ವೀರಾಜಪೇಟೆ, ಜೂ. ೨೦: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸುವುದಿಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಊಹಾಪೋಹಗಳನ್ನು ಕೆಲವರು ಹರಿ ಬಿಡುತ್ತಿದ್ದಾರೆ. ಖಾಸಗೀಕರಣ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವೀರಾಜಪೇಟೆ ಶಾಸಕ ಹಾಗೂ ಆಸ್ಪತ್ರೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೂಡ ಖಾಸಗಿ ಸಂಸ್ಥೆಗೆ ವಹಿಸ ಲಾಗುತ್ತಿದೆ. ಅದಕ್ಕಾಗಿಯೇ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆ ಒಂದೂವರೆ ರೂ. ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿರುವುದು ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಹರಿದಾಡುತ್ತಿರುವ ವಿಚಾರವನ್ನು ಶಾಸಕ ಕೆ.ಜಿ. ಬೋಪಯ್ಯ ಅವರ ಗಮನಕ್ಕೆ ತಂದಾಗ ಮಾಹಿತಿ ನೀಡಿದ ಶಾಸಕರು ಕಳೆದ ಹದಿನೈದು ದಿನಗಳ ಹಿಂದೆ ಡಾಕ್ರ್ಸ್ ಫಾರ್ಯು ಟ್ರಸ್ಟ್ ಎಂಬ ಸಂಸ್ಥೆಯ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ತನ್ನ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಸಲಾಗಿತ್ತು ಎಂದರು.
ಸAಸ್ಥೆಯ ಪದಾಧಿಕಾರಿಗಳು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿರುವುದರಿAದ ಆ ಸಂಸ್ಥೆಯಿAದ ಶೇ. ೩೦ ರಷ್ಟು ವೈದ್ಯರು ಹಾಗೂ ದಾದಿಯರು ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಇರುವ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರಲ್ಲದೆ, ಇನ್ನಿತರ ನಿಯಮಾಳಿಗಳನ್ನು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆಯ ಮೊರಾರ್ಜಿ ದೇಸಾಯಿ ಶಾಲೆ, ಬಾಳುಗೋಡು ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ಗಳು ಯಾವುದೇ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿವೆ. ಸಾರ್ವಜನಿಕ ಆಸ್ಪತ್ರೆ ನಿರ್ವಹಣೆಗೆ ಯಾವುದೇ ಖಾಸಗಿ ಸಂಸ್ಥೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದೇನೆ ಎಂದು ಬೋಪಯ್ಯ ವಿವರಿಸಿದರು.
೨೪೦ ಹಾಸಿಗೆಯ ಆಸ್ಪತ್ರೆಯ ಕೆಲವು ಕಟ್ಟಡಗಳು ಶಿಥಿಲಾವಸ್ಥೆಗೆ ಬಂದಿರುವುದರಿAದ ಅಲ್ಲಿ ಹಾಸಿಗೆಗಳನ್ನು ಹಾಕಲು ಸಾಧ್ಯವಿಲ್ಲ. ಅಂದಾಜು ೮ ಎಕರೆಗೂ ಅಧಿಕ ಜಾಗದಲ್ಲಿರುವರಿಂದ ಈ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಪರಿವರ್ತಿಸಲು ಸರ್ಕಾರಕ್ಕೆ ಪತ್ರ ಬರೆದು ಮಾತುಕತೆ ನಡೆಸಲಾಗಿದೆ. ಸರ್ಕಾರದಿಂದ ಆದೇಶ ಬಂದ ನಂತರ ಖಾಲಿ ಇರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕೋವಿಡ್ ಇರುವ ಕಾರಣ ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಈ ಆಸ್ಪತ್ರೆ ಜಿಲ್ಲಾಸ್ಪತ್ರೆಂiÀi ದರ್ಜೆಯ ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆಕ್ಸಿಜನ್ ಉತ್ಪಾದನಾ ಘಟಕದ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹಾಗೂ ತನ್ನ ಪ್ರಯತ್ನದಿಂದ ಬೆಂಗಳೂರಿನಲ್ಲಿ ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವ ಚಾರ್ಟರ್ಪ್ರೆನ್ಯರ್ಸ್ ಫೌಂಡೆಷನ್ಸ್ ಎಂಬ ಸಂಸ್ಥೆ ಉದಾರವಾಗಿ ನೀಡಿದೆ. ಅದೇ ರೀತಿ ಎಂಟರ್ಪ್ರೆÀರ್ಸ್ ಆರ್ಗನೈಸ್ಷನ್ ಸಂಸ್ಥೆ ವತಿಯಿಂದ ರೋಗಿಗಳಿಗೆ ಸಂಬAಧ ಪಡುವ ಆಕ್ಸಿಜನ್ ಕಾನ್ಸ್ನ್ಟ್ರೇರ್ಸ್ಗಳು, ವೀಲ್ಚರ್ಸ್, ಬೈಪಾಸ್ ಮಷಿನ್ಗಳು ಸೇರಿದಂತೆ ಇನ್ನೂ ಹಲವು ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲವು ವೈದ್ಯರ ಕೊರತೆ ಇದೆ. ಶೀಘ್ರದಲ್ಲಿಯೇ ಎಲ್ಲವು ಸರಿ ಹೊಂದಿ ಉತ್ತಮ ದರ್ಜೆಯ ಆಸ್ಪತ್ರೆಯಾಗಲಿದೆ ಎಂದು ವಿವರಿಸಿದರು.
ಮಹಾಮಾರಿ ಕೊರೊನಾ ಮೂರನೇ ಅಲೆಗೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಸಜ್ಜಾಗಿದ್ದು ಆಕ್ಸಿಜನ್ ನಿರ್ಮಿತ ೧೦೦ ಹಾಸಿಗೆಗಳಿಂದ ಕೂಡಿದ ವಾರ್ಡ್ಗಳನ್ನು ಸಿದ್ಧಪಡಿಲಾಗಿದೆ. ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಡುವುದು ಬೇಡ ಎಂದು ಹೇಳಿದ ಅವರು ಸರ್ಕಾರ ನಿಗದಿ ಪಡಿಸಿದ ಲಾಕ್ಡೌನ್ನಲ್ಲಿ ಸರ್ಕಾರದ ನಿಯಮ ನಿಬಂಧನೆಗಳಿಗೆ ಜನ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.