ಮಡಿಕೇರಿ, ಜೂ. ೨೩: ಮಣಿಪಾಲ ಇನ್ವಿಟ್ಯೂಟ್ ಆಫ್ ಟೆಕ್ನಾಲಜಿಯ, ಎಲೆಕ್ಟಾçನಿಕ್ಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಪೂರ್ಣಾವಧಿ ಸಂಶೋಧಕರಾಗಿ ಸೇವೆ ಸಲ್ಲಿಸಿರುವ ಚೆಂಬು ಗ್ರಾಮದ ಪಿ.ಎಸ್. ಫಲ್ಗುಣ ಅವರಿಗೆ ಮಣಿಪಾಲ ವಿ.ವಿ. (ಮಾಹೆ) ಪಿಹೆಚ್.ಡಿ. ಪದವಿಯನ್ನು ನೀಡಿ ಗೌರವಿಸಿದೆ.

ಖ್ಯಾತ ವಿಜ್ಞಾನಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತ ಡಾ. ಪಿ.ವಿ.ಎ. ಮೋಹನ್ ಹಾಗೂ ಮಣಿಪಾಲ ವಿ.ವಿ.ಯ ಪ್ರಾಧ್ಯಾಪಕ ಡಾ. ದತ್ತಗುರು ವಿ. ಕಾಮತ್ ಅವರ ಮಾರ್ಗದರ್ಶನದಲ್ಲಿ ಪಿ.ಎಸ್. ಫಲ್ಗುಣ ಮಂಡಿಸಿದ ‘ಇನ್ವೆಸ್ಟಿಗೇಷನ್ ಆನ್ ಬಿಲ್ಡಿಂಗ್ ಬ್ಲಾಕ್ಸ್ ಫಾರ್ ಆರ್.ಎನ್.ಎಸ್. ಬೇಸ್ಡ್ ಅರಿತ್ಮೇಟಿಕ್ ಯುನಿಟ್ಸ್’ ವಿಷಯ ಕುರಿತ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿಯನ್ನು ನೀಡಲಾಗಿದೆ. ಡಾ. ಫಲ್ಗುಣ ಮಡಿಕೇರಿ ಎ.ಪಿ.ಎಂ.ಸಿ.ಯ ಮಾಜಿ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯಾಯ ಮತ್ತು ಚೆಂಬು ಪ್ರೌಢಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಾಮಾಕ್ಷಿ ದಂಪತಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿ ತಾಲೂಕಿನ ಸ.ಕಿ.ಪ್ರಾ. ಶಾಲೆ, ಹಳೆಚೆಂಬು ಹಾಗೂ ಕಲ್ಲುಗುಂಡಿಯ ಸವೇರಪುರ ಶಾಲೆಯಲ್ಲಿ ಪಡೆದಿದ್ದರು.