ಕುಶಾಲನಗರ, ಜೂ. ೧೩: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಈ ವರ್ಷದ ಸೆಪ್ಟೆಂಬರ್ ಅಂತ್ಯದೊಳಗೆ ೨ ಹಂತದ ಲಸಿಕೆಗಳನ್ನು ನೀಡಿ ಮೂರನೇ ಕೋವಿಡ್ ಸೋಂಕಿನ ಅಲೆಯಿಂದ ರಾಜ್ಯವನ್ನು ಮುಕ್ತವಾಗಿಸಬೇಕೆಂದು ಕರ್ನಾಟಕ ರಕ್ಷಣಾವೇದಿಕೆ ಕೊಡಗು ಜಿಲ್ಲೆ ಹಲವೆಡೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ತಿಳಿಸಿದ್ದಾರೆ.
೨ನೇ ಅಲೆಯಲ್ಲಿ ೩೦೦೦೦ಕ್ಕೂ ಅಧಿಕ ಸಾವುಗಳು ರಾಜ್ಯದಲ್ಲಿ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇಂಥಹ ಅನಾಹುತ ಮರುಕಳಿಸದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ವೇದಿಕೆ ಒತ್ತಾಯಿಸಿದೆ.
ಉಚಿತ ಲಸಿಕೆ ಪ್ರತಿಯೊಬ್ಬರಿಗೂ ನೀಡುವಂತಾಗಬೇಕು ಕಾಲ ಮಿತಿಯೊಳಗೆ ಲಸಿಕೆ ನೀಡುವ ಅಭಿಯಾನ ಪೂರ್ಣಗೊಳ್ಳಬೇಕು. ಮನೆ ಮನೆಗೆ ಲಸಿಕೆ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ ಎಂದು ವೆಂಕಟೇಶ್ ಪೂಜಾರಿ ತಿಳಿಸಿದ್ದಾರೆ.