(ಕಾಯಪಂಡ ಶಶಿಸೋಮಯ್ಯ)ಮಡಿಕೇರಿ, ಜೂ. ೧೯: ಹಾಕಿ ಕ್ರೀಡೆಯಲ್ಲಿ ದೇಶ ಮಾತ್ರವಲ್ಲ ವಿದೇಶದಲ್ಲೂ ವಿಶೇಷ ಪರಿಗಣನೆಯನ್ನು ಹೊಂದಿರುವ ಕೊಡಗು ಜಿಲ್ಲೆಗೆ ಈ ಬಾರಿ ಆಘಾತಕರವಾದ ಸುದ್ದಿ ಎದುರಾಗಿರುವುದು ಕೊಡಗು ಜಿಲ್ಲೆಯ ಹಾಕಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಹಲವು ದಶಕಗಳ ಬಳಿಕ ಇದೇ ಪ್ರಪ್ರಥಮ ಬಾರಿಗೆ ಕೊಡಗು ಜಿಲ್ಲೆಯ ಯಾವುದೇ ಒಬ್ಬ ಆಟಗಾರ ಇಲ್ಲದ ಭಾರತ ಹಾಕಿ ತಂಡ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುತ್ತಿದೆ.೧೯೭೨ರ ಬಳಿಕ ನಡೆದಿರುವ ಪ್ರತಿಯೊಂದು ಒಲಂಪಿಕ್ಸ್ನಲ್ಲಿಯೂ ಕೊಡಗಿನ ಆಟಗಾರರು ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿಕೊಂಡು ಬರುತ್ತಿದ್ದರು. ೨೦೧೬ರಲ್ಲಿ ರಿಯೋದಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಒಟ್ಟು ನಾಲ್ವರು ಆಟಗಾರರು ಭಾರತ ತಂಡದಲ್ಲಿದ್ದುದು ಇದೀಗ ಇತಿಹಾಸದ ಪುಟಗಳನ್ನು ಸೇರುವಂತಾಗಿದೆ.
ಪ್ರಸಕ್ತ ವರ್ಷ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ‘ಸ್ಕಾ÷್ವಡ್’ನಲ್ಲಿ ಭಾರತದ ಪ್ರತಿಭಾನ್ವಿತ ಆಟಗಾರ ಕೊಡಗಿನವರಾದ ಮಿಂಚಿನ ವೇಗದ ಕ್ರೀಡಾಪಟು ಎಸ್.ವಿ. ಸುನಿಲ್ ಅವರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮೂಲಕ ಮನೆಯಪಂಡ ಎಂ. ಸೋಮಯ್ಯ ಅವರ ಬಳಿಕ ಸುನಿಲ್ ಸತತ ಮೂರು ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ‘ಹ್ಯಾಟ್ರಿಕ್’ ಸಾಧನೆ ತೋರಲಿದ್ದಾರೆ ಎಂಬ ಆಶಾಭಾವನೆಗೆ ತಣ್ಣೀರೆರಚಿದಂತಾಗಿದೆ.ಸದ್ಯದಲ್ಲಿ ನಡೆಯಲಿರುವ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಈ ತಂಡದಲ್ಲಿ ಸುನಿಲ್ ಸೇರಿದಂತೆ ಕರ್ನಾಟಕ ರಾಜ್ಯದ ಯಾರೊಬ್ಬ ಆಟಗಾರರಿಗೂ ಸ್ಥಾನ ನೀಡಲಾಗಿಲ್ಲ. ಪ್ರತಿ ಒಲಂಪಿಕ್ಸ್ಗೆ ರಾಜ್ಯದ ತಂಡದಲ್ಲಿದ್ದುದು ಇದೀಗ ಇತಿಹಾಸದ ಪುಟಗಳನ್ನು ಸೇರುವಂತಾಗಿದೆ.
ಪ್ರಸಕ್ತ ವರ್ಷ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ‘ಸ್ಕಾ÷್ವಡ್’ನಲ್ಲಿ ಭಾರತದ ಪ್ರತಿಭಾನ್ವಿತ ಆಟಗಾರ ಕೊಡಗಿನವರಾದ ಮಿಂಚಿನ ವೇಗದ ಕ್ರೀಡಾಪಟು ಎಸ್.ವಿ. ಸುನಿಲ್ ಅವರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮೂಲಕ ಮನೆಯಪಂಡ ಎಂ. ಸೋಮಯ್ಯ ಅವರ ಬಳಿಕ ಸುನಿಲ್ ಸತತ ಮೂರು ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ‘ಹ್ಯಾಟ್ರಿಕ್’ ಸಾಧನೆ ತೋರಲಿದ್ದಾರೆ ಎಂಬ ಆಶಾಭಾವನೆಗೆ ತಣ್ಣೀರೆರಚಿದಂತಾಗಿದೆ.
ಸದ್ಯದಲ್ಲಿ ನಡೆಯಲಿರುವ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಈ ತಂಡದಲ್ಲಿ ಸುನಿಲ್ ಸೇರಿದಂತೆ ಕರ್ನಾಟಕ ರಾಜ್ಯದ ಯಾರೊಬ್ಬ ಆಟಗಾರರಿಗೂ ಸ್ಥಾನ ನೀಡಲಾಗಿಲ್ಲ. ಪ್ರತಿ ಒಲಂಪಿಕ್ಸ್ಗೆ ರಾಜ್ಯದ ಆಟಗಾರರಾಗಿದ್ದರು. ೧೯೯೨ರಲ್ಲಿ ಚೆಪ್ಪುಡೀರ ಎಸ್. ಪೂಣಚ್ಚ ಹಾಗೂ ಡಾ. ಅಂಜಪರವAಡ ಬಿ. ಸುಬ್ಬಯ್ಯ ೧೯೯೬ರಲ್ಲಿ ಮತ್ತೆ ಎ.ಬಿ. ಸುಬ್ಬಯ್ಯ ತಂಡದಲ್ಲಿದ್ದರು. ೨೦೦೦ದಲ್ಲಿ ನಡೆದ ಸಿಡ್ನಿ ಒಲಂಪಿಕ್ಸ್ನಲ್ಲಿ ಮಾತ್ರ ಕೊಡಗಿನ ಯಾರೂ ಸ್ಥಾನ ಪಡೆದಿರಲಿಲ್ಲ.
೨೦೦೪ರಲ್ಲಿ ಅರ್ಜುನ್ ಹಾಲಪ್ಪ ತಂಡದಲ್ಲಿದ್ದರೆ, ೨೦೦೮ರಲ್ಲಿ ಭಾರತ ಹಾಕಿ ತಂಡವೇ ಒಲಂಪಿಕ್ಸ್ಗೆ ಅರ್ಹತೆ ಗಳಿಸಿರಲಿಲ್ಲ.
೨೦೧೨ರಲ್ಲಿ ಮತ್ತೆ ಕೊಡಗಿನ ಮೂವರು ಆಟಗಾರರು ತಂಡ ಪ್ರವೇಶಿಸಿದ್ದರು. ಲಂಡನ್ (೨೦೧೨) ಒಲಂಪಿಕ್ಸ್ನಲ್ಲಿ ಎಸ್.ವಿ. ಸುನಿಲ್, ವಿ.ಆರ್. ರಘುನಾಥ್ ಹಾಗೂ ಸಣ್ಣುವಂಡ ಕೆ. ಉತ್ತಪ್ಪ ತಂಡದಲ್ಲಿದ್ದರು.
೨೦೧೬ರಲ್ಲಿ ನಾಲ್ವರು
೨೦೧೬ರಲ್ಲಿ ನಡೆದ ರಿಯೋ ಒಲಂಪಿಕ್ಸ್ ಕೊಡಗಿನ ಪಾಲಿಗೆ
(ಮೊದಲ ಪುಟದಿಂದ) ಮತ್ತೊಮ್ಮೆ ಸ್ಮರಣೀಯವಾದದ್ದು. ಈ ಕ್ರೀಡಾಕೂಟದಲ್ಲಿ ಎಸ್.ವಿ. ಸುನಿಲ್, ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪರೊಂದಿಗೆ ಚೇನಂಡ ನಿಕಿನ್ ತಿಮ್ಮಯ್ಯ ಸೇರ್ಪಡೆಗೊಳ್ಳುವ ಮೂಲಕ ತಂಡದಲ್ಲಿ ಕೊಡಗಿನ ನಾಲ್ವರು ಆಟಗಾರರು ಇದ್ದದ್ದು ಇದೀಗ ಇತಿಹಾಸವೆನಿಸಿದೆ.
೧೯೭೨ರಲ್ಲಿ ಭಾರತ ಕಂಚಿನ ಪದಕ ಗಳಿಸಿದ್ದು, ಈ ಸಾಧನೆಯಲ್ಲಿ ಡಾ|| ಎಂ.ಪಿ. ಗಣೇಶ್ ಹಾಗೂ ಬಿ.ಪಿ.ಗೋವಿಂದ ಸೇರಿದ್ದರೆ, ೧೯೮೦ರಲ್ಲಿ ಭಾರತ ಚಿನ್ನದ ಪದಕ ಗಳಿಸಿದ ಸಂದರ್ಭ ಮನೆಯಪಂಡ ಎಂ. ಸೋಮಯ್ಯ ತಂಡದ ಸದಸ್ಯರಾಗಿದ್ದರು. ೧೯೮೮ರ ಒಲಂಪಿಕ್ಸ್ನಲ್ಲಿ ಭಾರತ ತಂಡದ ನಾಯಕರಾಗಿ ಎಂ.ಎA. ಸೋಮಯ್ಯ, ಆಟಗಾರರಾಗಿ ಬಿ.ಕೆ. ಸುಬ್ರಮಣಿ ಅವರಿದ್ದರೆ, ತಂಡದ ಮುಖ್ಯ ಕೋಚ್ ಆಗಿ ಡಾ|| ಎಂ.ಪಿ.ಗಣೇಶ್ ಹಾಗೂ ಸಹಾಯಕ ಕೋಚ್ ಆಗಿ ಬಿ.ಪಿ. ಗೋವಿಂದ ಅವರುಗಳು ಪಾಲ್ಗೊಂಡಿರುವುದು ಕೂಡ ಕೊಡಗಿನ ಹಿರಿಮೆಯಾಗಿತ್ತು. ಆದರೆ, ಹಾಕಿಯಲ್ಲಿ ಕೊಡಗಿನ ಈ ಐತಿಹ್ಯ ಇದೀಗ ನೇಪಥ್ಯಕ್ಕೆ ಸರಿದಂತಾಗಿರುವುದು ವಿಷಾದಕರವಾಗಿದೆ.
ಅವಕಾಶದ ಸದ್ಭಳಕೆ ಮುಂದುವರೆಯಲಿಲ್ಲ
ಕೊಡಗಿನ ಹಲವು ಪ್ರತಿಭಾನ್ವಿತ ಹಾಕಿ ಆಟಗಾರರಿಗೆ ಒಲಂಪಿಕ್ಸ್ನಲ್ಲಿ ಆಡುವ ಅವಕಾಶ ದೊರೆತಿತ್ತಾದರೂ, ನಂತರದ ದಿನಗಳಲ್ಲಿ ಈ ಅವಕಾಶದ ಸದ್ಭಳಕೆ ಮುಂದುವರಿಯಲಿಲ್ಲ ಎಂದು ಮಾಜಿ ಒಲಂಪಿಯನ್ ಎ.ಬಿ. ಸುಬ್ಬಯ್ಯ ವಿಷಾದಿಸಿದ್ದಾರೆ. ನಿಕಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ ಕಳೆದ ಒಲಂಪಿಕ್ಸ್ನಲ್ಲಿ ಆಡಿದ್ದರು. ಈಗಿನ ತಂಡದಲ್ಲೂ ಇವರ ಸಮಕಾಲೀನ ಆಟಗಾರರು ಅವಕಾಶ ಪಡೆದಿದ್ದಾರೆ. ರಘುನಾಥ್ ಅವರು ನಿವೃತ್ತಿ ಪಡೆದಿದ್ದರೆ, ಸುನಿಲ್ ಅವರ ವಿಚಾರ ದುರದೃಷ್ಟಕರ ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಆಯ್ಕೆಯಲ್ಲಿ ಮುಖ್ಯಕೋಚ್ ಆಸ್ಟೆçÃಲಿಯಾದ ಗ್ರಹಾಂರೀಡ್ ಹಾಗೂ ಸಹಾಯಕ ಕೋಚ್ ಗ್ಲೆಗ್ ಕ್ಲಾರ್ಕ್, ಆಟಗಾರರ ಸಾಮರ್ಥ್ಯ, ಟೀಂ ಪ್ಲಾನಿಂಗ್ನAತೆ ಈಗಿನ ಆಯ್ಕೆ ನಡೆದಿದೆ ಎಂದು ಅವರು ಹೇಳಿದರು.