ಮಡಿಕೇರಿ,ಜೂ.೨೩: ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಇಂದು ಹಿರಿಯ ಅಧಿಕಾರಿಗಳು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿದರು.

ಮಡಿಕೇರಿ ನಗರದಲ್ಲಿ ಕಸ ವಿಲೇವಾರಿಗೆ ಶಾಶ್ವತ ಪರಿಹಾರಕ್ಕೆ ಸಂಬAಧಿಸಿದAತೆ ನಗರದ ಎಸ್‌ಆರ್‌ವಿಕೆ ಸಂಘದ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬAಧಿಸಿದAತೆ ನ್ಯಾಯಾಲಯವು ಪ್ರಸ್ತುತ ಸ್ಟೋನ್ ಹಿಲ್‌ನಲ್ಲಿ ಹಲವಾರು ವರ್ಷಗಳಿಂದ ಸಂಗ್ರಹವಾಗಿರುವ ಕಸ ತ್ಯಾಜ್ಯಗಳ ವಿಲೇವಾರಿ ಹಾಗೂ ಜಾಗದ ರಕ್ಷಣೆಗೆ ಸಂಬAಧಿಸಿದAತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಾಗಿ ಅಫಿಡಾವಿಟ್ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಅದರಂತೆ ನಗರಸಭೆ ವತಿಯಿಂದ ಸ್ಟೋನ್ ಹಿಲ್‌ನಲ್ಲಿ ಕಸಗಳನ್ನು

(ಮೊದಲ ಪುಟದಿಂದ) ಸುರಿಯುತ್ತಿಲ್ಲ, ಸ್ಟೋನ್‌ಹಿಲ್‌ನಲ್ಲಿರುವ ಕಸದ ರಾಶಿಗೆ ಮಳೆನೀರು ಹರಿಯದಂತೆ ಚರಂಡಿ ನಿರ್ಮಾಣ ಮಾಡಲಾಗಿದೆ. ಮಳೆ ನೀರನ್ನು ಬೇರೆಡೆಗೆ ಹರಿಯಬಿಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ತಡೆಗೋಡೆಯು ಕಸದ ರಾಶಿಯನ್ನು ತಡೆಯಲು ಶಕ್ತವಾಗಿದೆ. ಅಲ್ಲದೆ, ಕಸದ ಮೇಲೆ ಮಳೆನೀರು ಬೀಳದಂತೆ ತಡೆಯುವ ನಿಟ್ಟಿನಲ್ಲಿ ರಾಶಿಯ ಮೇಲೆ ಟಾರ್ಪಲಿನ್‌ಗಳನ್ನು ಹಾಸಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಸಿ ಕಸ ಹಾಗೂ ಒಣ ಕಸಗಳನ್ನು ವಿಂಗಡಿಸಲಾಗುತ್ತಿದ್ದು, ಹಸಿ ಕಸದಿಂದ ಗೊಬ್ಬರ ತಯಾರಿಸಿ ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ, ೧೫ನೇ ಹಣಕಾಸು ಯೋಜನೆಯಲ್ಲಿ ಮಡಿಕೇರಿಯ ದಾಸವಾಳದಲ್ಲಿ ಒಣ ಕಸ ಸಂಗ್ರಹ ಮಾಡಲು ಘಟಕ ಸ್ಥಾಪನೆಗೆ ರೂ. ೨೦ ಲಕ್ಷ ಕಾಯ್ದಿರಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಹಸಿ ಕಸ ಸಂಗ್ರಹಣೆಗೆ ದೊಡ್ಡ ಕಸದ ತೊಟ್ಟಿಗಳನ್ನು ಖರೀದಿಸಲು ರೂ. ೩೦.೫ ಲಕ್ಷ ಕಾಯ್ದಿರಿಸಲಾಗಿದೆ. ಪ್ರಸ್ತುತ ಸಂಗ್ರಹವಾಗಿರುವ ಹಳೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ, ವಾರ್ಡ್ಗಳಲ್ಲಿಯೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕೋವಿಡ್ ಇರುವದರಿಂದ ಕಾರ್ಮಿಕರ ಅಲಭ್ಯತೆಯಿಂದಾಗಿ ಕೆಲಸ ನಿರ್ವಹಿಸಲಾಗುತ್ತಿಲ್ಲ ಎಂದು ಅಫಿಡಾವಿಟ್ ಸಲ್ಲಿಸಲಾಗಿತ್ತು.

ಆದರೆ, ನಗರಸಭೆ ವತಿಯಿಂದ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಎಸ್‌ಆರ್‌ವಿಕೆ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಒಕ ಅವರು, ಈ ಸಂಬAಧ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ನಗರ ಸಭಾ ಆಯುಕ್ತರು ಹಾಗೂ ಎಸ್‌ಆರ್‌ವಿಕೆ ಸಂಘದ ಪದಾಧಿಕಾರಿಗಳ ಸಮಕ್ಷಮ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಸ್ನೇಹಲತಾ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ನಗರಸಭೆ ಅಧಿಕಾರಿಗಳು ಹಾಗೂ ಎಸ್‌ಆರ್‌ವಿಕೆ ಸಂಘದ ಪದಾಧಿಕಾರಿಗಳಿಂದ ಮಾಹಿತಿ ಪಡೆದರು. ನಗರಸಭೆಯಿಂದ ನ್ಯಾಯಾಲಯಕ್ಕೆ ಜೂ. ೧ ರಂದು ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಅಫಿಡಾವಿಟ್ ಸಲ್ಲಿಸಲಾಗಿದೆ. ಆದರೆ ಸ್ಥಳದಲ್ಲಿ ತಾ. ೫ ರಂದು ಚರಂಡಿ ನಿರ್ಮಾಣ ಮಾಡಲಾಗಿದೆ. ತಡೆಗೋಡೆ ಅವೈಜ್ಞಾನಿಕವಾಗಿದೆ. ಅಲ್ಲದೆ ಕಸವಿಂಗಡಣೆ ಕೂಡ ಆಗುತ್ತಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಎಸ್‌ಆರ್‌ವಿಕೆ ಸಂಘದ ಪದಾಧಿಕಾರಿಗಳು ಅಧಿಕಾರಿಗಳ ಗಮನಕ್ಕೆ ತಂದರು. ನಗರಸಭೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವದನ್ನು ಒಪ್ಪಿಕೊಂಡರು.

ಕಸ ವಿಲೇವಾರಿ ವಿಚಾರಕ್ಕೆ ಸಂಬAಧಿಸಿದAತೆ ಎಸ್‌ಆರ್‌ವಿಕೆ ಹಾಗೂ ನಗರಸಭೆ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು, ಈ ಸಂಬAಧ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿ ಹಾಗೂ ಸ್ಥಳೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸುವಂತೆ ನ್ಯಾಯಾಲಯ ನೀಡಿದ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ಸಂಬAಧ ಮಾಹಿತಿಯನ್ನೊಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವದಾಗಿ ಅಧಿಕಾರಿ ಸ್ನೇಹಲತಾ ಹೇಳಿದರು.

ಈ ಸಂದರ್ಭ ನಗರಸಭಾ ಸದಸ್ಯರುಗಳಾದ ಕೆ.ಎಂ.ಅಪ್ಪಣ್ಣ, ಶ್ವೆತಾ ಪ್ರಶಾಂತ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಣೇಶನ್, ನಗರಸಭಾ ಪ್ರಬಾರ ಆಯುಕ್ತ ರಾಜೇಂದ್ರ ಕುಮಾರ್, ಪರಿಸರ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರೆ ಸೌಮ್ಯ, ಅರೋಗ್ಯ ಅಧಿಕಾರಿ ಹರಿಣಿ, ಎಸ್‌ಆರ್‌ವಿಕೆ ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ, ಕಾರ್ಯದರ್ಶಿ ನಾಣಯ್ಯ, ಕಿರಣ್ ಇನ್ನಿತರರು ಹಾಜರಿದ್ದರು.

? ಸಂತೋಷ್