ಸಾಕಷ್ಟು ಬಾರಿ ವಿದೇಶಿ ನೆಲ ದಲ್ಲಿ ದೇಶದ ತ್ರಿವರ್ಣ ಧ್ವಜದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದ್ದ ಭಾರತೀಯ ಓಟಗಾರ ಕ್ಯಾಪ್ಟನ್ ಮಿಲ್ಖಾ ಸಿಂಗ್ ಅವರು ತಾ.೧೮ರ ತಡರಾತ್ರಿ ೧೧.೩೦ ಗಂಟೆಗೆ ನಿಧನರಾದರು. ಅಥ್ಲೆಟಿಕ್ಸ್ನಲ್ಲಿ ಎದುರಾಳಿಗಳ ವಿರುದ್ಧ ಅಸಂಖ್ಯಾತವಾಗಿ ಹೋರಾಡಿ ಜಯಗಳಿಸಿ ಅಜೇಯರಾಗಿ ಮೆರೆದಿದ್ದ ಇವರು ಕೋವಿಡ್-೧೯ರ ಸೋಂಕಿನೊAದಿಗೆ ಒಂದು ತಿಂಗಳ ಕಾಲ ನಡೆಸಿದ ಹೋರಾಟದಲ್ಲಿ ಸೋತು ‘ಜೀವನ ಕ್ರೀಡೆ' ಅಂತ್ಯಗೊಳಿಸಿದರು. ತಮ್ಮ ಹೆಸರಿನ ಮೂಲಕ ವಿಶೇಷ ಛಾಪು ಮೂಡಿಸಿದ ಭಾರತದ ಅಪ್ಪಟ ಈ ಕ್ರೀಡಾ ತಾರೆ, ತಮ್ಮ ೯೧ನೇ ವಯಸ್ಸಿನಲ್ಲಿ ಚಂಡಿಗಡದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ‘ಹಾರುವ ಸಿಖ್' ಎಂದೇ ದೇಶದಾದ್ಯಂತ ಮನೆಮಾತಾಗಿದ್ದ ಪದ್ಮಶ್ರೀ ಮಿಲ್ಖಾಸಿಂಗ್ ಭೌತಿಕವಾಗಿ ದೂರವಾದರೂ ಇತಿಹಾಸದಲ್ಲಿ ಅಮರರಾಗಿದ್ದಾರೆ.
ದುರ್ಘಟನೆಗಳಿಂದ ಪ್ರಾರಂಭವಾದ ಜೀವನ : ೧೯೨೯ ನೇ ನವೆಂಬರ್ ೨೦ ಕ್ಕೆ ಗೋವಿಂದಪುರ ಎಂಬ ಗ್ರಾಮದಲ್ಲಿ ಮಿಲ್ಖಾಸಿಂಗ್ ಅವರು ಜನಿಸಿದರು. ಈ ಗ್ರಾಮವು ಆಗಿನ ಪಂಜಾಬ್ ಪ್ರಾಂತ್ಯದ (ಬ್ರಿಟೀಷ್ ಭಾರತ) ಮುಜಾಫರ್ಗರ್ಗೆ ಸೇರಿದ್ದು, ಇದೀಗ ಪಾಕಿಸ್ತಾನ ದೇಶದ ಭಾಗವಾಗಿದೆ. ಮಿಲ್ಖಾಸಿಂಗ್ ಅವರು ಭಾರತ-ಪಾಕ್ ವಿಂಗಡಣೆ ಪೂರ್ವ ತಮ್ಮ ೧೪ ಸಹೋದರ-ಸಹೋದರಿಯರ ಪೈಕಿ ೮ ಮಂದಿಯನ್ನು ಕಳೆದುಕೊಂಡಿದ್ದರು. ಭಾರತ-ಪಾಕ್ ವಿಂಗಡಣೆ ಸಂದರ್ಭ ನಡೆದ ಕಲಹದಲ್ಲಿ ಮಿಲ್ಖಾಸಿಂಗ್ ಅವರು ತಮ್ಮ ಪೋಷಕರು, ಸಹೋದರ ಹಾಗೂ ಇಬ್ಬರು ಸಹೋದರಿಯರು ತಮ್ಮ ಕಣ್ಣೆದುರೇ ಕೊಲೆಯಾದ ದೃಶ್ಯಾವಳಿಯನ್ನೂ ಅನುಭವಿಸಬೇಕಾಗಿತ್ತು. ಇದಾದ ಬಳಿಕ ಆಘಾತಗೊಂಡ ಇವರು ೧೯೪೭ ರಲ್ಲಿ ತಮ್ಮ ಅಕ್ಕನ ಮನೆ ದೆಹಲಿಯಲ್ಲಿ ವಾಸವಿದ್ದರು. ಮನಸ್ಸು ಕುಗ್ಗಿಸುವ ಘಟನೆಗಳು ಇವರನ್ನು ಬಿಡಲೇ ಇಲ್ಲ. ಒಮ್ಮೆ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ ಕಾರಣ ತಿಹಾರ್ ಜೈಲು ಸೇರಿದ ಘಟನೆಯೂ ನಡೆಯಿತು. ಇಷ್ಟೆಲ್ಲ ಅಹಿತಕರ ಘಟನೆಗಳು ತಮ್ಮ ಜೀವನದಲ್ಲಿ ನಡೆದಿದ್ದು, ಡಕಾಯಿತರಾಗಲು ಹೊರಟರು. ಆದರೆ ಇದಕ್ಕೆ ತಡೆಹಿಡಿದ ಸಿಂಗ್ ಅವರ ಓರ್ವ ಸಹೋದರ ಸೇನೆ ಸೇರು ವಂತೆ ಸಲಹೆಯಿತ್ತರು. ಸೇನೆಗೆ ಸೇರಿದ ನಂತರ ಅಥ್ಲೆಟಿಕ್ಸ್ ಪರಿಚಯವಾದ ಇವರಿಗೆ ೩ ಒಲಿಂಪಿಕ್ಸ್ಗಳಲ್ಲಿ ಭಾಗವಹಿಸುವ ಭಾಗ್ಯ ದೊರೆಯಿತು.
ಫ್ಲೆöÊಯಿಂಗ್ ಸಿಖ್-ಪಾಕಿಸ್ತಾನ ನೀಡಿದ ಬಿರುದು !: ಆಗಿನ ಬ್ರ್ರಿಟೀಷ್ ಇಂಡಿಯಾ, ಈಗಿನ ಪಾಕಿಸ್ತಾನದಲ್ಲಿ ತಮ್ಮ ಕಣ್ಣೆದುರೇ ಪೋಷಕರ, ಸಹೋದರ, ಸಹೋದರಿಯರ ಪ್ರಾಣ ಹೋಗಿದನ್ನು ಅನುಭವಿಸಿದ ಮಿಲ್ಖಾ ಅವರು ಪಾಕಿಸ್ತಾನಕ್ಕೆ ಹೋಗದೇ ಇರಲು ತೀರ್ಮಾನಿಸಿದ್ದರು. ೧೯೬೦ ರಲ್ಲಿ ಪಾಕಿಸ್ತಾನದ ಲಾಹೋರ್ನಲ್ಲಿ ೨೦೦ ಮೀಟರ್ ಓಟದಲ್ಲಿ ಪಾಲ್ಗೊಳ್ಳಲು ಮಿಲ್ಕಾ ಸಿಂಗ್ ಅವರಿಗೆ ಆಹ್ವಾನವಿದ್ದರೂ ಅವರು ಅದನ್ನು ತಿರಸ್ಕರಿಸಿದರು. ಆದರೆ ಆಗಿನ ಭಾರತದ ಪ್ರಧಾನಿ ಜವಹರ್ಲಾಲ್ ನೆಹರು ಅವರ ಒತ್ತಾಯದ ಮೇರೆಗೆ ಲಾಹೋರ್ಗೆ ತೆರಳಿದರು. ಪಾಕಿಸ್ತಾನದ ಖ್ಯಾತ ಓಟಗಾರ ಅಬ್ದುಲ್ ಖಲೀಕ್ ಅವರನ್ನು ಆರಾಮವಾಗಿ ೨೦೦ ಮೀಟರ್ ಓಟದಲ್ಲಿ ಸೋಲಿಸಿದರು. ಸಿಂಗ್ ಅವರ ಸಾಮರ್ಥ್ಯವನ್ನು ಮೆಚ್ಚಿದ ಆಗಿನ ಪಾಕಿಸ್ತಾನದ ರಾಷ್ಟçಪತಿ ಆಯುಬ್ ಖಾನ್ ‘ಫ್ಲೆöÊಯಿಂಗ್ ಸಿಖ್’ ಬಿರುದನ್ನು ಮಿಲ್ಖಾ ಅವರಿಗೆ ನೀಡಿದರು.
ದಣಿವರಿಯದೆ ಸಾಗಿದ ಸಾಧಕ: ‘‘ಫ್ಲೆöÊಯಿಂಗ್ ಸಿಖ್’’ ಎಂದು ಕರೆಯಲ್ಪಡುವ ಅಥ್ಲೆಟಿಕ್ ದಿಗ್ಗಜ ಮಿಲ್ಖಾಸಿಂಗ್ ಭಾರತದ ಅತ್ಯಂತ ಯಶಸ್ವಿ ಟ್ರಾö್ಯಕ್ ಮತ್ತು ಫೀಲ್ಡ್ ಅಥ್ಲೀಟ್ಗಳಲ್ಲಿ ಒಬ್ಬರು. ೧೯೫೬ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ, ೧೯೬೦ ರಲ್ಲಿ ರೋಮ್ನಲ್ಲಿ ನಡೆದ ಮತ್ತು ೧೯೬೪ ರಲ್ಲಿ ಟೋಕಿಯೊದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆಗೆ ಮಿಲ್ಖಾ ಸಿಂಗ್ ಪಾತ್ರರಾಗಿದ್ದಾರೆ. ೪ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದ ಮಿಲ್ಖಾಸಿಂಗ್, ೧೯೫೮ ರಲ್ಲಿ ಭಾರತದ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆಗಿದ್ದರು.
ದೇಶದ ಕ್ರೀಡಾ ತಜ್ಞರಿಂದ ‘‘ಭಾರತ ನಿರ್ಮಿಸಿದ ಅತ್ಯುತ್ತಮ ಕ್ರೀಡಾಪಟು’’ ಎಂದು ಬಣ್ಣಿಸಲ್ಪಟ್ಟಿದ್ದ ಮಿಲ್ಖಾ ಸಿಂಗ್, ಭಾರತೀಯ ಸೈನ್ಯದ ಮೂಲಕ ರಾಷ್ಟçದ ಅಥ್ಲೆಟಿಕ್ಸ್ ಜಗತ್ತಿಗೆ ಪರಿಚಯಿಸಲ್ಪಟ್ಟರು. ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಕ್ರೀಡಾಪಟು ಎಂಬ ದಾಖಲೆ ಇಂದಿಗೂ ಇವರ ಹೆಸರಿನಲ್ಲಿದೆ. ಮಿಲ್ಖಾಸಿಂಗ್ ಅವರು ೧೯೫೮ ಮತ್ತು ೧೯೬೨ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದರು.
೧೯೬೦ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಓಟದ ಫೈನಲ್ನಲ್ಲಿ ೪ನೇ ಸ್ಥಾನಗಳಿಸಿದ ಮಿಲ್ಖಾ ಸಿಂಗ್, ಓಟದಲ್ಲಿದ್ದ ವಿವಿಧ ದಾಖಲೆಗಳನ್ನು ಮುರಿದರು. ಸಿಂಗ್ ಅವರು ೪೫.೭೩ ಸೆಕೆಂಡುಗಳಲ್ಲಿ ಪಡೆದ ಈ ೪ನೇ ಸ್ಥಾನದ ದಾಖಲೆ ಸುಮಾರು ೪೦ ವರ್ಷಗಳ ಕಾಲ ಭಾರತದ ರಾಷ್ಟಿçÃಯ ದಾಖಲೆಯಾಗಿತ್ತು.
ಮಿಲ್ಖಾ ಸಿಂಗ್ ೧೯೫೬ ರ ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟದ ೨೦೦ ಮೀ ಮತ್ತು ೪೦೦ ಮೀ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ೧೯೫೮ ರಲ್ಲಿ ಕಟಕ್ ನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ಆಫ್ ಇಂಡಿಯಾದಲ್ಲಿ ೨೦೦ ಮೀ ಮತ್ತು ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಿಟ್ಟಿಸಿಕೊಂಡರು. ಅಲ್ಲದೆ, ಏಷ್ಯನ್ ಕ್ರೀಡಾಕೂಟದಲ್ಲಿ ಇದೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನೂ ಗೆದ್ದರು. ನಂತರ ಅವರು ೧೯೫೮ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೪೦೦ ಮೀ (ಈ ಸಮಯದಲ್ಲಿ ೪೪೦ ಗಜಗಳಷ್ಟು) ಓಟದ ಸ್ಪರ್ಧೆಯಲ್ಲಿ ೪೬.೬ ಸೆಕೆಂಡುಗಳ ಗುರಿ ಸಾಧಿಸಿದ ಸಾಧನೆಗಾಗಿ ಚಿನ್ನದ ಪದಕ ಪಡೆದರು.
೧೯೫೮ ರ ಏಷ್ಯನ್ ಕ್ರೀಡಾಕೂಟ ದಲ್ಲಿ ಮಿಲ್ಖಾ ಸಿಂಗ್ ಅವರ ಯಶಸ್ಸನ್ನು ಗುರುತಿಸಿದ ಭಾರತೀಯ ಸೇನೆ ಮಿಲ್ಖಾ ಸಿಂಗ್ ಅವರನ್ನು ಸಿಪಾಯಿ ಹುದ್ದೆಯಿಂದ ಕಿರಿಯ ಅಧಿಕಾರಿಯಾಗಿ ಬಡ್ತಿ ನೀಡಿತು. ಕೊನೆಗೆ ಇವರಿಗೆ ಹಾನರರಿ ಕ್ಯಾಪ್ಟನ್ ಗೌರವ ನೀಡಿ ಆದರಿಸಿತು. ನಿವೃತ್ತಿಗೆ ಕೆಲ ವರ್ಷ ಬಾಕಿ ಇರುವಾಗಲೇ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ಇವರು, ಪಂಜಾಬ್ ರಾಜ್ಯ ಸರಕಾರದ ಶಿಕ್ಷಣ ಸಚಿವಾಲಯದಲ್ಲಿ ಕ್ರೀಡಾ ನಿರ್ದೇಶಕರಾಗಿ ವೃತ್ತಿ ಸೇವೆ ಮುಂದುವರಿಸಿದರು. ಸುದೀರ್ಘ ವರ್ಷದ ತಮ್ಮ ವೃತ್ತಿ ಬದುಕಿನ ನಂತರ ೧೯೯೮ರಲ್ಲಿ ಮಿಲ್ಖಾ ಸಿಂಗ್ ನಿವೃತ್ತರಾದರು.
ಸಾಧನೆಗೆ ಸಂದ ಗೌರವ: ಮಿಲ್ಖಾ ಸಿಂಗ್ ಅವರ ಕ್ರೀಡಾ ಸಾಧನೆಗಳನ್ನು ಗುರುತಿಸಿದ ಕೇಂದ್ರ ಸರಕಾರ ೧೯೫೯ರಲ್ಲೇ ಭಾರತದ ೪ನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ' ಪ್ರಶಸ್ತಿ ನೀಡಿ ಸನ್ಮಾನಿಸಿತು. ೨೦೦೧ರಲ್ಲಿ ಭಾರತ ಸರ್ಕಾರ ಇವರಿಗೆ ಘೋಷಿಸಿದ್ದ ‘ಅರ್ಜುನ್' ಪ್ರಶಸ್ತಿಯನ್ನು ನಿರಾಕರಿಸಿದರು. ಯುವ ಕ್ರೀಡಾ ಸಾಧಕರನ್ನು ಗುರುತಿಸುವ ಉದ್ದೇಶದಿಂದ ಅರ್ಜುನ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ನಾನು ಪಡೆದರೆ ಅದು ಅಪಮೌಲ್ಯಕ್ಕೆ ಒಳಗಾಗುತ್ತದೆ. ಈ ಪ್ರಶಸ್ತಿ ಪಡೆಯುವ ನನ್ನ ಸಮಯ ಮೀರಿದೆ. ನಾನು ಇದನ್ನು ಈಗ ಪಡೆದರೆ ಸ್ನಾತಕೋತ್ತರ ಪದವಿಯ ನಂತರ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ ಪಡೆದಂತಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದರು. ಆದ್ದರಿಂದ ಈ ಪ್ರಶಸ್ತಿ ಬೇರೊಬ್ಬ ಯುವ ಕ್ರೀಡಾ ಸಾಧಕರಿಗೆ ದಕ್ಕುವಂತಾಗಲಿ ಎಂದು ವಾದಿಸಿ ರಾಷ್ಟçದ ಗಮನ ಸೆಳೆದಿದ್ದರು.
ಮಿಲ್ಖಾಸಿಂಗ್ ಅವರು ತಮಗೆ ದೊರೆತ ಎಲ್ಲಾ ಪ್ರಶಸ್ತಿ-ಪದಕಗಳನ್ನು ರಾಷ್ಟçಕ್ಕೆ ದಾನ ಮಾಡಿದ್ದರು. ಆರಂಭದಲ್ಲಿ ಅವುಗಳನ್ನು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾಗಿತ್ತು. ನಂತರ ಅವುಗಳನ್ನು ಪಟಿಯಾಲಾದ ಕ್ರೀಡಾ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ಮಿಲ್ಖಾ ಸಿಂಗ್ ಅವರು ರೋಮ್ನಲ್ಲಿ ಧರಿಸಿದ್ದ ಒಂದು ಜೋಡಿ ಬೂಟುಗಳನ್ನು ಸಹ ಅಲ್ಲಿ ಸಂರಕ್ಷಿಸಲಾಗಿದೆ. ೧೯೬೦ರ ಒಲಿಂಪಿಕ್ಸ್ ನ ೪೦೦ ಮೀಟರ್ ಓಟದ ಸ್ಪರ್ಧೆಯ ಫೈನಲ್ನಲ್ಲಿ ಧರಿಸಿದ್ದ ಅಡೀಡಸ್ ಬೂಟುಗಳನ್ನು ನಟ ರಾಹುಲ್ ಬೋಸ್ ಅವರ ೨೦೧೨ರಲ್ಲಿ ಆಯೋಜಿಸಿದ್ದ ಚಾರಿಟಿ ಹರಾಜಿಗೆ ದಾನ ಮಾಡಿ ಇವರು ಉದಾರತೆ ಮೆರೆದಿದ್ದರು.
ತೆರೆಕಂಡ ಜೀವನ ಚರಿತ್ರೆಯ ಚಲನಚಿತ್ರ : ೨೦೧೩ರಲ್ಲಿ ಮಗಳು ಸೋನಿಯಾ ಸಾನ್ವಾಲ್ಕಾ ತಮ್ಮ ತಂದೆ ಮಿಲ್ಖಾ ಸಿಂಗ್ ಅವರ ಆತ್ಮಚರಿತ್ರೆಯನ್ನು ‘ರುಂಡಿ ಹೈ ಮಂಡಿ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕದ ಆಧಾರಿತವಾಗಿ ನಿರ್ಮಾಣವಾದ ಮಿಲ್ಖಾಸಿಂಗ್ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ‘ಬಾಗ್ ಮಿಲ್ಖಾ ಬಾಗ್' ಎಂಬ ಚಲನಚಿತ್ರ ಅದೇ ವರ್ಷ ತೆರೆಕಂಡಿತು. ಈ ಚಿತ್ರವನ್ನು ರಾಕೀಶ್ ಒಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದು, ಫರ್ಹಾನ್ ಅಖ್ತರ್ ಮುಖ್ಯ ಪಾತ್ರದಲ್ಲಿ, ದಿವ್ಯಾ ದತ್ತಾ ಮತ್ತು ಸೋನಮ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರತದಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತಲ್ಲದೆ ರಾಷ್ಟಿçÃಯ ಚಲನಚಿತ್ರ ಪ್ರದರ್ಶನದಲ್ಲಿ ‘ಹೆಚ್ಚು ಜನಪ್ರಿಯ ಚಲನಚಿತ್ರ ಪ್ರಶಸ್ತಿ' ಮತ್ತು ೨೦೧೪ ರಲ್ಲಿ ನಡೆದ ಅಂತರರಾಷ್ಟಿçÃಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಫಾ)ಯ ಚಿತ್ರ ಪ್ರದರ್ಶನದಲ್ಲಿ ಒಟ್ಟು ೫ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
೧೦೦ ಕೋಟಿ ರೂ. ಮೊತ್ತದ ಈ ಚಲನಚಿತ್ರದ ಹಕ್ಕುಗಳನ್ನು ಮಿಲ್ಖಾ ಸಿಂಗ್ ಒಪ್ಪಿಗೆಯಂತೆ ಕೇವಲ ಒಂದು ರೂಪಾಯಿಗೆ ಮಾರಾಟ ಮಾಡ ಲಾಯಿತು. ಆದರೆ ಲಾಭದ ಪಾಲನ್ನು ಚಾರಿಟಿ ಕಾರ್ಯಗಳಿಗೆ ನೀಡಬೇಕು ಎಂಬ ಶರತ್ತಿನನ್ವಯ ಬಂದ ಮೊತ್ತವನ್ನು ಕ್ರೋಡೀಕರಿಸಿ ಬಡ ಮತ್ತು ನಿರ್ಗತಿಕ ಕ್ರೀಡಾಪಟುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ೨೦೦೩ ರಲ್ಲಿ ಸ್ಥಾಪಿಸಿದ್ದ ‘ಮಿಲ್ಖಾ ಸಿಂಗ್ ಚಾರಿಟೇಬಲ್ ಟ್ರಸ್ಟ್'ಗೆ ದಾನ ಮಾಡಲಾಯಿತು. ಈ ಟ್ರಸ್ಟ್ ವತಿಯಿಂದ ಪ್ರತಿವರ್ಷ ಹಲವಾರು ದತ್ತಿ ಕಾರ್ಯಕ್ರಮಗಳನ್ನು ಮಿಲ್ಖಾ ಸಿಂಗ್ ಕುಟುಂಬ ಇಂದಿಗೂ ನಡೆಸಿಕೊಂಡು ಬರುತ್ತಿದೆ.
ಮೇಣದ ಪ್ರತಿಮೆ ಗೌರವ : ಲಂಡನಿನ ಮೇಡಮ್ ಟುಸ್ಸಾಡ್ಸ್ ನ ಶಿಲ್ಪಿಗಳು ರಚಿಸಿದ ಮಿಲ್ಖಾ ಸಿಂಗ್ ಅವರ ಮೇಣದ ಪ್ರತಿಮೆಯನ್ನು ೨೦೧೭ರ ಸೆಪ್ಟಂಬರ್ ನಲ್ಲಿ ಚಂಡೀಗಡದಲ್ಲಿ ಅನಾವರಣಗೊಳಿಸಲಾಯಿತು. ೧೯೫೮ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್ ವಿಜಯಶಾಲಿಯಾಗಿ ಓಡುವ ಭಂಗಿಯಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದನ್ನು ನವದೆಹಲಿಯಲ್ಲಿರುವ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.
ಕೌಟುಂಬಿಕ ಹಿನ್ನೆಲೆ: ೨೦೧೨ರಿಂದ ಚಂಡೀಗಡದಲ್ಲಿ ನೆಲೆಸಿದ್ದ ಮಿಲ್ಖಾ ಸಿಂಗ್ ಅವರು ಭಾರತೀಯ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರನ್ನು ೧೯೬೨ ರಲ್ಲಿ ವಿವಾಹವಾದರು. ಇವರಿಗೆ ಓರ್ವ ಪುತ್ರ ಮತ್ತು ಮೂವರು ಪುತ್ರಿಯರಿದ್ದಾರೆ. ಪುತ್ರ ಜೀವ್ ಮಿಲ್ಖಾ ಸಿಂಗ್ ಗಾಲ್ಫ್ ಆಟಗಾರನಾಗಿ ಗಮನ ಸೆಳೆದಿದ್ದಾರೆ. ಇದಲ್ಲದೆ ೧೯೯೯ ರಲ್ಲಿ ಟೈಗರ್ ಹಿಲ್ ಕದನದಲ್ಲಿ ನಿಧನರಾದ ಹವಲ್ದಾರ್ ಬಿಕ್ರಮ್ ಸಿಂಗ್ ಅವರ ೭ ವರ್ಷದ ಅನಾಥ ಮಗನನ್ನು ದತ್ತು ಪಡೆದುಕೊಂಡು ಸಾಕಿ ಬೆಳೆಸುವುದರ ಮೂಲಕ ಮಿಲ್ಖಾ ಸಿಂಗ್ ಮಾನವೀಯತೆಯ ಪ್ರತೀಕವಾದರು. ಕೋವಿಡ್ ಸೋಂಕಿನ ಕಾರಣದಿಂದಾಗಿ ಇದೇ ಜೂನ್ ತಿಂಗಳ ೧೩ರಂದು ತಮ್ಮ ಪತ್ನಿ, ೮೫ ವರ್ಷ ಪ್ರಾಯದ ನಿರ್ಮಲ್ ಕೌರ್ ಅವರನ್ನು ಮಿಲ್ಖಾ ಸಿಂಗ್ ಕಳೆದುಕೊಂಡಿದ್ದರು.
-ರಫೀಕ್ ತೂಚಮಕೇರಿ, ಪೊನ್ನಂಪೇಟೆ.