ವೀರಾಜಪೇಟೆ, ಜು. ೧೬: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೯ನೇ ಸಾಲಿನಲ್ಲಿ ಭೂಕುಸಿತ ಉಂಟಾದ ಪ್ರದೇಶದಲ್ಲಿ ಈ ಬಾರಿಯೂ ಅತಿ ಹೆಚ್ಚು ಮಳೆಯಾಗುವ ಸಂಭವವಿದೆಯೆAದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದ ಮೇರೆ ಭೂಕುಸಿತ ಉಂಟಾದ ಪ್ರದೇಶದ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆAದು ನೋಟೀಸ್ ನೀಡಲಾಯಿತು.
ಯಾವುದೇ ತುರ್ತು ಸಂದರ್ಭದಲ್ಲಿ ನೋಡಲ್ ಅಧಿಕಾರಿ ರಾಹುಲ್ (೯೬೮೬೪೬೧೧೪೨), ಕಂದಾಯ ಪರಿವೀಕ್ಷಕ - ಹರೀಶ್ - (೯೮೪೫೬೧೮೪೬೦), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್.ಪಿ.ಕೆ (೯೪೮೦೧೦೦೮೩೨) ಗ್ರಾಮ ಲೆಕ್ಕಾಧಿಕಾರಿ ಸುಧೀರ್ ಲಮಾಣಿ (೯೧೧೩೦೪೭೪೬೨), ಗ್ರಾಮ ಸಹಾಯಕ ನೂತನ್ (೯೮೮೦೫೮೭೪೮೪) ಇವರುಗಳನ್ನು ಸಂಪರ್ಕಿಸುವAತೆ ಸೂಚಿಸಲಾಗಿದೆ.
ಸ್ಥಳೀಯ ಸ.ಹಿ.ಪ್ರಾ.ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ತುರ್ತು ಸಮಯದಲ್ಲಿ ಇಲ್ಲಿಗೆ ತೆರಳಬಹುದು. ನೋಟೀಸ್ನಲ್ಲಿ ತಿಳಿಯಪಡಿಸಲಾದ ಮಾಹಿತಿಯನ್ನು ಉಲ್ಲಂಘಿಸಿದಲ್ಲಿ ಸರಕಾರದಿಂದ ಯಾವುದೇ ಪರಿಹಾರ ಪಡೆಯಲು ಅನರ್ಹರಾಗಿರುತ್ತೀರಿ ಎಂದು ಪಂಚಾಯಿತಿಯಿAದ ಸುಮಾರು ೨೫ ನಿವಾಸಿಗಳಿಗೆ ನೋಟೀಸ್ ನೀಡಲಾಯಿತು.