*ಸಿದ್ದಾಪುರ ಜೂ.೧೫ : ಅಭ್ಯತ್‌ಮಂಗಲ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಮೂರು ಕಾಡಾನೆಗಳು ಗ್ರೀನ್ ಫೀಲ್ಡ್ ಎಸ್ಟೇಟ್‌ಗೆ ನುಗ್ಗಿ ದಾಂಧಲೆ ನಡೆಸಿವೆ.

ಪಕ್ಕದಲ್ಲೇ ಇರುವ ಲೈನ್ ಮನೆಗಳ ಬಳಿ ಅಡ್ಡಾಡುತ್ತಿರುವ ಆನೆಗಳು ವಸ್ತುಗಳು ಮತ್ತು ಫಸಲು ನೀಡುವ ಗಿಡಗಳೆಲ್ಲವನ್ನು ನಾಶಪಡಿಸಿವೆ. ಇಲ್ಲಿರುವ ಕಾರ್ಮಿಕರು ಮನೆಯಿಂದ ಹೊರ ಬರಲಾಗದೆ ಆತಂಕದಲ್ಲಿದ್ದಾರೆ. ತೋಟದ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಆರಂಭಗೊAಡಿರುವುದರಿAದ ತೋಟ ಮತ್ತು ಗದ್ದೆ ಕೆಲಸ ನಡೆಸಬೇಕಾಗುತ್ತದೆ. ಆದರೆ ಕಾಡಾನೆಗಳು ಇದಕ್ಕೆ ಅವಕಾಶವನ್ನೇ ನೀಡುತ್ತಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಡಾನೆ ದಾಂಧಲೆ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣ ಕಾಡಾನೆ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.