ಶ್ರೀಮಂಗಲ, ಜೂ. ೧೫: ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ಪ್ರಕರಣ ಶೂನ್ಯ ಆಗುವವರೆಗೂ ಮತ್ತು ಕೋವಿಡ್ ಲಸಿಕೆ ಎಲ್ಲರಿಗೂ ೨ ಡೋಸ್ ಆಗುವವರೆಗೆ ಅಂತರಜಿಲ್ಲಾ, ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಮುಂದುವರೆಸಬೇಕೆAದು ಪೊನ್ನಂಪೇಟೆ ಕೊಡವ ಸಮಾಜ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಪೊನ್ನಂಪೇಟೆಯಲ್ಲಿ ಸಮಾಜದ ಆಡಳಿತ ಮಂಡಳಿಯ ತುರ್ತು ಸಭೆ, ಸಮಾಲೋಚನೆ ನಡೆಸಿ ಮಾತನಾಡಿದ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅವರು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ೧೯ ಸೋಂಕು ನಿಯಂತ್ರಣ ಮತ್ತು ನಿಭಾಯಿಸಲು ಅಧಿಕಾರ ನೀಡಿರುವುದರಿಂದ ಕೊಡಗು ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಹಾಗೂ ವಿವೇಚನೆ ಬಳಸಿ ವೈದ್ಯಕೀಯ ತುರ್ತು,ಅಗತ್ಯ ದಿನನಿತ್ಯ ವಸ್ತು ಸರಬರಾಜು, ಕೃಷಿ ಉತ್ಪನ್ನ ಸಾಗಾಟ ಹೊರತುಪಡಿಸಿ ಜನರ ಮುಕ್ತ ಸಂಚಾರಕ್ಕೆ ತಡೆ ಮಾಡುವುದು ಸೂಕ್ತ. ಇಲ್ಲದಿದ್ದರೆ ಕೋವಿಡ್-೧೯ ಪ್ರಕರಣ ಮತ್ತೆ ಹೆಚ್ಚಾಗುವ ಅಪಾಯ ಎದುರಿಸಬೇಕಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕೃಷಿ ಬಳಕೆಯ ರಸಗೊಬ್ಬರ, ಸಿಂಪಡಣೆ ವಸ್ತುಗಳು, ಕೆಮಿಕಲ್ಗಳು, ಯಂತ್ರೋಪಕರಣ, ಕೃಷಿ ಪರಿಕರ, ಬಿಡಿಭಾಗ ಖರೀದಿಸಲು ವಾರದಲ್ಲಿ ಅಗತ್ಯವಸ್ತು ಖರೀದಿಗೆ ಸಡಿಲಿಸಿರುವ ಸಮಯದಲ್ಲಿ ರೈತರಿಗೆ ತೆರಳಲು ಪೊಲೀಸರು ತಡೆ ಮಾಡಬಾರದು. ಅಗತ್ಯ ವಸ್ತುಗಳಿಗೆ ಖರೀದಿ, ಪರಿಕರ ದುರಸ್ತಿಗೆ ಲಾಕ್ಡೌನ್ ಬಿಡುವು ಸಮಯದಲ್ಲಿಯೇ ಮಾಡಬೇಕಾಗಿದ್ದು, ನಂತರ ಸಂಬAಧಿಸಿದ ಮಳಿಗೆಗಳು ಮುಚ್ಚಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೃಷಿಗೆ ಅಗತ್ಯವಸ್ತು ಸಕಾಲಕ್ಕೆ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಪೊನ್ನಂಪೇಟೆ ಯಿಂದ ಗೋಣಿಕೊಪ್ಪಕ್ಕೆ ತೆರಳಲು ತಡೆ ಮಾಡುವುದರಿಂದ ತೊಂದರೆ ಯಾಗಿದ್ದು, ಗೋಣಿಕೊಪ್ಪದಲ್ಲಿ ದೊರೆಯುವ ಸಾಮಗ್ರಿ ಪೊನ್ನಂಪೇಟೆಯಲ್ಲಿ ಕೆಲವೊಂದು ಸಿಗುತ್ತಿಲ್ಲ. ಈ ಬಗ್ಗೆ ಪೊಲೀಸರು ಗಮನಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಅಗತ್ಯವಸ್ತುಗಳ ಬೆಲೆ ಹೆಚ್ಚಾಗಿದೆ. ತರಕಾರಿ, ಮಾಂಸ, ಮೀನು, ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆಕಾಳು, ಹಣ್ಣು ಹಂಪಲು, ಅಡಿಗೆ ಎಣ್ಣೆ, ಮಳೆಗಾಲದ ಕೊಡೆ ಮಾರಾಟದಲ್ಲಿ ಮನಸೋ ಇಚ್ಛೆಯಂತೆ ಮಾರಾಟ ಮಾಡುತ್ತಾ ಸುಲುಗೆ ಮಾಡಲಾಗುತ್ತಿದೆ. ಕೋವಿಡ್ -೧೯ ಲಾಕ್ಡೌನ್ನಿಂದ ಜನ ಸಾಮಾನ್ಯರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ಮೇಲೆ ವಿಶೇಷ ತಂಡ ರಚನೆ ಮಾಡಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ತುರ್ತು ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್,ಖಜಾಂಚಿ ಮೂಕಳೆರ ಲಕ್ಷö್ಮಣ, ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ ಹಾಜರಿದ್ದರು.