ದಿವAಗತ ಹರದಾಸ ಅಪ್ಪಚ್ಚ ಕವಿ ಅವರು ‘ಯಯಾತಿ ರಾಜಂಡ ನಾಟಕ’ ದಲ್ಲಿ ಬರೆದಿರುವ ಕಾವೇರಿ ಮಾತೆಯ ಕುರಿತಾದ ‘ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳಾ...’ ಈ ಭಕ್ತಿಗೀತೆಗೆ ಹಿನ್ನೆಲೆ ಹೀಗಿದೆ.

ನಾಡಿನ ಕೃಷಿಕರು, ಬೆಳೆಗಾರರು ಒಮ್ಮೆ ಯಯಾತಿ ರಾಜನ ಸಭಾ ಮಂದಿರಕ್ಕೆ ತೆರಳುತ್ತಾರೆ. ಸಿಂಹಾಸನಸ್ಥ ರಾಜನೊಂದಿಗೆ ತಮ್ಮ ಅಹವಾಲನ್ನು ನಿವೇದಿಸಿಕೊಳ್ಳುತ್ತಾರೆ. ನಾವು ಕಷ್ಟಪಟ್ಟು ಬೆಳೆಸಿದ ವಿವಿಧ ಕೃಷಿ ಬೆಳೆಗಳನ್ನು, ಭತ್ತವನ್ನು, ವನ್ಯಪ್ರಾಣಿಗಳು ಹಾನಿಗೆಡಹುತ್ತಿವೆ. ರಾಜ್ಯದಲ್ಲಿ ಬಹುತೇಕ ಅರಣ್ಯ ಪ್ರದೇಶವೇ ತುಂಬಿದೆ. ಇದರಿಂದಾಗಿ ಈ ಪರಿಸ್ಥಿತಿ ಒದಗಿದೆ. ರೈತರಿಗೆ ತುಂಬಾ ತೊಂದರೆಯುAಟಾಗುತ್ತಿದೆ ಎಂದು ತಮ್ಮ ಗಂಭೀರ ಸಮಸ್ಯೆಯನ್ನು ರಾಜನ ಮುಂದೆ ತೋಡಿಕೊಂಡರು. ಇಂತಹ ಸಂದರ್ಭ ತೊಂದರೆಯುAಟುಮಾಡುತ್ತಿರುವ ಕಾಡುಹಂದಿ ಮೊದಲಾದ ಪ್ರಾಣಿಗಳನ್ನು ಬೇಟೆಯಾಡುವದೊಂದೇ ಮಾರ್ಗೋಪಾಯ ಎಂದು ಬಿನ್ನವಿಸಿಕೊಳ್ಳುತ್ತಾರೆ. ಪ್ರಜೆಗಳ ಮಾತಿಗೆ ಮನ್ನಣೆಯಿತ್ತು ಯಯಾತಿ ರಾಜ ತನ್ನ ಸಹಾಯಕರ ಸಹಿತ ಬೇಟೆಗೆಂದು ವನಕ್ಕೆ ಹೋಗುತ್ತಾನೆ. ಬರ್ಚಿ, ಬಾಣ, ಕೋವಿ ಸಹಿತ ಮುಂಚೂಣಿಯಲ್ಲಿ ತೆರಳುತ್ತಾನೆ. ಬೆಳೆ ನಾಶಕ್ಕೆ ಕಾರಣವಾಗಿದ್ದ ಕಾಡುಹಂದಿ ಎದುರಾದಾಗ ಆ ಹಂದಿಗೆ ಹೇಳುತ್ತಾನೆ:” ಬಂದಿಯ ಪಂದಿ, ನಿಂದೇನ್ ನಾನ್, ಇಂದು ನಿನ್ನಲೋ ಕೊಂದಿತೇ ಪೋಪಿ” ಎಂದು ಬೆದರಿಸಿ ಆ ಹಂದಿಯನ್ನು ಕೊಲ್ಲುತ್ತಾನೆ. ಇತರ ಪ್ರಾಣಿಗಳನ್ನೂ ಬೇಟೆಯಾಡಿದ ಬಳಿಕ ದಣಿವಾರಿಸಲೆಂದು ಅಲ್ಲಿ ಹರಿಯುತ್ತ್ತಿದ್ದ ಕಾವೇರಿ ನದಿ ದಡಕ್ಕೆ ತೆರಳುತ್ತಾನೆ. ಕಾವೇರಿಯ ನೀರನ್ನು ಸ್ಪರ್ಶಿಸಿ, ಪ್ರೋಕ್ಷಣೆ ಮಾಡಿಕೊಳ್ಳುತ್ತಾನೆ. ಕಾವೇರಿ ಮಾತೆಗೆ ನಮಸ್ಕರಿಸುತ್ತಾನೆ. ಕಾವೇರಿಯ ದಡದಲ್ಲಿ ಭಕ್ತಿಭಾವದಿಂದ ಆಕೆಯನ್ನು ಹೀಗೆ ಸ್ತುತಿಸುತ್ತಾನೆ.

ಕಾವೇರಮ್ಮೆ ದೇವಿ ತಾಯಿ ಎನ್ನ ಕಾಪಾಡ್

ಬಾವಬಟ್ಟೆ ಕೇಟಿ ಚಾಕ್ ದೇವಿ ತಾಯಿಯೆ

ದತ್ತ್ ಮೋವಳಾಯಿತ್ ನೀ ಬ್ರಹ್ಮ ದೇವಂಗ್

ಗೊತ್ತಿಲತಗಸ್ತö್ಯಋಷಿನ ಬುಟ್ಟ್ ಪೊರಟಿತೊ

ಭಾಗಮಂಡ್ಲ ಸಂಗಮತ್ ಕನಕೆಯೂ ಕೂಡ

ಭಾಗ್ಯಕಂಡ ಬಲಂಬೆರಿಕ್ ಬೆರಿಯ ನೀಬಂದ್

ಪೊಮ್ಮಾಲೆ ಕೊಡವಳೆಲ್ಲ ಕಂಡ ತಾಯಿ ನೀ

ಅಮ್ಮಂಗಕೂ ಕೊಡವಕೆಲ್ಲ ಭಾಷೆ ನೀಲೆಣ್ಣಿ

ಆಳ್ ಕಂಡ ದೇಶಕೆಲ್ಲ ನಲ್ಲದ್Ã ಮಾಡಿ

ಕೇಳಿಪಟ್ಟ ಪಾಕಡಕ್ ಪೋಯಿ ಸೇರಿಯಾ

ಈ ಲೋಕತ್ ಮನ್‌ಸಕೆಜ್ಜ ಕರ್ಮಡೆಲ್ಲ ನೀ

ಆಳ್‌ಬೇದ ಕಾಣತೆಯೊ ಪಾಪತ್Ãಪಿಯಾ

ಮಾಯತುಳ್ಳ ದೇವಿ ನ್Ãಡ ಪಾದಕ್ ಬೂವೀ

ಚಾಯಿಗೊಂಡ್ ಎಂದುಯೆನ್ನ ಕಾಪಾಡ್ ದೇವಿ

ಇದರ ಕನ್ನಡಾನುವಾದ ಇದನ್ನು ಅದೇ ರಾಗದಲ್ಲಿ ಹಾಡಬಹುದಾಗಿದೆ

ಕಾವೇರಮ್ಮೆ ದೇವಿ ತಾಯೇ ನನ್ನ ಕಾಪಾಡು||ಪ||

ಬಾಳ್ವೆ ದಾರಿ ತೋರಿ ಸಾಕು ದೇವಿ ತಾಯಿಯೆ||ಅ.ಪ||

ದತ್ತು ಮಗಳಾಗಿ ನೀನು ಬ್ರಹ್ಮದೇವಗೆ

ಗೊತ್ತಿಲ್ಲದಂತಗಸ್ತö್ಯ ಋಷಿಯ ಬಿಟ್ಟು ಹೊರಟೆಯಾ||೧||

ಭಾಗಮಂಡಲ ಸಂಗಮದಿ ಕನಕೆಯ ಜೊತೆಗೆ

ಭಾಗ್ಯ ಕಂಡ ಬಲಮುರಿಗೆ ಬೇಗನೆ ಬಂದು ||೨||

ಹೊನ್ನಮಾಲೆ ಕೊಡವರೆಲ್ಲ ಕಂಡ ತಾಯಿ ನೀ

ಅಮ್ಮರಿಗೂ ಕೊಡವರಿಗೂ ಭಾಷೆ ನೀಡುತಾ ||೩||

ಮನುಜರಿರುವ ದೇಶಕೆಲ್ಲ ಒಳಿತನು ಮಾಡಿ

ಖ್ಯಾತವಾದ ಹಾಲ್ಗಡಲಿಗೆ ಹೋಗಿ ಸೇರಿದೆ ||೪||

ಈ ಲೋಕದಿ ಮನುಜಗೈದ ಕರ್ಮವೆಲ್ಲ ನೀ

ಭಿನ್ನ ಭೇದ ಕಾಣದಂತೆ ಪಾಪ ತೀರಿಸುವೆ ||೫||

ಮಾಯದಿರುವ ದೇವಿ ನಿನ್ನ ಪಾದಕೆ ನಮಿಪೆ

ಆನಂದದಿAದ ಎಂದೂ ಎನ್ನ ಕಾಪಾಡು ದೇವಿ ||೬||

ರಾಜನ ಸ್ತುತಿಯ ಪ್ರಾರಂಭದಲ್ಲಿ ಹರದಾಸ ಅಪ್ಪಚ್ಚ ಕವಿಯವರ ರಚನೆ ಹೀಗಿದೆ:- ‘ಕಾವೇರಮ್ಮೆ ದೇವಿ ತಾಯಿ ಎನ್ನ ಕಾಪಾಡ್” ಎಂದಿರುತ್ತದೆ. ಅಂದರೆ, ತನ್ನನ್ನು ಕಾಪಾಡುವಂತೆ ರಾಜ ಪ್ರಾರ್ಥಿಸುವದನ್ನು ಬರೆದಿದ್ದಾರೆ. ಆದರೆ, ಬಳಿಕ ದಿ. ಪುಗ್ಗೇರ ಕರುಂಬಯ್ಯ ಅವರು ಉಮ್ಮತ್ತಾಟದ ಪ್ರಾರಂಭಿಕ ಗೀತೆಯಾಗಿ ಈ ಕೊಡವ ಜಾನಪದ ನೃತ್ಯಕ್ಕೆ ಪೂರಕವಾಗುವಂತೆ ಅದನ್ನು “ಕಾವೇರಮ್ಮೆ ದೇವಿತಾಯೆ ಕಾಪಾಡೆಂಗಳಾ” ಎಂದು ಸಾಮೂಹಿಕವಾಗಿ ಎಲ್ಲರಿಗೂ ಅನ್ವಯವಾಗುವಂತೆ “ನಮ್ಮೆಲ್ಲರನ್ನೂ ಕಾಪಾಡು” ಎನ್ನುವ ವಿಶಾಲಾರ್ಥದಲ್ಲಿ ಬದಲಾಯಿಸಿದರು. ಹರದಾಸ ಅಪ್ಪಚ್ಚ ಕವಿ ವಿರಚಿತದಲ್ಲಿದ್ದ “ಎನ್ನ ಕಾಪಾಡ್” ಎಂದಿದ್ದುದು ಕಾಪಾಡೆಂಗಳ” ಎಂದು ದಿ. ಪುಗ್ಗೇರ ಕರುಂಬಯ್ಯ ಅವರಿಂದ ಬದಲಾಗುತ್ತದೆ. ಮಾತ್ರವಲ್ಲ, ಹಾಡುಗಾರಿಕೆ ಸಂದರ್ಭ ಇನ್ನೂ ಅನೇಕ ಬದಲಾವಣೆಗಳಾಗಿವೆ. ಅಲ್ಲದೆ ಈಗಲೂ ಅದು ಜಾನಪದ ಗೀತೆಯಲ್ಲದಿದ್ದರೂ ಸಾಮೂಹಿಕ ನೃತ್ಯಕ್ಕೋಸ್ಕರ ಬದಲಾಯಿತ ಸ್ವರೂಪದಲ್ಲಿ ಪ್ರಚಲಿತದಲ್ಲಿದೆ. ಆದರೆ, ಕಾವೇರಿಯ ಕುರಿತಾದ ಕೊಡವ ಭಕ್ತಿಗೀತೆಯಲ್ಲಿ ಈ ಗೀತೆಯೂ ಪ್ರಮುಖ ಪಾತ್ರ ವಹಿಸಿದೆ ಎನ್ನುವದು ಅತಿಶಯೋಕ್ತಿಯಲ್ಲ. ಕೊಡವ ಮಹಿಳೆಯರ ಸಾಂಪ್ರದಾಯಿಕ ಉಮ್ಮತ್ತಾಟ ನೃತ್ಯದಲ್ಲಿ ಈ ಹಾಡು ಪ್ರಮುಖ ಪಾತ್ರವಹಿಸಿದೆ. ಈ ಹಾಡಿನ ಮೊದಲ ಕೆಲವು ಸಾಲುಗಳನ್ನು ಮಾತ್ರ ಬಳಸಿಕೊಂಡು ಉಮ್ಮತ್ತಾಟವನ್ನು ಪ್ರಾರಂಭಿಸಲಾಗುತ್ತದೆ. ಮಾತೆ ಕಾವೇರಿಗೆ ವಂದಿಸುವ ಮೂಲಕ ಈ ಸಾಂಪ್ರದಾಯಿಕ ನೃತ್ಯ ಚಾಲನೆ ಪಡೆಯುತ್ತದೆ. ಬಳಿಕ ಬೇರೆ ಗೀತೆಗಳನ್ನು ಉಮ್ಮತ್ತಾಟಕ್ಕೆ ಸೇರಿಸಿಕೊಳ್ಳಲಾಗಿದೆ. ಅದೇ ರೀತಿ ಈ ಹಾಡನ್ನು ಅನೇಕ ಗಾಯಕರು ಭಕ್ತಿಗೀತೆಯಾಗಿ ಹಾಡಿದ್ದಾರೆ. ಆ ಹಾಡಿನಲ್ಲಿಯೂ ಸರ್ವ ಜನರಿಗೆ ಅನ್ವಯವಾಗುವಂತಹ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗಿದೆ.

ಉಮ್ಮತ್ತಾಟದಲ್ಲಿ ಬದಲಾವಣೆ ಹೀಗಿದೆ

ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳಾ

ಬಾವಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ

ದತ್ತ್ ಮೋವಳಾಯಿತ್ ನೀ ಬ್ರಹ್ಮ ದೇವಂಗ್

ಗೊತ್ತಿಲತ್ ಅಗಸ್ತö್ಯ ಮುನಿನ ಬುಟ್ಟ್ ಪೊರಟಿಯಾ

ಈ ಮೇಲಿನ ಸಾಲುಗಳನ್ನು ಹೇಳಿದ ಬಳಿಕ ಉಮ್ಮತ್ತಾಟದಲ್ಲಿ ಇತರ ಜಾನಪದ ರಚನೆಗಳ ಗೀತೆಗಳೊಂದಿಗೆ ನೃತ್ಯ ಮುಂದುವರಿಯುತ್ತದೆ.

ಇನ್ನು ಭಕ್ತಿಗೀತೆಯ ಹಾಡುಗಾರಿಕೆಗೆ ಬಂದಾಗ ಹರದಾಸ ಅಪ್ಪಚ್ಚ ಕವಿ ವಿರಚಿತ ಈ ಹಾಡಿನ ರಚನೆಯಲ್ಲಿಯೂ ಬದಲಾವಣೆಯಾಗಿದೆ.

ಹಾಡುಗಾರಿಕೆಯಲ್ಲಿನ ಬದಲಾವಣೆ

ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳಾ

ಬಾವಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ

ದತ್ತ್ ಮೋವಳಾಯಿತ್ ನೀ ಬ್ರಹ್ಮ ದೇವಂಗ್

ಗೊತ್ತಿಲತ್ ಅಗಸ್ತö್ಯಋಷಿನ ಬುಟ್ಟ್ ಪೊರಟಿಯಾ

ಭಾಗಮಂಡ್ಲ ಸಂಗಮತ್ ಕನಿಕೆಯೂ ಕೂಡ

ಭಾಗ್ಯಕಂಡ್ ಬಲಂಬೆರಿಕ್ ಬೆರಿಯ ನೀಬಂದ್

ಪೊಮ್ಮಾಲೆ ಕೊಡವಳೆಲ್ಲ ಕಂಡ್ ಅಲ್ಲಿ ನೀ

ಅಮ್ಮಂಗೂ ಕೊಡವಕೆಲ್ಲ ಭಾಷೆ ತಂದಿಯಾ

ಬಾಳೋAಡ್ÃAದ್ ದೇಶಕೆಲ್ಲ ನಲ್ಲದ್Ã ಮಾಡಿ

ಕೇಳಿಪಟ್ಟ ಪಾಕ್‌ಡಕ್ ಪೋಯಿ ಸೇರಿಯಾ

ಈ ಲೋಕತ್ ಮನುಷಕೆಜ್ಜ ಕರ್ಮವೆಲ್ಲ ನೀ

ಆಳ್‌ಬೇದ ಕಾಣತೆಯೊ ಪಾಪತ್Ãಪಿಯಾ

ಮಾಯತುಳ್ಳ ದೇವಿ ನ್Ãಡ ಪಾದಕ್ ಬೂವಾ

ಚಾಯಿಗೊಂಡ್ ಎಂದು ನೀನ್ ಕಾಪಾಡ್ ದೇವಿ

ಇದರ ಕನ್ನಡಾನುವಾದವಿದ್ದು ರಾಗಪೂರ್ಣವಾಗಿ ಹಾಡಬಹುದಾಗಿದೆ

ಕಾವೇರಮ್ಮ ದೇವಿ ತಾಯೆ ಕಾಪಾಡೆಮ್ಮನು

ಬಾಳೊ ದಾರಿ ತೋರಿಸುತಾ ಸಲಹು ದೇವಿ ನೀ

ದತ್ತು ಪುತ್ರಿಯಾಗಿರುತ ಬ್ರಹ್ಮ ದೇವಗೆ

ಗೊತ್ತಿಲ್ಲದೆಯೆ ಅಗಸ್ತö್ಯ ಋಷಿಯ ಬಿಟ್ಟು ಹೊರಟೆಯ

ಭಾಗಮಂಡ್ಲ ಸಂಗಮದಿ ಕನಿಕೆಯ ಕೂಡೆ

ಭಾಗ್ಯ ಕಂಡ ಬಲಮುರಿಗೆ ಬೇಗ ನೀ ಬಂದು

ಹೊನ್ನಮಾಲೆ ಕೊಡವರೆಲ್ಲರ ಕಂಡು ನೀನಲ್ಲಿ

ಅಮ್ಮರಿಗೂ ಕೊಡವರಿಗೂ ಭಾಷೆಯಿತ್ತೆಯಾ

ಬಾಳಲೆಂದು ದೇಶಕ್ಕೆಲ್ಲ ಒಳಿತನೆ ಮಾಡಿ

ಹೆಸರುವಾಸಿ ಹಾಲ್ಗಡಲಿಗೆ ಹೋಗಿ ಸೇರಿದೆ

ಲೋಕ ಮನುಜರೆಲ್ಲ ಗೈದ ಕರ್ಮವೆಲ್ಲ ನೀ

ಭಿನ್ನ ಭೇದವಿಲ್ಲದಂತೆ ಪಾಪ ನೀಗುವೆ

ಮಾಯೆ ದೇವಿ ನಮಿಸುವೆವು ನಿನ್ನ ಪಾದಕೆ

ಸುಖದಿ ಹರಸುತೆಂದೂ ನೀನು ಸಲಹು ದೇವಿಯೆ.

(ಮುಗಿಯಿತು)