ಶನಿವಾರಸಂತೆ, ಜೂ. ೧೩: ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು. ಆರ್ಎಟಿ ಪರೀಕ್ಷೆಯಲ್ಲಿ ಒಟ್ಟು ೪ ಪಾಸಿಟಿವ್ ಪ್ರಕರಣಗಳು ಕಂಡುಬAದಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೨೩ ಸಕ್ರಿಯ ಪ್ರಕರಣಗಳು ಕಂಡು ಬಂದಿವೆ. ತ್ಯಾಗರಾಜ ಕಾಲೋನಿಯಲ್ಲಿ ೧೨, ಗುಂಡೂರಾವ್ ಬಡಾವಣೆಯಲ್ಲಿ ೮, ೧ನೇ ವಿಭಾಗದಲ್ಲಿ ೨, ೩ನೇ ವಿಭಾಗದಲ್ಲಿ ೧ ಪ್ರಕರಣ ಇವೆ.
ಪರೀಕ್ಷೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷೆಗೆ ಒಳಗಾದವರು ಮನೆಯಿಂದ ಹೊರಗೆ ಓಡಾಡಬಾರದು. ಪರೀಕ್ಷಾ ವರದಿ ಬಂದ ನಂತರವೇ ಸೋಂಕು ಇಲ್ಲವಾದರೆ ಮಾತ್ರ ಹೊರ ಹೋಗಬಹುದು ಎಂದು ಸೂಚಿಸಿದರು. ತಹಶೀಲ್ದಾರ್ ಗೋವಿಂದ್ ರಾಜ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತ್ಯಾಗರಾಜ ಕಾಲೋನಿಯ ಮನೆಮನೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪರೀಕ್ಷೆ ನಡೆದ ಸ್ಥಳಗಳಲ್ಲಿ ಶನಿವಾರಸಂತೆ ಹೋಬಳಿ ನೋಡಲ್ ಅಧಿಕಾರಿ ಬಾಲಕೃಷ್ಣ ರೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ, ಪಂಚಾಯಿತಿ ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷ ಎಸ್.ಆರ್. ಮಧು, ಆರೋಗ್ಯ ಇಲಾಖೆಯ ಡಾ. ರಾಜೇಶ್ವರಿ, ಸಿಬ್ಬಂದಿ, ಕಂದಾಯ ಪರಿವೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಿಗ ಸಂತೋಷ್ ಕುಮಾರ್, ಆಶಾ ಕಾರ್ಯಕರ್ತೆ ಉಷಾ ಜಯೇಶ್ ಹಾಜರಿದ್ದರು.