ಮಡಿಕೇರಿ, ಜೂ. ೧೬: ವೀರಾಜಪೇಟೆಯ ಚಿಕ್ಕಪೇಟೆಯ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.
ಮೃತ ರಾಯ್ ಅವರ ತಾಯಿ ಮೆಟಿಲ್ಡಾ ಮಡಿಕೇರಿ, ಜೂ. ೧೬: ವೀರಾಜಪೇಟೆಯ ಚಿಕ್ಕಪೇಟೆಯ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.
ಮೃತ ರಾಯ್ ಅವರ ತಾಯಿ ಮೆಟಿಲ್ಡಾ ಲೋಬೋ, ಸಹೋದರ ರಾಬಿನ್ ಡಿಸೋಜ, ಕುಟುಂಬಸ್ಥರಾದ ಸುನಿಲ್ ಡಿಸೋಜ, ಜೂಡಿ ವಜ್ ಸಮ್ಮುಖದಲ್ಲಿ ಸ್ಥಳ ಮಹಜರು ನಡೆದಿದ್ದು, ವಕೀಲೆ ಜಾಯ್ಸಿ ಲಳಿನ ಸ್ಥಳದಲ್ಲಿದ್ದರು. ಅಧಿಕಾರಿಗಳು ಘಟನೆ ಸಂಭವಿಸಿದ ದಿನದಂದು ಠಾಣೆಗೆ ಆಗಮಿಸಿದ ಸಂದರ್ಭ ರಾಯ್ ಯಾವ ಸ್ಥಿತಿಯಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ತಾಯಿ ಮೆಟಿಲ್ಡಾ ಠಾಣೆಯೊಳಗೆ ಬರುವಾಗ ಮಗನಿಗೆ ತೀವ್ರ ರೀತಿಯಲ್ಲಿ ಪೆಟ್ಟಾಗಿತ್ತು. ಮಗ ನಿತ್ರಾಣಗೊಂಡು ಬಿದ್ದ ಸ್ಥಳವನ್ನು ಅಧಿಕಾರಿಗಳಿಗೆ ತೋರಿಸಿದ್ದಾರೆ. ಆ ಬಳಿಕ ಏನೇನಾಯ್ತು ಎಂಬುದರ ಬಗ್ಗೆ ಸಂಪೂರ್ಣವಾಗಿ ಸ್ಥಳ ತೋರಿಸಿ ಕುಟುಂಬಸ್ಥರು ವಿವರಿಸಿದ್ದಾರೆ. ಈ ಸಂಬAಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು ಎಫ್ ಐ ಆರ್ ಪ್ರತಿಯನ್ನು ತಾ. ೧೬ರ ಸಂಜೆ ನೀಡುವುದಾಗಿ ತಿಳಿಸಿದ್ದರು, ಆದರೆ, ಕುಟುಂಬಸ್ಥರು ತೆರಳಿದಾಗ ಅಧಿಕಾರಿಗಳು ಲಭ್ಯವಾಗದ ಹಿನ್ನೆಲೆ ತಾ.೧೭ ರಂದು (ಇಂದು) ಎಫ್ ಐ ಆರ್ ಪ್ರತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.