ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀಡುವುದಕ್ಕೆ ರಕ್ತದಾನ ಎನ್ನುವರು. ಕೇವಲ ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತ ನೀಡಲು ಸಾಧ್ಯ. ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತçಚಿಕಿತ್ಸೆಗಳ ಸಂದರ್ಭಗಳಲ್ಲಿ ಅಲ್ಲದೇ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಮಹಿಳೆಯರು, ಥ್ಯಾಲಸೀಮಿಯಾ, ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಭಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ ೩೫ ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ೩೫ ದಿನಗಳ ನಂತರ ಅದು ಉಪಯೋಗಕ್ಕೆ ಬರುವುದಿಲ್ಲ.

ರಕ್ತದಾನ ಮಾಡುವುದರಿಂದ ಹೃದಯಾಘಾತದ ಸಂಭವ ಕಡಿಮೆಯಾಗುವುದು, ರಕ್ತದಲ್ಲಿ ಕೊಲೆಸ್ಟಾçಲ್ ಅಂಶ ಕಡಿಮೆಯಾಗುವುದು, ಇತರರ ಜೀವ ಉಳಿಸಿದಂತಾಗುವುದು. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಉತ್ತೇಜಿಸುತ್ತದೆ, ದೇಹದಲ್ಲಿ ಹೊಸ ರಕ್ತಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ. ಬದಲಾಗಿ ಇದರಿಂದ ದೇಹಕ್ಕೆ ಅನುಕೂಲ ಪರಿಣಾಮಗಳಾಗುತ್ತವೆ. ರಕ್ತದಾನ ಮಾಡಿದರೆ ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಅಂಗಗಳು ಸಕ್ರಿಯವಾಗುತ್ತವೆ, ಇದು ಹೆಚ್ಚಿನ ಆರೋಗ್ಯ ತರುತ್ತದೆ. ಕೆಲವರಲ್ಲಿ ಕೆಂಪುರಕ್ತಕಣಗಳಿAದ ಅತಿಯಾಗಿ ಸಮಸ್ಯೆ ಎದುರಾಗುತ್ತದೆ. ಅವರಿಗಂತೂ ರಕ್ತದಾನ ಮತ್ತಷ್ಟು ಉಪಯುಕ್ತ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಂದು ಬಾರಿ ರಕ್ತದಾನ ಮಾಡುವದರಿಂದ ೪ ಜನರ ಜೀವ ಉಳಿಸಬಹುದಾಗಿದೆ. ರಕ್ತದ ಭಾಗಗಳಾದ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಕ್ರಾಯೂ (ಕೆಂಪು ರಕ್ತಕಣ, ಬಿಳಿ ರಕ್ತಕಣ ಮತ್ತು ಪ್ಲೇಟ್‌ಲೆಟ್‌ಗಳನ್ನು ಬೇರ್ಪಡಿಸಿ ಉಳಿಯುವ ಕಣಗಳೆಂದರೆ ಕ್ರಾಯೂ. ಇದು ರಕ್ತಸ್ರಾವವನ್ನು ತಡೆಗಟ್ಟುವದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ) ಕಣಗಳನ್ನು ಬೇರ್ಪಡಿಸಿ, ರೋಗಿಗಳ ಅವಶ್ಯಕತೆಯ ಅನುಸಾರವಾಗಿ ರಕ್ತದ ಪರಿಕರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ರಕ್ತದಾನ ಮಾಡುವದರಿಂದ ೪ ಜೀವಗಳನ್ನು ಉಳಿಸಬಹುದು.

ಹೆಣ್ಣು - ಗಂಡೆAಬ ಭೇದವಿಲ್ಲದೆ ೧೮ ರಿಂದ ೬೦ ವರ್ಷ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಿಯ ದೇಹದ ತೂಕ ೪೫ ಕೆ.ಜಿ.ಗಿಂತ ಹೆಚ್ಚಿರಬೇಕು. ಗಂಡಸರು ೩ ತಿಂಗಳಿಗೆ ಒಮ್ಮೆ, ಹೆಂಗಸರು ೪ ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ಕನಿಷ್ಟ ೧೨.೫ ಗ್ರಾಂ.ಗಿAತ ಹೆಚ್ಚಿರಬೇಕು.

ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದರ ಜೊತೆಗೆ ಅದು ಈ ಜಗತ್ತಿನಲ್ಲಿ ಮಾನವೀಯತೆಯ ಇರುವನ್ನು ನೆನಪಿಸುತ್ತದೆ. ನಮ್ಮಿಂದ ರಕ್ತದಾನ ಮಾಡುವುದಕ್ಕೆ ಸಾಧ್ಯವಿದೆ ಎಂದಾದರೆ ನಾವದನ್ನು ಮಾಡಬೇಕು. ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸಬಹುದು. ಇದರಿಂದಾಗಿ ಹಲವಾರು ಜನರು ಸಾವಿನಿಂದ ಪಾರಾಗಬಹುದಾಗಿದೆ. ರಕ್ತದಾನಿಗಳು ಮತ್ತೊಬ್ಬರ ಪ್ರಾಣ ಉಳಿಸುವ ಜೀವರಕ್ಷಕರಾಗಿದ್ದಾರೆ.

- ಕಾನತ್ತಿಲ್ ರಾಣಿ ಅರುಣ್, ಮಡಿಕೇರಿ.