ಸೋಮವಾರಪೇಟೆ, ಜೂ. ೨೧: ತಾಲೂಕಿನ ೪೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸೀಲ್‌ಡೌನ್ ಆಗಿರುವ ಕುಟುಂಬಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಆಹಾರ ಸಾಮಾಗ್ರಿಗಳ ಕಿಟ್ ಒದಗಿಸಿದ್ದು, ಪ್ರಥಮ ದಿನದಂದು ೩೧೫ ಮಂದಿಗೆ ಕಿಟ್ ವಿತರಿಸಲಾಯಿತು.

ತಾಲೂಕಿನ ೧೨ ಗ್ರಾಮ ಪಂಚಾಯಿತಿಗೆ ಖುದ್ದು ತೆರಳಿದ ಶಾಸಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ಹಸ್ತಾಂತರಿಸಿದರು. ಗೌಡಳ್ಳಿ, ದೊಡ್ಡಮಳ್ತೆ, ಬೆಸೂರು, ಕೊಡ್ಲಿಪೇಟೆ, ಬ್ಯಾಡಗೊಟ್ಟ, ಶನಿವಾರಸಂತೆ, ಹಂಡ್ಲಿ, ದುಂಡಳ್ಳಿ, ನಿಡ್ತ, ಆಲೂರುಸಿದ್ದಾಪುರ, ನೇರುಗಳಲೆ ಮತ್ತು ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩೧೫ ಕಿಟ್‌ಗಳನ್ನು ವಿತರಿಸಲಾಯಿತು.

ಕೊರೊನಾ ೨ನೇ ಅಲೆ ತೀವ್ರವಾಗಿ ಬಾಧಿಸಿದ ಸಂದರ್ಭ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಮುಕ್ತ ಕಂಠದಿAದ ಶ್ಲಾಘಿಸಿದ ಅಪ್ಪಚ್ಚುರಂಜನ್ ಅವರು, ಇವರೆಲ್ಲರ ಪರಿಶ್ರಮದಿಂದ ಇದೀಗ ಕೊಡಗಿನಲ್ಲಿ ಕೊರೊನಾದ ಪ್ರಮಾಣ ಇಳಿಕೆಯಾಗುತ್ತಿದೆ ಎಂದರು.

ಮುAದಿನ ದಿನಗಳಲ್ಲಿ ೩ನೇ ಅಲೆಯ ಆತಂಕವೂ ಎದುರಾಗಿದ್ದು, ಮುಂಚೂಣಿ ಕಾರ್ಯಕರ್ತರಿಂದ ಇನ್ನಷ್ಟು ಸೇವೆ ನಿರೀಕ್ಷಿಸಲಾಗುತ್ತಿದೆ. ಎಲ್ಲರ ಸಾಂಘಿಕ ಪ್ರಯತ್ನವಿದ್ದರೆ ಮಾತ್ರ ಕೊರೊನಾವನ್ನು ನಿರ್ಮೂಲನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಸೇವೆ ಒದಗಿಸಲು ಮುಂದಾಗಬೇಕು ಎಂದು ರಂಜನ್ ಮನವಿ ಮಾಡಿದರು.

೩ನೇ ಅಲೆ ಎದುರಿಸಲು ಸಿದ್ದತೆ ಬೇಕು: ೨ನೇ ಅಲೆ ಸದ್ಯಕ್ಕೆ ಹತೋಟಿಗೆ ಬರುತ್ತಿದ್ದು, ಪಾಸಿಟಿವಿಟಿ ದರ ಕಡಿಮೆ ಪ್ರಮಾಣದಲ್ಲಿದೆ. ಇದನ್ನು ಸೊನ್ನೆಗೆ ತರುವತ್ತ ಪ್ರಯತ್ನ ಸಾಗಿದೆ. ಪ್ರತಿಯೋರ್ವರೂ ಲಸಿಕೆ ಪಡೆಯುವುದರೊಂದಿಗೆ, ರೋಗಲಕ್ಷಣಗಳು ಕಂಡುಬAದರೆ ನಿರ್ಲಕ್ಷö್ಯ ವಹಿಸದೇ ಪರೀಕ್ಷೆಗೆ ಒಳಗಾಗಬೇಕು. ೩ನೇ ಅಲೆಯನ್ನು ಆರಂಭದಲ್ಲೇ ತಡೆಯಲು ಎಲ್ಲರೂ ಕೈಜೋಡಿಸಬೇಕೆಂದು ಶಾಸಕರು ಹೇಳಿದರು.

ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇನ್ನಷ್ಟು ಕ್ರಿಯಾಶೀಲರಾಗಬೇಕೆಂಬ ಉದ್ದೇಶದಿಂದ ಕಿಟ್ ವಿತರಿಸಲಾಗುತ್ತಿದೆ. ಕ್ವಾರಂಟೈನ್‌ನಲ್ಲಿರುವವರು ಹೊರಗಡೆ ಓಡಾಡುತ್ತಿದ್ದರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಕೊರೊನಾ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘಪರಿವಾರದ ಕಾರ್ಯಕರ್ತರು ಎಲ್ಲಾ ರೀತಿಯ ಸಂಕಷ್ಟಗಳಿಗೂ ಸ್ಪಂದಿಸಿದ್ದಾರೆ. ಸೇವಾ ಭಾರತಿಯವರು ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸAಸ್ಕಾರ ನೆರವೇರಿಸುವ ಮೂಲಕ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ ಎಂದು ಶಾಸಕರು ಶ್ಲಾಘಿಸಿದರು.

ಗೌಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಿಟ್ ವಿತರಣೆ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಕೆ.ಕೆ. ಸುಮಾ, ಪಿಡಿಓ ಲಿಖಿತ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್‌ಕುಮಾರ್, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು. ದೊಡ್ಡಮಳ್ತೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಬಿಂದು, ಪಿಡಿಓ ಹೇಮಂತ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ಪಿಡಿಓ ಮೇದಪ್ಪ, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮ, ಉಪಾಧ್ಯಕ್ಷ ನಿತಿನ್, ಪಿಡಿಓ ವೇಣುಗೋಪಾಲ್, ಜಿ.ಪಂ. ಮಾಜೀ ಸದಸ್ಯೆ ಸರೋಜಮ್ಮ ಭಾಗವಹಿಸಿದ್ದರು.

ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ವಿನೋದ, ಉಪಾಧ್ಯಕ್ಷೆ ಪಾವನ, ಪಿಡಿಓ ಹರೀಶ್, ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಗೀತಾ, ಬೆಸೂರು ಗ್ರಾ.ಪಂ. ಅಧ್ಯಕ್ಷ ಕೀರ್ತಿ, ಉಪಾಧ್ಯಕ್ಷೆ ಕುಸುಮ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ, ಪಿಡಿಓ ಸ್ಮಿತ, ನಿಡ್ತ ಗ್ರಾ.ಪಂ. ಉಪಾಧ್ಯಕ್ಷ ತೀರ್ಥಾನಂದ, ಆಲೂರು ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ದಮಯಂತಿ, ಪಿಡಿಓ ಪೂರ್ಣಿಮ, ಗಣಗೂರು ಗ್ರಾ.ಪಂ. ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷೆ ಗೌರಮ್ಮ, ಪಿಡಿಓ ಕಾವೇರಿ, ನೇರುಗಳಲೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್, ಪಿಡಿಓ ನಯನ ಅವರುಗಳು ಉಪಸ್ಥಿತರಿದ್ದರು.

ಶಾಸಕರೊಂದಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಜಿ.ಪಂ. ಮಾಜೀ ಸದಸ್ಯೆ ಸರೋಜಮ್ಮ, ತಾ.ಪಂ. ಮಾಜೀ ಅಧ್ಯಕ್ಷೆ ನೇತ್ರಾವತಿ ಅವರುಗಳು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಕಿಟ್ ವಿತರಿಸಿದರು.

ತಾ. ೨೨ರಂದು (ಇಂದು) ತಾಲೂಕಿನ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಗುಡ್ಡೆಹೊಸೂರು, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ನೆಲ್ಲಿಹುದಿಕೇರಿ ಮತ್ತು ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿಟ್ ವಿತರಣೆ ಮಾಡಲಾಗುವುದು ಎಂದು ಶಾಸಕ ರಂಜನ್ ತಿಳಿಸಿದ್ದಾರೆ.