ಶನಿವಾರಸಂತೆ, ಜೂ. ೧೩: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಸೋಂಕಿತರ ಮನೆಗಳಿಗೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಕೋವಿಡ್ ನೋಡಲ್ ಅಧಿಕಾರಿ ನಿಂಗರಾಜಪ್ಪ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ಕೆಲವು ಸೋಂಕಿತರ ಮನೆಗಳಲ್ಲಿ ಹೋಂ ಐಸೋಲೇಷನ್ಗೆ ಅಗತ್ಯ ಸೌಕರ್ಯಗಳು ಇಲ್ಲದಿರುವುದು ಕಂಡು ಬಂದ ಹಿನ್ನೆಲೆ ಮನೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದರು.
ಸೋಂಕಿತರು ಮನೆಯಲ್ಲಿ ಎಲ್ಲಾ ಸೌಕರ್ಯಗಳಿರುವ ಬಗ್ಗೆ ಸುಳ್ಳು ಮಾಹಿತಿ ನೀಡಿ ಕೇರ್ಸೆಂಟರ್ನಿAದ ಬರುತ್ತಿದ್ದು, ಮುಂದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗಳಲ್ಲಿಯೇ ಇರಿಸಿಕೊಳ್ಳುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹೋಬಳಿ ಉಪತಹಶೀಲ್ದಾರ್ ಪುರುಷೋತ್ತಮ್, ಕಂದಾಯ ಅಧಿಕಾರಿ ಮನುಕುಮಾರ್, ಕೋವಿಡ್ ಫ್ಲಯಿಂಗ್ ಸ್ಕಾ÷್ವಡ್ ಬ್ಯಾಡಗೊಟ್ಟ ಜಾನ್, ಗ್ರಾಮ ಲೆಕ್ಕಾಧಿಕಾರಿ ಪ್ರಕೃತಿ, ಸಿ.ಆರ್.ಪಿ. ಸುರೇಶ್, ಕ್ವಾರಂಟೈನ್ ನಿರೀಕ್ಷಕ ಫಯಾಜ್ ಮಾಸ್ತರ್ ಹಾಜರಿದ್ದರು.