ಸೋಮವಾರಪೇಟೆ, ಜೂ. ೧೬: ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೊರೊನಾ ಸೋಂಕಿತರು ತಮ್ಮೆಲ್ಲಾ ನೋವನ್ನು ಮರೆತು ವಾಲಗಕ್ಕೆ ಹೆಜ್ಜೆ ಹಾಕಿ ಕೆಲಕಾಲ ಸಂಭ್ರಮಿಸಿದರು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣಾ ಕೃಷ್ಣಾನಂದ್ ಅವರು ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬಿದ ಸಂದರ್ಭ ಸೋಂಕಿತರು ನೃತ್ಯ ಮಾಡಿ ತಮ್ಮೆಲ್ಲಾ ನೋವನ್ನು ಮರೆತರು.
ಆಲೂರು ಸಿದ್ದಾಪುರದ ಕೇರ್ ಸೆಂಟರ್ನಲ್ಲಿ ಪುಟಾಣಿ ಮಕ್ಕಳೂ ಸಹ ಕೊರೊನಾ ಸೋಂಕಿಗೆ ಒಳಗಾಗಿ ಈ ಕೇಂದ್ರದಲ್ಲಿರುವುದರಿAದ ಆ ಮಕ್ಕಳಿಗೆ ಬಲೂನು ಸೇರಿದಂತೆ ಇನ್ನಿತರ ಆಟಿಕೆ ಸಾಮಗ್ರಿಗಳನ್ನು ನೀಡಿದ ವೈದ್ಯಾಧಿಕಾರಿ ಗಳು ಮಕ್ಕಳ ಸಂಭ್ರಮ ಕಂಡು ಖುಷಿಪಟ್ಟರು.
ಎಲ್ಲರೂ ಆರೋಗ್ಯವಾಗಿ ಇಲ್ಲಿಂದ ತೆರಳಬೇಕು :ಮುಖ್ಯವಾಗಿ ಧೈರ್ಯ ಹಾಗೂ ಮಾನಸಿಕ ಸ್ಥೈರ್ಯ ಬೇಕಾಗಿರುವುದರಿಂದ ಅದನ್ನು ಎಂದಿಗೂ ಕಳೆದುಕೊಳ್ಳ ಬಾರದು, ಕೊರೊನಾ ಸೋಂಕು ದೃಢಪಟ್ಟಿದೆ ಎಂದಾಕ್ಷಣ ಕೆಲ ಭಾಗದಲ್ಲಿ ಜನರು ಸೋಂಕಿತರನ್ನು ನೋಡುವ ಮನಸ್ಥಿತಿ ಬೇರೆ ಯಾಗಿರುತ್ತದೆ. ಅದನ್ನು ದೂರ ಮಾಡಲು ಇಂದು ಭೇಟಿ ನೀಡಲಾಗಿದೆ ಎಂದು ಸುಪರ್ಣ ತಿಳಿಸಿದರು. ಆಲೂರು ಸಿದ್ದಾಪುರದ ಕೇರ್ ಸೆಂಟರ್ನಲ್ಲಿ ಉತ್ತಮ ಆಹಾರ, ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-ವಿಜಯ್