ಮಡಿಕೇರಿ, ಜೂ. ೧೪: ಜುಲೈ ೧ ರಿಂದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಯನ್ನು ಆರಂಭಿಸಲು ಆದೇಶ ಹೊರಡಿಸಿರುವ ಹಿನ್ನೆಲೆ ತಾ. ೧೫ ರಿಂದ (ಇಂದಿನಿAದ) ರಾಜ್ಯದ ವಿವಿಧೆಡೆ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆದರೆ, ಕೊಡಗು ಸೇರಿದಂತೆ ೧೦ ಜಿಲ್ಲೆಗಳಲ್ಲಿ ಮಾತ್ರ ಪ್ರಕ್ರಿಯೆ ತಡವಾಗಿ ನಡೆಯಲಿದೆ.ಈಗಾಗಲೇ ಕೊಡಗು ಸೇರಿದಂತೆ ೧೦ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಸರಕಾರ ಕಠಿಣ ನೀತಿ ಕೈಗೊಂಡಿದೆ. ಈ ಹಿನ್ನೆಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ, ಮಂಡ್ಯ ಜಿಲ್ಲೆಗಳಲ್ಲಿ ಪ್ರಕ್ರಿಯೆ ತಡವಾಗಿ ಆರಂಭ ವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸದ್ಯಕ್ಕೆ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ

(ಮೊದಲ ಪುಟದಿಂದ) ತೊಡಗಿಸಿಕೊಳ್ಳುವ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದ ಪೂರ್ವ ತಯಾರಿ ಕಾರ್ಯಗಳನ್ನು ಮಾಡಿಕೊಳ್ಳಲು ಮನೆಗಳಿಂದಲ್ಲೆ ಕಾರ್ಯನಿರ್ವಹಿಸಲು ಕೋರಲಾಗಿದೆ. ಕಠಿಣ ನಿರ್ಬಂಧ ಭಾಗಶಃ ತೆರವುಗೊಂಡ ಬಳಿಕ ಶಿಕ್ಷಕರು ಶಾಲೆಗೆ ತೆರಳಿ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕೆAದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ೧೦ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಂದಿನಿAದ ದಾಖಲಾತಿ ಆರಂಭವಾಗಲಿದೆ.