ಮಡಿಕೇರಿ, ಜೂ. ೨೩: ಕಗ್ಗೋಡ್ಲು ಬಳಿಯ ತೋಟ ವೊಂದರಲ್ಲಿ ನಿನ್ನೆ ಗೋಹತ್ಯೆ ಮಾಡಿದ ಪ್ರಕರಣವೊಂದು ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸ್ಥಳೀಯ ಇಬ್ಬರು ವ್ಯಕ್ತಿಗಳಿಗೆ ದುಷ್ಕರ್ಮಿಗಳು ಬಂದೂಕು ತೋರಿಸಿ ಪರಾರಿ ಯಾಗಿದ್ದಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಎಂಬವರು ನಿನ್ನೆ ದಿನ ಸಂಜೆ ತಮ್ಮ ಕಾರಿನಲ್ಲಿ ಮಡಿಕೇರಿಯಿಂದ ಹಾಕತ್ತೂರಿಗೆ ತೆರಳುತ್ತಿದ್ದ ಸಂದರ್ಭ ಕಗ್ಗೋಡ್ಲು ಬಳಿಯ ದ್ವಾರಕ ತೋಟದ ಸಮೀಪ ಗುಂಡಿನ ಶಬ್ಧ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಯತೀಶ್ ಹಾಗೂ ಕಾರಿನಲ್ಲಿದ್ದ ಅವರ ಸ್ನೇಹಿತ ತೋಟದೊಳಗೆ ತೆರಳಿದ್ದಾರೆ. ಈ ಸಂದರ್ಭ ಅಲ್ಲಿ ನಾಲ್ಕೆöÊದು ಮಂದಿ ದುಷ್ಕರ್ಮಿಗಳು ಬಂದೂಕಿನೊAದಿಗೆ ಗೋಮಾಂಸ ಮಾಡುತ್ತಿದ್ದುದು ಕಂಡುಬAದಿದ್ದು, ಯತೀಶ್ ಹಾಗೂ ಅವರ ಸ್ನೇಹಿತನನ್ನು ಕಂಡ ದುಷ್ಕರ್ಮಿಗಳು ಅವರತ್ತ
ಬಂದೂಕು ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಯತೀಶ್ ಪೊಲೀಸ್ ದೂರು ನೀಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಅಲ್ಲಿದ್ದ ಗೋಮಾಂಸ, ಚಾಕು ಸೇರಿದಂತೆ ಘಟನೆ ನಡೆದ ಸ್ಥಳದಿಂದ ಅನತಿ ದೂರದಲ್ಲಿದ್ದ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ. ದುಷ್ಕೃತ್ಯ ವೆಸಗಿದವರಾರು; ಅಲ್ಲಿದ್ದ ಕಾರು ದುಷ್ಕರ್ಮಿಗಳಿಗೆ ಸೇರಿದ ಕಾರೊ ಇಲ್ಲವೊ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ರವಿಕಿರಣ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಘಟನೆಗೆ ಸಂಬAಧಿಸಿದAತೆ ಯತೀಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ದ್ವಾರಕ ತೋಟದಲ್ಲಿ ಕೆಲಸ ಮಾಡುವ ಅಸ್ಸಾಂ ಕಾರ್ಮಿಕರ ಸಹಾಯದಿಂದ ಈ ತೋಟದಲ್ಲಿ ಆಗಿಂದಾಗ್ಗೆ ಇಂತಹ ದುಷ್ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯತೀಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.
(ಮೊದಲ ಪುಟದಿಂದ) ಅಲ್ಲಿನ ಕೆಲವು ಸ್ಥಳೀಯರ ಪ್ರಕಾರ ದ್ವಾರಕ ತೋಟದಲ್ಲಿ ಗುಂಡಿನ ಶಬ್ಧ ಕೇಳಿ ಬಂದ ಬಗ್ಗೆ ಮಾಹಿತಿ ಪಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತರುಗಳು ತೋಟವನ್ನು ಸುತ್ತುವರಿದು ದುಷ್ಕರ್ಮಿಗಳ ಸೆರೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯತೀಶ್ ಹಾಗೂ ಅವರ ಸ್ನೇಹಿತ ಘಟನಾ ಸ್ಥಳಕ್ಕೆ ತಲುಪಿದ್ದರಿಂದ ಅವರಿಬ್ಬರನ್ನು ಕಂಡ ದುಷ್ಕರ್ಮಿಗಳು ಅವರತ್ತ ಬಂದೂಕು ತೋರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು ಎನ್ನಲಾಗಿದ್ದು, ಘಟನೆಯನ್ನು ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಕಠಿಣ ಕ್ರಮಕ್ಕೆ ಒತ್ತಾಯ
ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಪ್ರಕರಣಗಳು ನಿರಂತರವಾಗಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಸಂಘಟನೆಗಳು ಮಾತನಾಡಿದರೆ ಕೋಮುವಾದ, ಕೋಮು ಸಂಘರ್ಷವಾಗುತ್ತದೆ. ಆದ್ದರಿಂದ ಪೊಲೀಸರೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ನ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಒತ್ತಾಯಿಸಿದ್ದಾರೆ.
ಕಗ್ಗೋಡ್ಲು ಗ್ರಾಮದಲ್ಲಿ ನಡೆದ ಗೋಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಅವರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕೆAದು ಒತ್ತಾಯಿಸಿದ್ದಾರೆ. ಪೊಲೀಸರು ಗೋಹತ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲರಾದಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಸುರೇಶ್ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.