*ಗೋಣಿಕೊಪ್ಪ, ಜೂ. ೧೫: ಕೊರೊನಾ ಕಾಲದ ಕಳೆದ ಒಂದು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಮಕ್ಕಳು ಬಾಲಕಾರ್ಮಿಕರಾಗಿ ಪರಿವರ್ತನೆಗೊಂಡಿರುವ ಘಟನೆ ಪೊನ್ನಂಪೇಟೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಾಲೂಕು ತಹಶೀಲ್ದಾರ್ ಕಾವ್ಯರಾಣಿ ಹಾಗೂ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ನೇತೃತ್ವದಲ್ಲಿ ಮಂಚಳ್ಳಿ ಗ್ರಾಮದ ತೋಟ ಮಾಲೀಕರ ಮೇಲೆ ಬಾಲಕಾರ್ಮಿಕ ಪದ್ಧತಿಯ ಕಾಯ್ದೆಯಡಿ ಕಾನೂನು ಕ್ರಮಕೈಗೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲೇ ಘಟನೆಗಳು ಪತ್ತೆಯಾಗಿವೆ.
ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಕಾವ್ಯರಾಣಿ ಅವರು ಘಟನೆಗೆ ಸಂಬAಧಿಸಿದAತೆ ಅಪರಿಚಿತರಿಂದ ಕಾರ್ಮಿಕ ಇಲಾಖೆಗೆ ದೂರವಾಣಿ ಕರೆ ಬಂದು, ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವ ಬಗ್ಗೆ ಮಾಹಿತಿ ಒದಗಿಸಲಾಗಿತ್ತು. ಈ ಆಧಾರದ ಮೇಲೆ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಐವರು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
೧೪ ಮತ್ತು ೧೫ ವರ್ಷದ ೫ ಮಕ್ಕಳನ್ನು ತೋಟ ಮಾಲೀಕರ ಶೋಷಣೆಯ ಬಂಧನದಿAದ ಬಿಡುಗಡೆಗೊಳಿಸಿ ಜಿಲ್ಲಾ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಿಶೋರ ವ್ಯವಸ್ಥೆಯಲ್ಲಿನ ಮಕ್ಕಳನ್ನು ತೋಟಗಳಲ್ಲಿ ಹಾಗೂ ಮನೆಗಳಲ್ಲಿ ದುಡಿಸಿಕೊಂಡು ಮಕ್ಕಳ ಶೋಷಣೆಗೆ ಮುಂದಾಗುವುದು ದೊಡ್ಡ ಅಪರಾಧವಾಗಿದೆ. ಈ ಘಟನೆಗಳು ಪತ್ತೆಯಾದಲ್ಲಿ ಮಾಲೀಕರ ವಿರುದ್ಧ ವಾರೆಂಟ್ ರಹಿತವಾಗಿ ಮಾಲೀಕನನ್ನು ಬಂಧಿಸಲಾಗುವುದು. ಎರಡು ವರ್ಷ ಸಜೆ ಮತ್ತು ೨೦ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಕೆಲವು ತೋಟದ ಮಾಲೀಕರು ಕಾರ್ಮಿಕರ ಆಧಾರ್ಕಾರ್ಡ್ ಮತ್ತು ಪಡಿತರ ಚೀಟಿ ವಶಪಡಿಸಿಕೊಂಡು ನಿರಂತರವಾಗಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಸಿದ್ದಾರೆ. ಇಂತಹ ಘಟನೆಗಳು ಕಂಡುಬAದರೆ ತಕ್ಷಣ ತಹಶೀಲ್ದಾರ್ ಕಚೇರಿ ಅಥವಾ ಮಕ್ಕಳ ಅಭಿವೃದ್ಧಿ ಇಲಾಖೆಯ ೧೦೯೮ ಸಹಾಯವಾಣಿ ಹಾಗೂ ೦೮೨೭೪-೨೪೯೬೦೦ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದಿದ್ದಾರೆ.
ದಾಳಿ ಸಂದರ್ಭ ಜಿಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕ ಜಯಣ್ಣ, ಮಕ್ಕಳ ರಕ್ಷಣಾ ವಿಶೇಷ ಪೊಲೀಸ್ ಅಧಿಕಾರಿ ಎಂ.ಬಿ. ಸುಮತಿ, ಮಹೇಶ್, ಸಮಾಜ ಕಲ್ಯಾಣಾಧಿಕಾರಿ ಪ್ರೀತಿ, ಮಕ್ಕಳ ಅಭಿವೃದ್ಧಿ ಅಧಿಕಾರಿ ಸಿರಾಜ್ ಅಹಮ್ಮದ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಸಚಿನ್ಕುಮಾರ್, ಮಕ್ಕಳ ಸಹಾಯವಾಣಿ ತಂಡದ ಸದಸ್ಯೆ ಮಂಜುಳಾ, ಸದಸ್ಯರುಗಳಾದ ಮಂಜುಳಾ, ಶೋಭಾಲಕ್ಷಿ÷್ಮ, ಕಂದಾಯ ಪರಿವೀಕ್ಷಕರಾದ ದೇವಯ್ಯ, ಸುದೀಂದ್ರ, ಕರುಂಬಯ್ಯ, ಬಸವನಗೌಡ ಪಾಟೀಲ್, ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ಚಂದ್ರಪ್ಪ, ಎ.ಎಸ್.ಐ ಪ್ರಾನ್ಸಿಸ್, ಚಂದ್ರ, ಸಿಬ್ಬಂದಿಗಳಾದ ಮೋಹನ್ಕುಮಾರ್, ಸುರೇಶ್ ಹಾಜರಿದ್ದರು.
ಗೋಷ್ಠಿಯಲ್ಲಿ ಶಿರಸ್ತೇದಾರ ರಾಧಕೃಷ್ಣ, ಕಂದಾಯ ಪರಿವೀಕ್ಷಕ ಸಿ.ಕೆ. ಸುಧೀಂದ್ರ, ಹಿರಿಯ ಕಾರ್ಮಿಕ ನಿರೀಕ್ಷಕ ಜಯಣ್ಣ ಉಪಸ್ಥಿತರಿದ್ದರು.
-ಎನ್.ಎನ್. ದಿನೇಶ್