ಕುಶಾಲನಗರ ಜೂ. ೨೧: ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಶ್ರೀ ಸರಸ್ವತಿ ಸಚ್ಚಿದಾನಂದ ಸ್ವಾಮೀಜಿ ಅವರು ಬೆಂಗಳೂರಿನಲ್ಲಿ ಪೀಠಾರೋಹಣ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಭಾನುವಾರ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್ ನೇತೃತ್ವದಲ್ಲಿ ಮೂರು ದಿನಗಳಿಂದ ಕಾರ್ಯಕ್ರಮ ನಡೆದಿದ್ದವು. ಶುಕ್ರವಾರ ಮಧ್ಯಾಹ್ನ ಅನ್ನದಾನ, ಶನಿವಾರ ಸಂಜೆ ಗೋಪೂಜೆ ನಡೆಸಲಾಗಿತ್ತು. ಭಾನುವಾರ ಪೂಜೆಯ ನಂತರ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಮೂವರು ಮಹಿಳೆಯರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ವಿ.ಎನ್. ಪ್ರಭಾಕರ್, ವಿ.ಪಿ. ರಾಜಗೋಪಾಲ್, ಪಿ.ಪಿ. ಸತ್ಯನಾರಾಯಣ, ಕೆ.ಜೆ. ನಾಗೇಂದ್ರ ಗುಪ್ತ, ಕಾರ್ಯದರ್ಶಿ ಬಿ.ಎಲ್. ಅಶೋಕ್ ಹಾಜರಿದ್ದರು.