ಚೆಟ್ಟಳ್ಳಿ, ಜೂ. ೧೩: ಕಾಡಿನಿಂದ ನಾಡಿನತ್ತ ಆನೆಗಳು ಬರಬಾರದೆಂದು ರೈಲುಕಂಬಿ-ತಡೆಬೇಲಿಗಳ ಅಳವಡಿಕೆಯ ಕ್ರಮಕೈಗೊಳ್ಳಲಾಗುತ್ತಿದ್ದು ವೈಜ್ಞಾನಿಕವಲ್ಲದ ಕಳಪೆ ತಡೆಬೇಲಿ ನಿರ್ಮಿಸಿರುವುದರಿಂದ ಕಾಡಾನೆಗಳು ತಡೆಬೇಲಿಯನ್ನು ಮುರಿದು ಬರುತ್ತಿವೆ ಎಂದು ಸ್ಥಳೀಯ ಬೆಳೆಗಾರÀ ಚೇನಂಡ ಅಯ್ಯಪ್ಪ ಆರೋಪಿಸಿದ್ದಾರೆ.

ಸೋಮವಾರಪೇಟೆ ತಾಲೂಕಿಗೆ ಒಳಪಡುವ ವಾಲ್ನೂರು, ತ್ಯಾಗತ್ತೂರು, ಅಭ್ಯತ್‌ಮಂಗಲ ವ್ಯಾಪ್ತಿಯ ಸುತ್ತಲು ಕಾಡಾನೆಗಳಿಂದ ನಿರಂತರ ತೊಂದರೆಯಾಗುತ್ತಿದೆ. ಇದೇ ಜಾಗದಲ್ಲಿ ಕಳೆದ ತಿಂಗಳಷ್ಟೆ ಬೆಳಿಗ್ಗೆ ಹೊಳೆಗೆ ತೆರಳಿದ್ದ ಕಾರ್ಮಿಕ ನೊಬ್ಬನನ್ನು ಕಾಡಾನೆಯೊಂದು ಕೊಂದುಹಾಕಿತ್ತು. ನಿತ್ಯವೂ ಸುತ್ತಲಿನ ತೋಟಗಳಲ್ಲೆಲ್ಲ ಸುತ್ತಾಡುತ್ತಾ ಬೆಳೆ ಗಳನ್ನು ನಾಶಪ ಡಿಸುತ್ತಿವೆ. ಕಾಡಾನೆ ಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ರೈಲು ಕಂಬಿ, ತಡೆ ಬೇಲಿಗಳ ಅಳವಡಿಕೆಗೆ ತೀರ್ಮಾನಿಸಿದ್ದು, ಕೇಂದ್ರದಿAದ ಗುತ್ತಿಗೆದಾರರಿಗೆ ಟೆಂಡರ್ ಮುಖಾಂತರ ಕಾಮಗಾರಿಯನ್ನು ನೀಡಿದ್ದು, ಕೆಲವೆಡೆ ರೈಲುಕಂಬಿ- ತಡೆಬೇಲಿಯನ್ನು ಅಳವಡಿಸಲಾಗುತ್ತಿದೆ. ಕಾಡಾನೆೆಗಳು, ಈಗಾಗಲೇ ನೂತನವಾಗಿ ನಿರ್ಮಿಸಿರುವ ತಡೆಬೇಲಿ ಹಾಗೂ ರೈಲು ಕಂಬಿಗಳನ್ನು ನಾಶಮಾಡಿ ನಾಡಿನತ್ತ ಲಗ್ಗೆ ಇಡುತ್ತಿವೆ. ಕಬ್ಬಿಣ ರೈಲು ಕಂಬಿಗಳ ಅಡಿಪಾಯಕ್ಕೆ ಹಾಕಿರುವ ಕಾಂಕ್ರಿಟ್ ಹಾಗೂ ಕಂಬಗಳನ್ನು ಸೇರಿಸಲು ಹಾಕಿರುವ ಬೋಲ್ಟ್ಗಳು ಕಿತ್ತು ಬರುತ್ತಿವೆ. ವೈಜ್ಞಾನಿಕವಾಗಿ ನಿರ್ಮಿಸ ದಿರುವ ಕಾರಣ ಈ ರೀತ ಆಗುತ್ತಿದೆ ಎಂದು ಚೇನಂಡ ಅಯ್ಯಪ ಆರೋಪಿಸಿದ್ದಾರೆ. ರೈಲು ಕಂಬಿ ಗಳನ್ನು ಜೋಡಿಸಲು ಬಳಸಿದ ನಟ್ ಬೋಲ್ಟ್ಗಳನ್ನು ಸರಿಯಾಗಿ ಬಿಗಿ ಗೊಳಿಸದ ಕಾರಣ ಕಾಡಾನೆಗಳು ದಾಟುವ ರಭಸಕ್ಕೆ ಬೋಲ್ಟ್ ತುಂಡಾಗುತ್ತಿವೆ. ಇನ್ನುಳಿದ ರೈಲುಕಂಬಿ, ತಡೆಬೇಲಿ ಅಳವಡಿಕೆಯ ಕಾರ್ಯಕ್ಕೆ ಗ್ಯಾಸ್‌ವೆಲ್ಡಿಂಗ್‌ಗೆ ಆಕ್ಸಿಜನ್ ಸಿಗದಿರುವುದು ಹಾಗೂ ಕೊರೊನಾ ಹಿನ್ನೆಲೆ ಕಾರ್ಮಿಕರ ಕೊರತೆಯಿಂದ ಕಾಮಗಾರಿ ತಡವಾಗುತ್ತಿದೆ.

ಸೋಲಾರ್ ಬೇಲಿ ನಿರ್ಮಾಣಕ್ಕೆ ಸಿದ್ಧತೆ

ಕಾಡಾನೆಗಳು ನಾಡಿನತ್ತ ಬರುವುದನ್ನು ನಿಯಂತ್ರಿಸಲು ರೈಲುಕಂಬಿ-ತಡೆಬೇಲಿಯ ಒಳಗೆ ಸೋಲಾರ್‌ಬೇಲಿ ಕಾಮಗಾರಿಗೆ ಸಾಮಗ್ರಿಗಳು ಬಂದಿದ್ದು, ಒಂದೆರಡು ದಿನಗಳಲ್ಲಿ ಸೋಲಾರ್ ಬೇಲಿ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಆರ್‌ಎಫ್‌ಓ ಅನನ್ಯಕುಮಾರ್ ತಿಳಿಸಿದ್ದಾರೆ. ವಾಲ್ನೂರು ಸುತ್ತಮುತ್ತ ಕಾಡಾನೆಗಳ ಜೊತೆಗೆ ಹುಲಿಗಳ ಓಡಾಟ ಕಂಡುಬರುತ್ತಿರುವ ಬಗ್ಗೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ತಕ್ಷಣವೇ ಸ್ಪಂದಿಸಿದರೂ ಕಾಡು ಪ್ರಾಣಿಗಳಿಂದ ಶಾಶ್ವತ ಮುಕ್ತಿಹೊಂದಲು ಈವರೆÀಗೂ ಸಾಧ್ಯವಾಗಿಲ್ಲವೆಂದು ಸ್ಥಳಿಯರು ಹೇಳುತ್ತಾರೆ.

-ಪುತ್ತರಿರ ಕರುಣ್ ಕಾಳಯ್ಯ