ವರದಿ: ಉಷಾಪ್ರೀತಮ್

*ವೀರಾಜಪೇಟೆ, ಜೂ. ೨೩: ಕೊರೊನಾ ಎರಡನೇ ಅಲೆ ಬಳಿಕ ಹಲವಾರು ದಾನಿಗಳು ಕಷ್ಟದಲ್ಲಿರು ವವರಿಗೆ ಸಹಾಯ ಆಗಲೆಂದು ಆಹಾರ ಸಾಮಗ್ರಿ, ವೈದ್ಯಕೀಯ ಸಲಕರಣೆಗಳನ್ನು ಜಿಲ್ಲೆಯ ಒಳಗಿನ ಮತ್ತು ಹೊರಗಿನ ದಾನಿಗಳು ಮಾಡಿದ್ದಾರೆ.

ಆದರೆ ವೀರಾಜಪೇಟೆ ತಾಲೂಕಿನಲ್ಲಿ ಬಾಳುಗೋಡುವಿನ ಆದಿವಾಸಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲೆಂದು ಬಂದಿದ್ದ ಭೂಮಿ ಮತ್ತು ವಸತಿ ಹಕ್ಕು ರಾಜ್ಯ ಸಮಿತಿ ಸದಸ್ಯರಿಬ್ಬರೂ ಬೇರೆಯದ್ದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಸ್ಯೆ ಈಗ ಬೇರೆಯದ್ದೇ ತಿರುವುಗಳನ್ನು ಪಡೆದುಕೊಂಡಿದೆ.

ವೀರಾಜಪೇಟೆ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಭೂಮಿ ಮತ್ತು ವಸತಿ ಸಮಿತಿಯ ಸದಸ್ಯರುಗಳಾದ ಹೇಮಂತ್ ಹಾಗೂ ಮೋಹನ್ ಕುಮಾರ್ ಇತ್ತೀಚೆಗೆ ಬೆೆÃತ್ರಿ ಬಳಿ ತೆರಳುತ್ತಿದ್ದಾಗ ಪೊಲೀಸರು ಇವರನ್ನು ತಡೆದು ವಿಚಾರಿಸಿದಾಗ ‘ನಾವು ಮಂಡ್ಯದವರು ಆಹಾರ ಕಿಟ್ ವಿತರಣೆ ಮಾಡಲು ಬಂದಿದ್ದೇವೆ’ ಎಂದು ತಿಳಿಸಿದ್ದಾರೆ.

‘ಹೊರ ಜಿಲ್ಲೆಯವರಾದ ಕಾರಣ ನೀವು ಹೀಗೆ ಸಂಚಾರ ಮಾಡಲು ಸಾಧ್ಯವಿಲ್ಲ, ಹದಿನಾಲ್ಕು ದಿನ ಕ್ವಾರಂಟೈನ್‌ನಲ್ಲಿರಬೇಕು’ ಎಂದು ತಿಳಿಸಿದ ಮೇರೆಗೆ ಇವರು ಅಲ್ಲಿಂದ ವಾಪಸ್ ಮರಳಿ ಬಂದು ವೀರಾಜಪೇಟೆಯ ಬಾಳುಗೋಡು ಪೈಸಾರಿಯಲ್ಲಿ ಆಹಾರ ಕಿಟ್ ವಿತರಿಸಲು ಮುಂದಾಗಿದ್ದಾರೆ. ವಿಚಾರ ತಿಳಿದ ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ‘ನೀವು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೀರಿ’ ಎಂದು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಕೂರಿಸಿ ಕೊಂಡಿದ್ದರು. ಅವರ ಬಗ್ಗೆ ಮಾಹಿತಿ ಕಲೆಹಾಕಿ ಬಳಿಕ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದರೂ ಅವರ ಮೇಲೆ ಯಾವದೇ ದೂರು ದಾಖಲಿಸದೆ ಕೊಡಗಿನ ಗಡಿಯವರೆಗೂ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ.

ಆ ಬಳಿಕ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಸದಸ್ಯರು ಹಾಗೂ ಈ ಸಮಿತಿಯ ಜಿಲ್ಲಾಧ್ಯಕ್ಷರು ಎಸ್.ಪಿ.ಯವರ ಬಳಿ ನಿಯೋಗ ತೆರಳಿ ಘಟನೆಯನ್ನೆಲ್ಲಾ ವಿವರಿಸಿ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯೂ ಹೇಗೆ ಜಾರಿಗೆ ಬಂದಿತು, ಆ ಸಮಿತಿಯ ಸದಸ್ಯರು ಯಾವ ಹೋರಾಟದ ಹಿನ್ನೆಲೆಯಿಂದ ಬಂದವರು ಎನ್ನುವ ವಿಚಾರಗಳನ್ನು ವಿವರಿಸಲಾಗಿದೆ. ಅಲ್ಲದೆ ಜನಸಹಾಯ ಕೆಸಿವಿಟಿಯ ಸದಸ್ಯರು ಕೊಡಗನ್ನು ಒಳಗೊಂಡAತೆ ಇಡೀ ರಾಜ್ಯದಲ್ಲಿ ಸಂಚರಿಸಿ ಕಾರ್ಯ ನಿರ್ವಹಿಸಲು ಪ್ರಿನ್ಸಿಪಾಲ್ ಸೆಕ್ರಟರಿ ಆದ ಉಮಾ ಮಹಾದೇವನ್ ಅವರು ಪರವಾನಗಿ ಪತ್ರ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಅಲ್ಲದೇ ಈ ಹೇಮಂತ್ ಮತ್ತು ಮೋಹನ್ ಕುಮಾರ್‌ರನ್ನು ಏತಕ್ಕಾಗಿ ಜಿಲ್ಲೆಯ ಆಚೆಗೆ ಬಿಡಲಾಯಿತು. ಕೊಡಗಿಗೆ ಹೊರಜಿಲ್ಲೆಯವರು ಬರಬಾರದೇ ಎಂದೆಲ್ಲಾ ಸ್ಪಷ್ಟನೆಗಳನ್ನು ಕೇಳಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಪೊಲೀಸರು ಕೋವಿಡ್ ನಿಯಮ ಗಳನ್ನು ಉಲ್ಲಂಘನೆ ಮಾಡಿ ಜಿಲ್ಲೆಯೊಳಗೆ ಬಂದು ತಂಗಿದಕ್ಕಾಗಿ ಠಾಣೆಗೆ ಕರೆಸಿಕೊಂಡು ವಿಚಾರಿಸಿದ್ದಾಗಿ ತಿಳಿಸಿದ್ದಾರೆ. ಹಾಗಿದ್ದರೆ ಇವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಯಲ್ಲಿ ಮೊಕದ್ದಮೆಯನ್ನು ಏಕಾಗಿ ದಾಖಲಿಸಿಲ್ಲ ಎನ್ನುವುದು ಕೂಡ ಒಂದು ಪ್ರಶ್ನೆಯಾದರೆ, ಚೆಕ್ ಪೋಸ್ಟ್ನಲ್ಲಿ ಇವರು ಹೊರಜಿಲ್ಲೆಯ ವರಾಗಿದ್ದು ಜಿಲ್ಲೆಯೊಳಗೆ ಪ್ರವೇಶ ಮಾಡಿದರೂ ಇವರ ಕೈಗೆ ಸೀಲ್ ಯಾಕಾಗಿ ಹಾಕಲಿಲ್ಲ ಎನ್ನುವುದು ಹಲವು ಅನುಮಾನಗಳನ್ನು ಮೂಡಿಸುತ್ತದೆ.

ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿ ಒಂದು ದಿನ ಮೊದಲು ಕೊಡಗಿನಲ್ಲಿ ತಂಗಿ ಬಳಿಕ ಪೊಲೀಸರು ಕ್ವಾರಂಟೈನ್‌ನಲ್ಲಿರಲು ಸೂಚಿಸಿದರೂ ಮತ್ತೆ ಆಹಾರ ಕಿಟ್ ಕೊಡಲು ಹೋಗಿರುವದು ಸಮಿತಿಯವರ ತಪ್ಪು ಕಂಡುಬರುತ್ತಿದೆ. ಅಲ್ಲದೆ ಸಮಿತಿಯು ಈ ರಾಜ್ಯ ಸದಸ್ಯರುಗಳು ಇನ್ನಿತರ ಚಟುವಟಿಕೆ ಗಳಲ್ಲೂ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಇರುವುದರಿಂದ ಅವರುಗಳ ಮೇಲೆ ನಿಗಾವಹಿಸುತ್ತಿರುವು ದಾಗಿಯೂ ಪೊಲೀಸ್ ಮೂಲ ಗಳಿಂದ ತಿಳಿದುಬಂದಿದೆ.

ಪೊಲೀಸ್ ಹಾಗೂ ಜಿಲ್ಲಾಡಳಿತ ಕೊರೊನಾ ನಿಯಾಮವಳಿ ಕಟ್ಟುನಿಟ್ಟಾಗಿ ಪಾಲಿಸಿ ಹಾಲು, ಔಷಧಿ ಕೊಳ್ಳಲು ಹೋಗುವವರ ಮೇಲೆಲ್ಲಾ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಪ್ರಕರಣ ದಾಖಲು ಮಾಡುತ್ತಿರುವಾಗ ಈ ಸಮಿತಿಯವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಕೊಡಗು ಜಿಲ್ಲೆಯಲ್ಲಿ ಸಂಚರಿಸು ತ್ತಿದ್ದರೂ ಅವರ ಮೇಲೆ ಜಿಲ್ಲಾಧಿಕಾರಿ ಯಾಗಲಿ, ಪೊಲೀಸರಾಗಲಿ ದೂರು ದಾಖಲಿಸದೆ ಹಾಗೇ ಬಿಟ್ಟಿರುವುದು ಕೂಡಾ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ!?