ಸೋಮವಾರಪೇಟೆ: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮೂಲಕ ಉಚಿತವಾಗಿ ದಿನಸಿ ಪದಾರ್ಥಗಳು ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು.

ತಾಲೂಕಿನ ಮೀನುಕೊಲ್ಲಿ, ಕಬ್ಬಿನಗದ್ದೆ, ಬೆಂಡೆಬೆಟ್ಟ, ಸಜ್ಜಳ್ಳಿ, ಸೂಳೆಬಾವಿ, ಮಾಲಂಬಿ, ಗೋಣಿಮರೂರು ಸೇರಿದಂತೆ ೨೩ ಹಾಡಿಗಳ ೫೫೦ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ನೀಡಲಾಯಿತು. ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಹಾಗೂ ದೊಡ್ಡಬಳ್ಳಾಪುರದ ರೂರಲ್ ಡೆವಲಪ್‌ಮೆಂಟ್ ಆರ್ಗನೈಜೇಶನ್ ಸಂಸ್ಥೆಯವರ ಸಹಾಯಾರ್ಥದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಆರ್‌ಡಿಒ ಸಂಸ್ಥೆಯ ನಿರ್ದೇಶಕರಾದ ಕೆ. ಚಿತ್ರಾವತಿ, ವೇದಿಕೆಯ ಸಂಯೋಜಕರಾದ ಸುನಂದ್ ಕುಮಾರ್, ಕಾರ್ಯಕರ್ತರಾದ ಬಿ.ಕೆ. ಧರ್ಮಪ್ಪ, ತಾಲೂಕು ಘಟಕದ ಅಧ್ಯಕ್ಷ ರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆದಿವಾಸಿ ಮುಖಂಡರುಗಳು ಭಾಗವಹಿಸಿದ್ದರು.ಸೋಮವಾರಪೇಟೆ: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮೂಲಕ ಉಚಿತವಾಗಿ ದಿನಸಿ ಪದಾರ್ಥಗಳು ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು.

ತಾಲೂಕಿನ ಮೀನುಕೊಲ್ಲಿ, ಕಬ್ಬಿನಗದ್ದೆ, ಬೆಂಡೆಬೆಟ್ಟ, ಸಜ್ಜಳ್ಳಿ, ಸೂಳೆಬಾವಿ, ಮಾಲಂಬಿ, ಗೋಣಿಮರೂರು ಸೇರಿದಂತೆ ೨೩ ಹಾಡಿಗಳ ೫೫೦ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ನೀಡಲಾಯಿತು. ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಹಾಗೂ ದೊಡ್ಡಬಳ್ಳಾಪುರದ ರೂರಲ್ ಡೆವಲಪ್‌ಮೆಂಟ್ ಆರ್ಗನೈಜೇಶನ್ ಸಂಸ್ಥೆಯವರ ಸಹಾಯಾರ್ಥದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಆರ್‌ಡಿಒ ಸಂಸ್ಥೆಯ ನಿರ್ದೇಶಕರಾದ ಕೆ. ಚಿತ್ರಾವತಿ, ವೇದಿಕೆಯ ಸಂಯೋಜಕರಾದ ಸುನಂದ್ ಕುಮಾರ್, ಕಾರ್ಯಕರ್ತರಾದ ಬಿ.ಕೆ. ಧರ್ಮಪ್ಪ, ತಾಲೂಕು ಘಟಕದ ಅಧ್ಯಕ್ಷ ರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆದಿವಾಸಿ ಮುಖಂಡರುಗಳು ಭಾಗವಹಿಸಿದ್ದರು.ಸುಂಟಿಕೊಪ್ಪ: ಕೋವಿಡ್‌ನಿಂದ ಮೃತಪಟ್ಟ ಪೌರಕಾರ್ಮಿಕ ಸುಬ್ಬ ಅವರ ಕುಟುಂಬಕ್ಕೆ ಜಿಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿAದ ಇಪ್ಪತ್ತೆöÊದು ಸಾವಿರ ಮೊತ್ತದ ಚೆಕ್ ಅನ್ನು ಸಂಘದ ಅಧ್ಯಕ್ಷ ಹೆಚ್.ಪಿ. ರಮೇಶ್ ಸುಬ್ಬ ಅವರ ಪತ್ನಿ ಗಾಯತ್ರಿ ಅವರಿಗೆ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬ ಇತ್ತೀಚೆಗೆ ಕೋವಿಡ್ ಸೋಂಕಿನಿAದ ಮೃತರಾಗಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ವೇಣುಗೋಪಾಲ್, ಸಿಬ್ಬಂದಿ ಪುನೀತ್‌ಕುಮಾರ್, ರಾಮಚಂದ್ರ ನಿವೃತ್ತ ಪೌರ ಕಾರ್ಮಿಕರಾದ ರಾಜು ಇದ್ದರು. ನಾಪೋಕ್ಲು: ದುಬೈ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕುಂಜಿಲ, ಕೊಳಕೇರಿ, ನಾಪೋಕ್ಲು, ಚೆರಿಯಪರಂಬು, ಎಮ್ಮೆಮಾಡು, ಚೆಟ್ಟಿಮಾನಿ, ನಾಲಡಿ, ಕಕ್ಕಬ್ಬೆ, ಮರಂದೋಡ, ಕೊಟ್ಟಮುಡಿ ಮತ್ತಿತರ ಗ್ರಾಮಗಳ ಅರ್ಚಕರು, ಮುಸ್ಲಿಂ ಧಾರ್ಮಿಕ ಗುರುಗಳು ಹಾಗೂ ಚರ್ಚ್ನ ಗುರುಗಳಿಗೆ ಒಂದು ತಿಂಗಳಿಗಾಗುವ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ದುಬೈ ಹಳೇ ವಿದ್ಯಾರ್ಥಿಗಳ ಸಂಘದ ಕುಂಡAಡ ರಫೀಕ್, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಅದಪೊಳೆ ಮಹಮ್ಮದ್ ಹಾಜಿ, ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಮೆಹಬೂಬ್ ಸಾಬ್, ಮತ್ತಿತರರು ಇದ್ದರು.ಕಣಿವೆ: ಕೂಡ್ಲೂರು ಕೈಗಾರಿಕ ಪ್ರದೇಶದಲ್ಲಿನ ಎಸ್.ಎಲ್.ಎನ್. ಕಾಫಿ ಸಂಸ್ಥೆ ವತಿಯಿಂದ ಕೂಡಿಗೆಯ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಸಾಂದ್ರಕ ಆಮ್ಲಜನಕ ಯಂತ್ರವನ್ನು ನೀಡಲಾಯಿತು. ಈ ಸಂದರ್ಭ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಎಂ.ಕೆ. ಸೋಮಯ್ಯ, ಸೋಮವಾರಪೇಟೆ ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕಿ ಲೀನಾ, ಕೂಡಿಗೆ ಆಸ್ಪತ್ರೆಯ ಡಾ. ತುಂಗಾ ಹಾಗೂ ಸಿಬ್ಬಂದಿಗಳಿದ್ದರು.ಕಣಿವೆ: ಕೂಡ್ಲೂರು ಕೈಗಾರಿಕ ಪ್ರದೇಶದಲ್ಲಿನ ಎಸ್.ಎಲ್.ಎನ್. ಕಾಫಿ ಸಂಸ್ಥೆ ವತಿಯಿಂದ ಕೂಡಿಗೆಯ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಸಾಂದ್ರಕ ಆಮ್ಲಜನಕ ಯಂತ್ರವನ್ನು ನೀಡಲಾಯಿತು. ಈ ಸಂದರ್ಭ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಎಂ.ಕೆ. ಸೋಮಯ್ಯ, ಸೋಮವಾರಪೇಟೆ ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕಿ ಲೀನಾ, ಕೂಡಿಗೆ ಆಸ್ಪತ್ರೆಯ ಡಾ. ತುಂಗಾ ಹಾಗೂ ಸಿಬ್ಬಂದಿಗಳಿದ್ದರು.ಸುAಟಿಕೊಪ್ಪ: ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಸತೀಶ್ ಹಸ್ತಾಂತರಿಸಿದರು. ಕೋವಿಡ್-೧೯ ಸೋಂಕಿತರಿಗೆ ಉಸಿರಾಟದ ಸಮಸ್ಯೆಯು ಎದುರಾಗುವ ಸಂದರ್ಭ ಅವರ ಚಿಕಿತ್ಸೆಗಾಗಿ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ನೀಡಲಾಗಿದೆ ಎಂದು ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.

ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ೨೦ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ವಿತರಿಸಲಾಗುವುದು ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಈ ಸಂದರ್ಭ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಗೌತಮ್, ಚಂದು, ವೆಂಕಟೇಶ್, ಪ್ರೇಮ್ ಚಂದ್ರು, ವೈದ್ಯಾಧಿಕಾರಿಗಳಾದ ಡಾ. ಜೀವನ್, ಡಾ. ನೇತ್ರಾವತಿ, ಡಾ. ನಿಸರ್ಗ, ಜಿ.ಪಂ. ಮಾಜಿ ಸದಸ್ಯರಾದ ಪಿ.ಎಂ. ಲತೀಫ್, ಗ್ರಾ.ಪಂ. ಸದಸ್ಯರಾದ ಪಿ.ಆರ್. ಸುನಿಲ್ ಕುಮಾರ್, ಆಸ್ಪತ್ರೆಯ ಶುಶ್ರೂಷಕಿಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.ಸುಂಟಿಕೊಪ್ಪ: ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಸತೀಶ್ ಹಸ್ತಾಂತರಿಸಿದರು. ಕೋವಿಡ್-೧೯ ಸೋಂಕಿತರಿಗೆ ಉಸಿರಾಟದ ಸಮಸ್ಯೆಯು ಎದುರಾಗುವ ಸಂದರ್ಭ ಅವರ ಚಿಕಿತ್ಸೆಗಾಗಿ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ನೀಡಲಾಗಿದೆ ಎಂದು ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.

ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ೨೦ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ವಿತರಿಸಲಾಗುವುದು ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.

ಈ ಸಂದರ್ಭ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಗೌತಮ್, ಚಂದು, ವೆಂಕಟೇಶ್, ಪ್ರೇಮ್ ಚಂದ್ರು, ವೈದ್ಯಾಧಿಕಾರಿಗಳಾದ ಡಾ. ಜೀವನ್, ಡಾ. ನೇತ್ರಾವತಿ, ಡಾ. ನಿಸರ್ಗ, ಜಿ.ಪಂ. ಮಾಜಿ ಸದಸ್ಯರಾದ ಪಿ.ಎಂ. ಲತೀಫ್, ಗ್ರಾ.ಪಂ. ಸದಸ್ಯರಾದ ಪಿ.ಆರ್. ಸುನಿಲ್ ಕುಮಾರ್, ಆಸ್ಪತ್ರೆಯ ಶುಶ್ರೂಷಕಿಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.ಸೋಮವಾರಪೇಟೆ: ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕಡುಬಡ ಕುಟುಂಬದವರಿಗೆ ಪಟ್ಟಣದ ನಿವಾಸಿ, ಹಿರಿಯ ಪತ್ರಕರ್ತ ಎಸ್. ಮಹೇಶ್ ಹಾಗೂ ಗೀತಾಂಜಲಿ ದಂಪತಿಗಳ ಪುತ್ರ ಎಸ್.ಎಂ. ಧನುಷ್, ತನ್ನ ಮೊದಲ ತಿಂಗಳ ಸಂಬಳದ ಹಣದಲ್ಲಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದರು. ಇಂಜಿನಿಯರಿAಗ್ ಪದವೀಧರರಾಗಿರುವ ಧನುಷ್, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ನೌಕರಿಗೆ ಸೇರಿದ್ದು, ತನ್ನ ಮೊದಲ ತಿಂಗಳ ಸಂಬಳವನ್ನು ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿತರಣೆ ಸಂದರ್ಭ ಎಸ್. ಮಹೇಶ್, ಸಮಾಜಸೇವಕಿ ಎಂ.ಎ. ರುಬಿನಾ, ಪ್ರಮುಖರಾದ ಬಿ.ಆರ್. ಮೃತ್ಯುಂಜಯ, ಪ್ರಸನ್ನ, ಅಭಿಷೇಕ್, ಅರುಣ್, ರಿಶಾ ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಪದಾಧಿಕಾರಿಗಳಿಗೆ ಹಾಸನ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಎ. ಲೋಕೇಶ್ ಕುಮಾರ್ ದಿನಸಿ ಆಹಾರದ ಕಿಟ್ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ ಹಾಗೂ ಪದಾಧಿಕಾರಿಗಳು ಇದ್ದರು.