ಸುಂಟಿಕೊಪ್ಪ, ಜೂ. ೧೩: ಸುಂಟಿಕೊಪ್ಪ ಮದುರಮ್ಮ ಬಡಾವಣೆಯ ಪಂಪ್‌ಹೌಸ್ ರಸ್ತೆಯ ೧ನೇ ಅಂಗನವಾಡಿ ಕೇಂದ್ರ ಸುತ್ತಲೂ ಬೆಳೆದು ನಿಂತಿದ ಕಾಡು ಗಿಡ ಗಂಟಿಗಳನ್ನು ಪಂಪ್‌ಹೌಸ್ ರಸ್ತೆಯ ಯುವಕರ ತಂಡವು ಕಡಿದು ಶ್ರಮದಾನ ಗೊಳಿಸಿದರು. ಪಂಪ್‌ಹೌಸ್ ರಸ್ತೆಯ ನಿವಾಸಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್ ಈ ಭಾಗದ ಯುವಕರೊಂದಿಗೆ ಸೇರಿ ಪಂಪ್ ರಸ್ತೆಯ ೧ ಅಂಗನವಾಡಿ ಕೇಂದ್ರದ ಸುತ್ತಲೂ ಬೆಳೆದು ನಿಂತ ಕಾಡು ಗಿಡ ಗಂಟಿ ಗಳನ್ನು ಕಡಿದು ಶ್ರಮದಾನ ಕಾರ್ಯವನ್ನು ನಡೆಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಸೆಲಿನಾ ಜೆಫ್ರಿ, ಆಶಾ ಕಾರ್ಯಕರ್ತೆ ಪಾರ್ವತಿ, ಆಟೋ ಚಾಲಕರ ಸಂಘದ ಸಂಘಟನಾ ಕಾರ್ಯದರ್ಶಿ ಷಂಶು ಮತ್ತಿತರರು ಇದ್ದರು.