ಮಡಿಕೇರಿ, ಜೂ. ೧೫: ಪತ್ರಿಕಾ ಏಜೆನ್ಸಿ ನಡೆಸುತ್ತಿರುವವರು ಹಾಗೂ ಪತ್ರಿಕೆ ವಿತರಿಸುವವರನ್ನು ಸರಕಾರ ಆದ್ಯತಾ ಗುಂಪುಗಳಿಗೆ ಸೇರಿಸಿ ಲಸಿಕೆ ನೀಡುವಂತೆ ಕೆಲ ದಿನಗಳ ಹಿಂದೆ ಆದೇಶ ನೀಡಿತ್ತು. ಇದರನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ಏಜೆಂಟರು ಹಾಗೂ ವಿತರಕರು ಈಗಾಗಲೇ ತಮ್ಮ ಮಾಹಿತಿಯನ್ನು ಸಂಬAಧಿಸಿದವರಿಗೆ ನೀಡಿರುವವರನ್ನು ಹೊರತುಪಡಿಸಿ ಇತರರು ನೋಡಲ್ ಅಧಿಕಾರಿ ಚಿನ್ನಸ್ವಾಮಿ (೯೯೪೫೦೪೫೩೨೭) ಅವರನ್ನು ಸಂಪರ್ಕಿಸಿ ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ ನೀಡಲು ಕೋರಿದೆ.