ವೀರಾಜಪೇಟೆ, ಜೂ. ೧೩: ವೀರಾಜಪೇಟೆ ತಾಲೂಕಿನಲ್ಲಿ ಎರಡನೆಯ ಅತಿ ದೊಡ್ಡ ಎರಡನೇ ಪಂಚಾಯಿತಿಯಾದ ಹಾತೂರು ಪಂಚಾಯಿತಿ ೭ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಆರೋಗ್ಯ ಸಿಬ್ಬಂದಿಗಳು, ಆಶಾ, ಅಂಗನವಾಡಿ, ಕಾರ್ಯಕರ್ತರು, ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದಿಂದ ಕಳೆದ ಒಂದು ವಾರದಿಂದ ಕೊರೊನಾ ಮುಕ್ತ ಪಂಚಾಯಿತಿ ಆಗಿದೆ ಎಂದು ಹಾತೂರು ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಡಿ. ಪೂವಣ್ಣ ಹೇಳಿದರು.
ಹಾತೂರು ವನಭದ್ರಕಾಳಿ ದೇವಸ್ಥಾನದ ವತಿಯಿಂದ ಹಾತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ಗಳಾದ ಆರೋಗ್ಯ, ಅಂಚೆ, ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯರ್ತರು, ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಸಹಾಯಕರುಗಳಿಗೆ ರೈನ್ಕೋಟ್ ಹಾಗೂ ಕೊಡೆಗಳನ್ನು ವಿತರಿಸಿ ಮಾತನಾಡಿದ ಅವರು, ಹಾತೂರು ಪಂಚಾಯಿತಿ ಕೈಕೇರಿ, ಅತ್ತೂರು, ಕೊಳತೋಡು ಬೈಗೋಡು, ಕುಂದಾ ಈಚೂರು ಗ್ರಾಮಗಳನ್ನು ಒಳಗೊಂಡಿದೆ. ೨೦ ಸದಸ್ಯರಿರುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೧೯ ಕೊರೊನಾ ಸಕ್ರಿಯ ಪ್ರಕರಣಗಳಿದ್ದವು. ಅದರಲ್ಲಿ ಒಬ್ಬರು ಮೃತಪಟ್ಟರೆ ಉಳಿದವರೆಲ್ಲರೂ ಗುಣಮುಖರಾಗಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ೧೫೦೦, ಆಶಾ ಕಾರ್ಯಕರ್ತರಿಗೆ ೧೦೦೦ ರೂ.ಗಳ ಸಹಾಯ ಧನ ನೀಡಲಾಗಿದೆ. ಪಾಸಿಟಿವ್ ಬಂದ ಮನೆಗಳಿಗೆ ಸ್ಯಾನಿಟೈಸ್ ಮಾಡಿ, ಪಡಿತರ ಕಿಟ್ ಹಾಗೂ ಮಾಸ್ಕ್ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಹಾತೂರು ವನಭದ್ರಕಾಳಿ ದೇವಾಲಯದ ಅಧ್ಯಕ್ಷ ಹಾಗೂ ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಕೊಕ್ಕಂಡ ಗಿಣಿ ಗಣಪತಿ ಮಾತನಾಡಿ, ಕೊರೊನಾ ಫ್ರಂಟ್ಲೈನ್ ವಕರ್ಸ್ಗಳಿಗೆ ಸರ್ಕಾರ ಹಾಗೂ ವಿವಿಧ ಸಂಘ-ಸAಸ್ಥೆಗಳು ಆಹಾರ, ಪಡಿತರ ಹಾಗೂ ಮಾಸ್ಕ್ಗಳನ್ನು ವಿತರಿಸುತ್ತಿದ್ದಾರೆ. ಅದು ಕೂಡ ಉತ್ತಮ ಕಾರ್ಯ. ಕೊಡಗಿನಲ್ಲಿ ಜೂನ್ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಗಾಲ ಇರುವುದರಿಂದ ಹಾಗೂ ಪ್ರಸ್ತುತ ಕೊರೊನಾ ಕೂಡ ಇರುವುದರಿಂದ ವಾರಿಯರ್ಸ್ಗಳಾದ ಆರೋಗ್ಯ, ಅಂಚೆ, ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯರ್ತರು, ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ಗಳು ಗ್ರಾಮದ ಮನೆಮನೆಗಳಿಗೆ ತೆರಳಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಹಾತೂರು ವನಭದ್ರಕಾಳಿ ದೇವಾಲಯದ ಕಾರ್ಯದರ್ಶಿ ಕೊಂಗೇಪAಡ ರವಿ, ತಕ್ಕಮುಖ್ಯಸ್ಥರು ಹಾಗೂ ಅಭಿವೃದ್ಧಿ ಸಮಿತಿಯ ಕೊಕ್ಕಂಡ ಪಿ ಅರ್ಜುನಾ, ಕೊಂಗೇಪAಡ ಸುಬ್ಬಯ್ಯ, ಕೇಳಪಂಡ ಟಿ. ಪೂವಯ್ಯ, ಪಿಡಿಓ ಉಸ್ಮಾ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.