ಅನಿಲ್ ಎಚ್.ಟಿ. ಮಡಿಕೇರಿಯ ಮುಖ್ಯ ರಸ್ತೆ ಬದಿಯಲ್ಲಿ ಅನಾಥನೋರ್ವ ಛಳಿಯಿಂದ ನಡುಗುತ್ತಾ ಆಹಾರವೂ ಇಲ್ಲದೇ ಜೀವನ್ಮರಣ ಪರಿಸ್ಥಿತಿಯಲ್ಲಿ ಇದ್ದುದ್ದನ್ನು ಕಂಡವರೋರ್ವರು ಈ ವಿಚಾರವನ್ನು ಪೊಲೀಸ್ ಇಲಾಖೆಗೆ ಕರೆ ಮಾಡಿ ತಿಳಿಸುತ್ತಾರೆ. ಕೆಲವೇ ನಿಮಿಷಗಳಲ್ಲಿ ಆ್ಯಂಬ್ಯುಲೆನ್ಸ್ನೊAದಿಗೆ ಸ್ಥಳಕ್ಕೆ ಬಂದ ಪೊಲೀಸ್ ಗಸ್ತು ವಾಹನ ಅನಾಥನನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಲ್ಲದೇ ಸೂಕ್ತ ನೆಲೆ ಕಲ್ಪಿಸಲು ನೆರವಾಗುತ್ತಾರೆ.

ತನ್ನ ಮೆಚ್ಚಿನ ಸಿನಿಮಾ ತಾರೆ ರಶ್ಮಿಕಾ ಮಂದಣ್ಣ ಮನೆ ಇರುವುದು ಕೊಡಗಿನ ಕಾಫಿ ತೋಟದಲ್ಲಿ ಎಂದು ತಿಳಿದ ಆಂಧ್ರದ ಸಿನಿಮಾ ಅಭಿಮಾನಿ ಯೋರ್ವ ಅಲ್ಲಿಂದಲೇ ಲಾಕ್‌ಡೌನ್ ಲೆಕ್ಕಿಸದೇ ವೀರಾಜಪೇಟೆಗೆ ಬಂದು ರಾತ್ರೋರಾತ್ರಿ ರಶ್ಮಿಕಾ ಮನೆ ಹುಡುಕುತ್ತಿರುತ್ತಾರೆ. ಕೆಲವರು ಈ ಅಪರಿಚಿತನ ಬಗ್ಗೆ ಸಂಶಯಗೊAಡು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಅಪರಿಚಿತನನ್ನು ವಿಚಾರಣೆಗೊಳಪಡಿಸಿ ಸೂಕ್ತ ಎಚ್ಚರಿಕೆ ನೀಡಿ ವಾಪಾಸ್ ಕಳುಹಿಸಿ ಜನರ ಸಂಶಯ ನಿವಾರಿಸುತ್ತಾರೆ.

ಈ ಎರಡೂ ಘಟನೆಗಳಲ್ಲಿಯೂ ಜನರು ಕರೆ ಮಾಡಿದ ಪೊಲೀಸ್ ತುರ್ತು ಪ್ರತಿಕ್ರಿಯೆಗಾಗಿನ ಸಂಖ್ಯೆ - ೧೧೨.

ಹಲವಾರು ವರ್ಷಗಳಿಂದ ಪೊಲೀಸ್ ಕಂಟ್ರೋಲ್ ರೂಮ್‌ಗಾಗಿ ಇದ್ದ ಸಂಖ್ಯೆ ೧೦೦ ಇನ್ನು ಕೆಲವೇ ದಿನಗಳಲ್ಲಿ ಇಲ್ಲವಾಗಲಿದೆ. ೧೦೦ರ ಬದಲಿಗೆ ಇಡೀ ಭಾರತದಾದ್ಯಂತ ತುರ್ತು ಸ್ಪಂದನಕ್ಕಾಗಿ ದೊರಕಿರುವ ಸಂಖ್ಯೆಯೇ ೧೧೨.

ಪೊಲೀಸ್, ಆರೋಗ್ಯ ಮತ್ತು ಅಗ್ನಿಶಾಮಕದಳಕ್ಕೆ ಸೇರಿರುವ ಒಂದೇ ಸಂಖ್ಯೆಯಿದು. ಮೂರೂ ಇಲಾಖೆಗಳ ನಡುವೇ ಸಮನ್ವಯ ಸಾಧಿಸಿ ಜನರಿಗೆ ತುರ್ತು ನೆರವು ನೀಡುವ ನಿಟ್ಟಿನಲ್ಲಿ ಈ ೧೧೨ ಕಾರ್ಯಪ್ರವೃತ್ತವಾಗಿದೆ.

ಕೊಡಗಿನಲ್ಲಿ ೨೦೧೯ರ ನವೆÀಂಬರ್ ನÀಲ್ಲಿಯೇ ಆರಂಭವಾದ ಈ ತುರ್ತು ಸ್ಪಂದನದ ಕೇಂದ್ರ ಇಲ್ಲಿಯವರೆಗೆ ೩೯೩ ಪ್ರಕರಣಗಳಲ್ಲಿ ನೆರವು ನೀಡಿದೆ. ಈ ಪೈಕಿ ೧೧ ಅಪಘಾತ ಪ್ರಕರಣ, ೧೪೮ ಜಗಳ, ೪ ಕಳ್ಳತನ, ೪೪ ಸಾರ್ವಜನಿಕರಿಗೆ ಸಮಸ್ಯೆಯಾದ ಪ್ರಕರಣ, ೮೫ ಇತರ ಪ್ರಕರಣಗಳಾಗಿದೆ ಎಂದು ಕೊಡಗು ೧೧೨ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಹಾಗೂ ವೈರ್‌ಲೆಸ್ ವಿಭಾಗದ ಸಬ್ ಇನ್ಸ್ಪೆಕ್ಟರ್ ಕೆ.ಎಸ್ ಧನಂಜಯ್ ಮಾಹಿತಿ ನೀಡಿದರು.