(ವರದಿ : ಜಿ.ಆರ್. ಪ್ರಜ್ವಲ್)
ಮಡಿಕೇರಿ, ಜೂ. ೧೬: ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ, ಇತರ ವಾಣಿಜ್ಯ ನಗರ, ಜಿಲ್ಲೆಗಳಿಗೆ ಹೋಲಿಸಿದರೆ, ನಿರಂತರ ವಿದ್ಯುತ್ ಸರಬರಾಜಾಗುವುದು ಕನಸಿನ ಮಾತು. ಕೆಲವು ನಗರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆಯಾದರೂ ಕೆಲ ಗ್ರಾಮೀಣ ಭಾಗಗಳಲ್ಲಿ ವರ್ಷಪೂರ್ತಿ ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರು ಬಳಲುತ್ತಿದ್ದಾರೆ. ಮಳೆಗಾಲ ಬಂತೆದರೆ ಇನ್ನಷ್ಟೂ ತೊಡಕು. ನಗರ ಪ್ರದೇಶಗಳಲ್ಲಿಯೂ ನಿರಂತರ ವಿದ್ಯುತ್ ಸಮಸ್ಯೆ. ಗ್ರಾಮೀಣ ಭಾಗಗಳಲ್ಲಂತೂ ವಿದ್ಯುತ್ ಸರಬರಾಜಾಗದೆ ದಿನಗಳೇ ಕಳೆದು ಬಿಡುತ್ತವೆ.
ಮಳೆಗಾಲ ಬಂತೆAದರೆ ರಭಸದ ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳು ಉರುಳಿ ಹಾನಿಯಾಗುತ್ತವೆ. ಕೆಲವೆಡೆ ಟ್ರಾನ್ಸ್ಫಾರ್ಮರ್ ಕೆಟ್ಟು ಹೋಗುತ್ತವೆ. ಇನ್ಸುಲೇರ್ಸ್, ಕಂಡಕ್ರ್ಸ್ ಹಾಗೂ ಇತರ ವಿದ್ಯುತ್ ಸರಬರಾಜು ಸಾಮಗ್ರಿಗಳಿಗೆ ಹಾನಿ ಉಂಟಾಗುವುದು ಸಹಜ. ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ವಿಭಾಗದ ಸೆಸ್ಕ್ ಈಗಾಗಲೇ ವಿದ್ಯುತ್ ಸರಬರಾಜಿನಲ್ಲಿ ತೊಡಕುಗಳನ್ನು ತಡೆಗಟ್ಟಲು ಕಾರ್ಯಯೋಜನೆ ರೂಪಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಗಳಾಗದ ಹಾಗೆ ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ಪ್ಲಾಂಟ್, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಲಸಿಕಾ ಕೇಂದ್ರಗಳಿಗೆ, ಆಸ್ಪತ್ರೆಗಳಲ್ಲಿನ ನೀರು ಸರಬರಾಜು ಘಟಕಗಳಿಗೆ ಯಾವುದೇ ರೀತಿಯ ವಿದ್ಯುತ್ ಅಡಚಣೆಯಾಗದ ಹಾಗೆ ಕ್ರಮವಹಿಸಲಾಗಿದೆ ಎಂದು ಮಡಿಕೇರಿ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅಶೋಕ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಟ್ರಾನ್ಸ್ಫಾರ್ಮರ್ ಕೇಂದ್ರ/ ಸಬ್ಸ್ಟೇಷನ್ಗಳಿರುವ ಸೂಕ್ಷö್ಮ ಪ್ರದೇಶಗಳ ಗುರುತು
ಜಿಲ್ಲೆಯ ಭಾಗಮಂಡಲ, ಹೊದ್ದೂರು, ಕೊಟ್ಟಮುಡಿ, ಬೇತ್ರಿ, ಮೈತಾಡಿ, ಕರಡಿಗೋಡು, ಕೊಂಡAಗೇರಿ, ಕಿರಗನೂರು, ಐಗೂರು, ಕಟ್ಟೆಪುರ, ತಾಕೇರಿ, ಗೋಣಿಕೊಪ್ಪ, ನಿಟ್ಟೂರು, ಕುಮಟೂರು, ನಾಲ್ಕೇರಿ, ಕುಶಾಲನಗರ ಪಟ್ಟಣ, ಕೂಡಿಗೆಗಳಲ್ಲಿರುವ ಟ್ರಾನ್ಸ್ಫಾರ್ಮರ್ ಕೇಂದ್ರ/ ಸಬ್ಸ್ಟೇಷನ್ಗಳು ತಗ್ಗು ಪ್ರದೇಶಗಳಲ್ಲಿರುವ ಕಾರಣ ಅತೀ ಮಳೆಯಾದರೆ ಇಂತಹ ಕೇಂದ್ರಗಳಲ್ಲಿ ನೀರು ನಿಂತು ವಿದ್ಯುತ್ ಅಡಚಣೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಪ್ರದೇಶಗಳಲ್ಲಿ ವಿದ್ಯುತ್ ಲೈನ್ಗಳ ಎತ್ತರವನ್ನು ೭ ರಿಂದ ೮ ಅಡಿಯಷ್ಟು ಏರಿಸಲಾಗಿದ್ದು, ಗ್ರಾಮಗಳಿಗೆ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಹೆಚ್ಚುವರಿ ೧೪೦ ಮಂದಿಗೆ ಕೋರಿಕೆ
ಪ್ರಸ್ತುತ ಸೆಸ್ಕ್ನಲ್ಲಿ ಕಾರ್ಯನಿರ್ವಹಿಸಲು ೨೯೬
೨ ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ
ಜಿಲ್ಲೆಯಲ್ಲಿ ೨,೧೧,೩೯೯ ಮನೆಗಳಿಗೆ ವಿದ್ಯುತ್ ಸರಬರಾಜಾಗುತ್ತಿದೆ. ೩,೮೯೦ ಕಿ.ಮೀ ಗಳಷ್ಟು ೧೧ ಕೆ.ವಿ ಲೈನ್ಗಳಿವೆ. ೬,೭೮೮ ಕಿ.ಮೀ ನಷ್ಟು ‘ಲೋ ಟೆನ್ಷನ್’ ಲೈನ್ಗಳಿವೆ. ಜಿಲ್ಲೆಯಾದ್ಯಂತ ಒಟ್ಟು ೫,೭೯೮ ಟ್ರಾನ್ಸ್ಫಾರ್ಮರ್ಗಳಿವೆ. ಮಡಿಕೇರಿ, ಪೊನ್ನಂಪೇಟೆ, ವೀರಾಜಪೇಟೆ, ಸುಂಟಿಕೊಪ್ಪ, ಆಲೂರು ಸಿದ್ದಾಪುರ, ಶನಿವಾರಸಂತೆ ಗಳಲ್ಲಿ ೬೬ ಕೆ.ವಿ ಕೇಂದ್ರಗಳಿವೆ. ಶ್ರೀಮಂಗಲ, ಸಿದ್ದಾಪುರ, ಮೂರ್ನಾಡು, ಸೋಮವಾರಪೇಟೆ ಗಳಲ್ಲಿ ೩೩ ಕೆ.ವಿ ಕೇಂದ್ರಗಳಿವೆ. ಕುಶಾಲನಗರದಲ್ಲಿ ೨೨೦ ಕೆವಿ, ೬೬ ಕೆವಿ ಹಾಗೂ ೧೧ ಕೆವಿಗಳ ಸ್ವೀಕೃತ ಕೇಂದ್ರವಿದೆ.ಸಾಮಗ್ರಿಗಳನ್ನು ಸಾಗಿಸಲು ಸಹಕಾರಿಯಾಗಲಿವೆ. ಪವರ್ಮೆನ್ಗಳಿಗೆ ಸುರಕ್ಷತಾ ಪರಿಕರಗಳಾದ ಹೆಲ್ಮೆಟ್, ಶೂಸ್, ಹಗ್ಗಗಳನ್ನು ನೀಡಲಾಗಿದೆ.
ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕಿದೆ
ಸಾರ್ವಜನಿಕರು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರದ ರೆಂಬೆಗಳನ್ನು ತೆಗೆಯಲು ಯತ್ನಿಸಬಾರದು, ವಿದ್ಯುತ್ ಸ್ವಿಚ್ಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು, ತೋಟಗಳಲ್ಲಿ ಆಲುಮಿನಿಯಂ ಏಣಿಗಳನ್ನು ಬಳಸುವ ಬದಲು ಬಿದಿರಿನ ಏಣಿಯನ್ನು ಬಳಸಬೇಕು, ತುಂಡಾಗಿ ಬಿದ್ದ ತಂತಿಗಳನ್ನು ಬರಿಗೈನಿಂದ ಮುಟ್ಟಬಾರದು. ವಿದ್ಯುತ್ ಸಂಬAಧ ಯಾವುದೇ ದೂರು ಅಥವಾ ಸಹಾಯಕ್ಕಾಗಿ ೧೯೧೨ ಗೆ ಕರೆ ಮಾಡಬೇಕಾಗಿ ಸೆಸ್ಕ್ ಪ್ರಕಟಣೆ ತಿಳಿಸಿದೆ.