x

ಮಡಿಕೇರಿ, ಜೂ. ೨೪: ಲಾಕ್‌ಡೌನ್ ನಡುವೆ ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಡೆದು ಪರಿಶೀಲಿಸಿ ದಂಡ ವಿಧಿಸಿದ್ದಾರೆ. ಬೆಳಿಗ್ಗೆಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸಕಾರಣವಿಲ್ಲದ ರಸ್ತೆಗಿಳಿದವರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಿ ವಾಪಸ್ ಕಳುಹಿಸಿದರು.

ಕಾರ್ಯಾಚರಣೆ ಸಂದರ್ಭ ಬೈಕ್ ಹಾಗೂ ಕಾರ್‌ಗಳಲ್ಲಿ ಪ್ರವಾಸಿಗರ ಓಡಾಟ ಕಂಡುಬAತು.

ನಗರ ಪೊಲೀಸರು ಹಾಗೂ ಸಂಚಾರಿ ದಳದ ಸಿಬ್ಬಂದಿಗಳು ಅನಗತ್ಯ ಸಂಚಾರ, ಮಾಸ್ಕ್ ಧರಿಸದವರ ಮೇಲೆ ದಂಡ ವಿಧಿಸಿದ್ದು, ಸುಮಾರು ೧೨ ಸಾವಿರ ರೂಪಾಯಿ ದಂಡದ ಹಣ ಸಂಗ್ರಹಗೊAಡಿದೆ.