ಗೋಣಿಕೊಪ್ಪಲು, ಜೂ.೨೧: ದೇವರಪುರ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ ಮಹಿಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಸೋಮವಾರ ಸಂಜೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಮೇಲ್ನೋಟಕ್ಕೆ ಮಹಿಳೆಯ ಸಾವು ಸಂಶಯಾಸ್ಪದ ರೀತಿಯಲ್ಲಿ ಕಂಡುಬAದಿದೆ.
ಸ್ಥಳಕ್ಕೆ ತಿತಿಮತಿ ಅರಣ್ಯ ಇಲಾಖೆಯ ಆರ್.ಎಫ್.ಒ. ಅಶೋಕ್ ಹುನಗುಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಾಕೆ ಗೋಣಿಕೊಪ್ಪ ಸಮೀಪದ ಚನ್ನಂಗೊಲ್ಲಿ ಪೈಸಾರಿ ನಿವಾಸಿ ಗೋಣಿಕೊಪ್ಪಲು, ಜೂ.೨೧: ದೇವರಪುರ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ ಮಹಿಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಸೋಮವಾರ ಸಂಜೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಮೇಲ್ನೋಟಕ್ಕೆ ಮಹಿಳೆಯ ಸಾವು ಸಂಶಯಾಸ್ಪದ ರೀತಿಯಲ್ಲಿ ಕಂಡುಬAದಿದೆ.
ಸ್ಥಳಕ್ಕೆ ತಿತಿಮತಿ ಅರಣ್ಯ ಇಲಾಖೆಯ ಆರ್.ಎಫ್.ಒ. ಅಶೋಕ್ ಹುನಗುಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಾಕೆ ಗೋಣಿಕೊಪ್ಪ ಸಮೀಪದ ಚನ್ನಂಗೊಲ್ಲಿ ಪೈಸಾರಿ ನಿವಾಸಿ ಹಸುಗಳನ್ನು ಮೇಯಿಸುವುದು,ಹಾಲು ಕರೆಯುವುದು ಮಾಡುತ್ತಿದ್ದಳು.
ಸೋಮವಾರ ಎಂದಿನAತೆ ಸಂಜೆಯ ವೇಳೆ ಆರು ಹಸುಗಳು ಕೊಟ್ಟಿಗೆ ಯತ್ತ ಬಂದಿದ್ದವು.
ಉಳಿದ ಎರಡು ಹಸುಗಳು ಕೊಟ್ಟಿಗೆ ಬಳಿ ಬಂದಿರಲಿಲ್ಲ. ಈ ಬಗ್ಗೆ ತೋಟದಲ್ಲಿದ್ದವರು ಉಳಿದ ಹಸು ಗಳೊಂದಿಗೆ ಸಾವಿತ್ರಿ ಬರಬಹುದು ಎಂದು ಕಾದು ನೋಡಿದರೂ ಆಕೆಯ ಸುಳಿವು ಕಂಡುಬರಲಿಲ್ಲ. ಹಾಗಾಗಿ ಸಾವಿತ್ರಿಯನ್ನು ಹುಡುಕಲು ಕಾರ್ಮಿಕರು ತೆರಳಿದ್ದಾರೆ. ಈ ವೇಳೆ ಗದ್ದೆ ಬಯಲಿನಲ್ಲಿ ಮಹಿಳೆ ಅಂಗಾತ ಬಿದ್ದಿರುವುದನ್ನು ಗಮನಿಸಿ ಆಕೆಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ, ಎಸ್.ಐ.ಸುಬ್ಬಯ್ಯ ಗೋಣಿಕೊಪ್ಪ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಂಶಯಾಸ್ಪದ ರೀತಿಯಲ್ಲಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯ ಮಗನ ಲಿಖಿತ ಹೇಳಿಕೆ ಮೇರೆ ಪ್ರಕರಣ ದಾಖಲಿಸಿದ್ದಾರೆ.
- ಹೆಚ್.ಕೆ.ಜಗದೀಶ್