಕ್ಷದ ಮುಖಂಡರೊAದಿಗೆ ತೆರಳಿ ನಿವಾಸಿಗಳ ಸಮಸ್ಯೆಯನ್ನು ವಿಚಾರಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಗಣೇಶ್, ನದಿಯಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ. ನಿರಾಶ್ರಿತರಿಗೆ ಸವಲತ್ತುಗಳನ್ನು ನೀಡದೆ ಸ್ಥಳಾಂತರಗೊಳಿಸುತ್ತಿರುವುದು ಸರಿಯಲ್ಲ. ಸರ್ಕಾರ ಮತ್ತು ಜಿಲ್ಲಾಡÀಳಿತವು ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನಂತರದಲ್ಲಿ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ವೀರಾಜಪೇಟೆ ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ಮಂಜುನಾಥ್ ಮಾತನಾಡಿ, ವೀರಾಜಪೇಟೆ ನಗರದ ಅಯ್ಯಪ್ಪ ಬೆಟ್ಟ, ನೆಹರು ನಗರ, ಮತ್ತು ಅರಸು ನಗರ ಸೇರಿದಂತೆ ತೋರ ಗ್ರಾಮದ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವAತೆ ನೋಟೀಸ್ ನೀಡಲಾಗಿದೆ. ಈ ಪ್ರದೇಶದಲ್ಲಿ ವಾಸ ಮಾಡುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ರಾಜ್ಯ ಸರಕಾರÀ ಮತ್ತು ಜಿಲ್ಲಾಡಳಿತವು ಪರ್ಯಾಯ ವ್ಯವಸ್ಥೆಯನ್ನು ಒದಗಿಸಿ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಜಿಲ್ಲಾಡÀಳಿತವನ್ನು ಒತ್ತಾಯಿಸಿದರು.

ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇಸಾಕ್ ಖಾನ್, ಯುವ ಜೆ.ಡಿ.ಎಸ್. ಘಟಕದ ಪ್ರಧಾನ ಕಾರ್ಯದÀರ್ಶಿ ಜಿಲ್ಲಾಡÀಳಿತವನ್ನು ಒತ್ತಾಯಿಸಿದರು